AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಮಾಸ್ಕ್​ ಧರಿಸುವಂತೆ ವ್ಯಾಕ್ಸಿನ್​ ವಿರೋಧಿಗಳ ವಿರುದ್ಧ ಲೈವ್​ನಲ್ಲೇ ಕಿರುಚಾಡಿದ ನ್ಯೂಸ್​ ಆ್ಯಂಕರ್​

ಟಿವಿ ಕಾರ್ಯಕ್ರಮವೊಂದರಲ್ಲಿ ಆ್ಯಂಕರ್ ಒಬ್ಬರು ಪ್ಯಾನಲ್​ನಲ್ಲಿ ಚರ್ಚೆಗೆ ಕುಳಿತ ವ್ಯಾಕ್ಸಿನ್​ ವಿರೋಧಿಗಳ ಬಳಿ ಮಾಸ್ಕ್​ ಹಾಕಿಕೊಳ್ಳುವಂತೆ ಕೂಗಿದ್ದಾರೆ. ಮೆಕ್ಸಿಕೋದ ನ್ಯೂಸ್​​ ಚಾನೆಲ್ ನ ನೇರಪ್ರಸಾರದ ಸಮಯದಲ್ಲಿ ಘಟನೆ ನಡೆದಿದೆ.

ಫೇಸ್​ಮಾಸ್ಕ್​ ಧರಿಸುವಂತೆ ವ್ಯಾಕ್ಸಿನ್​ ವಿರೋಧಿಗಳ ವಿರುದ್ಧ ಲೈವ್​ನಲ್ಲೇ ಕಿರುಚಾಡಿದ ನ್ಯೂಸ್​ ಆ್ಯಂಕರ್​
ನೇರಪ್ರಸಾರದಲ್ಲಿ ಕಿರುಚಾಡಿದ ಆ್ಯಂಕರ್
TV9 Web
| Edited By: |

Updated on: Jan 21, 2022 | 1:04 PM

Share

ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ (Corona) ಕಾಡುತ್ತಿದೆ, ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೆಲವರು ಮಾಸ್ಕ್​ (Mask) ಹಾಕದೇ, ವ್ಯಾಕ್ಸಿನ್​ ತೆಗೆದುಕೊಳ್ಳದೆ  ಓಡಾಡುತ್ತಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ಆ್ಯಂಕರ್ (Anchor)​ ಒಬ್ಬರು ಪ್ಯಾನಲ್​ನಲ್ಲಿ ಚರ್ಚೆಗೆ ಕುಳಿತ ವ್ಯಾಕ್ಸಿನ್​ ವಿರೋಧಿಗಳ ಬಳಿ ಮಾಸ್ಕ್​ ಹಾಕಿಕೊಳ್ಳುವಂತೆ ಕೂಗಿದ್ದಾರೆ. ಮೆಕ್ಸಿಕೋದ ನ್ಯೂಸ್​​ ಚಾನೆಲ್ (News channel)​ನ ನೇರಪ್ರಸಾರದ ಸಮಯದಲ್ಲಿ ಕ್ಯಾಮರಾ ಎದುರು ನ್ಯೂಸ್​ ಆ್ಯಂಕರ್ ಕಿರುಚಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಟೈಮ್ಸ್​ ನೌ ವರದಿ ಪ್ರಕಾರ, ಮೆಕ್ಸಿಕೋದ ಟೆಲಿಡಿಯಾರಿಯೊ ಗ್ವಾಡಲಜರಾ ಚಾನೆಲ್​ನ ಲಿಯೊನಾರ್ಡೊ ಶ್ವೆಬೆಲ್ ಎನ್ನುವ ಆ್ಯಂಕರ್​ ಆ್ಯಂಟಿ ವ್ಯಾಕ್ಸರ್ಸ್​ಗಳ ಬಳಿ ನೀವು ವ್ಯಾಕ್ಸಿನ್​ ವಿರೋಧಿಗಳಾಗಿದ್ದರೆ ನೀವು ಮೂರ್ಖರು. ಮೊದಲು ಫೇಸ್​ ಮಾಸ್ಕ್​ ಹಾಕಿಕೊಳ್ಳಿ ಎಂದು ಕಿರುಚಾಡಿದ್ದಾರೆ. ಲಿಯೊನಾರ್ಡೊ ಶ್ವೆಬೆಲ್ ಈ ಹಿಂದೆ ಅವರ ಸಾಮಾಜಿಕ ಜಾಲತಾಣದಲ್ಲಿಯೂ ಕೊರೋನಾ ಹಾಗೂ ಮಾಸ್ಕ್​ ಧರಿಸುವುದರ ಕುರಿತು ಅರಿವು ಮೂಡಿಸಲು ವಿಡಿಯೋ ಮಾಡಿ ಹಂಚಿಕೊಂಡದ್ದರು. ಈ ಬಾರಿ ಅವರು  ನೇರಪ್ರಸಾರ ಕಾರ್ಯಕ್ರಮದಲ್ಲಿಯೇ ಕೂಗಾಡಿದ್ದು ವಿಡಿಯೋ ವೈರಲ್​ ಅಗಿದೆ. ವಿಡಿಯೋದಲ್ಲಿ ಅವರು ನಾನು ನನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಕುರಿತು ಹೇಳಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೆಲವೊಮ್ಮೆ ಜನರನ್ನು ಮಾತು ಕೇಳಿಸಲು ಕೂಗಾಡಬೇಕು, ದಯವಿಟ್ಟು ಮಾಸ್ಕ್​ ಧರಿಸಿ ಎಂದಿದ್ದಾರೆ.

ಜಗತ್ತಿನಲ್ಲಿ ಹಲವು ದೇಶಗಳು ಲಕ್ಷಾಂತರ ಜನರನ್ನು ಮಾರಕ ರೋಗದಿಂದ ಕಳೆದುಕೊಂಡಿದೆ. ಅನೇಕ ಕೆಟ್ಟ ದಿನಗಳನ್ನು ಅನುಭವಿಸುತ್ತಿದೆ. ಎಂದ ಅವರು ಮುಂದುವರೆದು ವ್ಯಾಕ್ಸಿನ್​ ತೆಗದುಕೊಳ್ಳದೆ ರೋಗವನ್ನು ಹರಡಿ ಇನ್ನಷ್ಟು ಸಮಸ್ಯೆ ಉಂಟುಮಾಡುತ್ತಿದ್ದಾರೆ ಎಂದು ವ್ಯಾಕ್ಸಿನ್​ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ಮೆಕ್ಸಿಕೋದಲ್ಲಿ  ಈವರೆಗೆ 4.39 ಮಿಲಿಯನ್​ ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದು, 3,01,000 ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶದಲ್ಲಿರುವ 149 ಮಿಲಿಯನ್​ ಜನರಲ್ಲಿ ಕೇವಲ 56 ಪ್ರತಿಶತದಷ್ಟು ಜನರು ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಟಿವಿ ಚಾನೆಲ್​ನ ನೇರಪ್ರಸಾರದಲ್ಲಿ ವರದಿ ಮಾಡುತ್ತಿರುವಾಗ ವರದಿಗಾರ್ತಿಗೆ ಗುದ್ದಿದ ಕಾರು

Follow Us
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!