ಶಿಫ್ಟ್ ಮುಗಿಯಿತೆಂದು ಎಮರ್ಜೆನ್ಸಿ ಲ್ಯಾಂಡ್ ಆದ ವಿಮಾನವನ್ನು ಚಲಾಯಿಸಲು ನಿರಾಕರಿಸಿದ ಪೈಲಟ್
ಪಾಕಿಸ್ತಾನದ ಪೈಲೆಟ್ ಒಬ್ಬ ತನ್ನ ಶಿಪ್ಟ್ ಮುಗಿಯಿತು ಎಂದು ಎಮೆರ್ಜೆನ್ಸಿ ಲ್ಯಾಂಡ್ ಆದ ವಿಮಾನವನ್ನು ಚಲಾಯಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದೀಗ ಈ ಸುದ್ದಿ ಜಗತ್ತಿನಾದ್ಯಂತ ವೈರಲ್ ಆಗಿದೆ.
ಶಿಫ್ಟ್ ಅವಧಿ ಮುಗಿದ ಮೇಲೆ ಸಾಮಾನ್ಯವಾಗಿ ಕೆಲಸ ಮಾಡಲು ಯಾರಿಗೂ ಮನಸಿರುವುದಿಲ್ಲ. ಆದರೆ ಕೆಲವೊಮ್ಮೆ ಇತರರ ಸುರಕ್ಷತೆ ದೃಷ್ಟಿಯಿಂದ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಅಂತಹ ಉದ್ಯೋಗಗಳಲ್ಲಿ ಪ್ರಯಾಣಿಕರ ಸುರಕ್ಷತೆ ಕಾಪಾಡುವ ಪೈಲಟ್ (Pilot) ಗಳ ಕೆಲಸವೂ ಒಂದು. ಇತ್ತೀಚೆಗೆ ಪಾಕಿಸ್ತಾನದ ಪೈಲಟ್ ಒಬ್ಬ ತನ್ನ ಶಿಪ್ಟ್(Shift) ಮುಗಿಯಿತು ಎಂದು ಎಮೆರ್ಜೆನ್ಸಿ ಲ್ಯಾಂಡ್ (Emergency Landing) ಆದ ವಿಮಾನವನ್ನು ಚಲಾಯಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದೀಗ ಈ ಸುದ್ದಿ ಜಗತ್ತಿನಾದ್ಯಂತ ವೈರಲ್ ಆಗಿದೆ.
ರಿಯಾದ್ನಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗೆ ಹೊರಟಿದ್ದ ಪಾಕಿಸ್ತಾನ ಏರ್ಲೈನ್ಸ್ನ (Pakistan International Airlines) PK-9754 ವಿಮಾನ ಸೌದಿ ಅರೇಬಿಯಾದ ದಮ್ಮಂನಲ್ಲಿ ಹವಾಮಾನ ವೈಪರಿತ್ಯದಿಂದ ತುರ್ತು ಭೂ ಸ್ಷರ್ಶ ಮಾಡಿತ್ತು. ವಿಮಾನವನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದನು. ನಂತರ ಮತ್ತೆ ಪ್ರಯಾಣವನ್ನು ಆರಂಭಿಸುವ ಹೊತ್ತಿನಲ್ಲಿ ಪೈಲಟ್ ನನ್ನ ಶಿಪ್ಟ್ ಮುಗಿದಿದೆ ಎಂದು ವಿಮಾನವನ್ನು ಮುಂದೆ ತೆಗೆದುಕೊಂಡು ಹೋಗಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಗಲಾಟೆ ಎಬ್ಬಿಸಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಏರ್ಪೋರ್ಟ್ ಸೆಕ್ಯುರಿಟೊ ಸ್ಥಳಕ್ಕಾಗಮಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಪ್ರಯಾಣಿಕರಿಗೆ ಹೊಟೇಲ್ವೊಂದರಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.
ಘಟನೆಯ ಬಳಿಕ ಪಾಕಿಸ್ತಾನ ಏರ್ಲೈನ್ಸ್ ಬದಲಿ ಪೈಲಟ್ಅನ್ನು ವ್ಯವಸ್ಥೆ ಮಾಡುವುದಾಗ ಹೇಳಿತ್ತು. ಆದರೆ ಅದು ಸಾಧ್ಯವಾಗದೆ, ಅಂತಿಮವಾಗಿ ಬೇರೆ ವಿಮಾನದ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಪಾಕಿಸ್ತಾನಿದ ಪೈಲಟ್ ಒಬ್ಬರು ನಕಲಿಪ್ರಮಾಣಪತ್ರ ನೀಡಿ ಸುದ್ದಿಯಾಗಿದ್ದರು. ಇದೀಗ ಶಿಪ್ಟ್ ವಿಷಯದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ;
ಕಾರ್ ಖರೀದಿಸಿ ಶೋ ರೂಮ್ನಲ್ಲೇ ಅಪಘಾತ ಮಾಡಿಕೊಂಡ ವ್ಯಕ್ತಿ: ವೈರಲ್ ಆದ ಜಖಂಗೊಂಡ ಕಾರಿನ ಫೋಟೊ
Published On - 2:51 pm, Fri, 21 January 22