ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅಪಘಾತ ಮಾಡಿಕೊಂಡ ವ್ಯಕ್ತಿ: ವೈರಲ್​ ಆದ ಜಖಂಗೊಂಡ ಕಾರಿನ ಫೋಟೊ

ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅಪಘಾತ ಮಾಡಿಕೊಂಡ ವ್ಯಕ್ತಿ: ವೈರಲ್​ ಆದ ಜಖಂಗೊಂಡ ಕಾರಿನ ಫೋಟೊ
ಅಪಘಾತವಾದ ಕಾರು

ಹೊಸ ಕಾರನ್ನು ಖರೀದಿಸಿದ ವ್ಯಕ್ತಿ ಮಹೀಂದ್ರಾ ಶೋ ರೂಮ್​ನಿಂದ  ತೆಗೆದುಕೊಂಡು ಹೋಗುವ ವೇಳೆ ನಿಯಂತ್ರಣ ತಪ್ಪಿ  ಶೋರೂಮ್​ನ ಗ್ಲಾಸ್​ ಬಾಗಿಲುಗಳಿಗೆ ಗುದ್ದಿ ಸೀದಾ ರಸ್ತೆಯ ಬಳಿ ಹೋದ ಘಟನೆ ನಡೆದಿದೆ.

TV9kannada Web Team

| Edited By: Pavitra Bhat Jigalemane

Jan 21, 2022 | 1:37 PM


ಹೊಸ​ ಕಾರ್​ ಖರೀದಿಸಿ ಅದನ್ನು ಓಡಿಸಲು ಬರದೆ ಶೋರೂಮ್​ನ ಗ್ಲಾಸ್​ಅನ್ನೇ ಒಡೆದು ಹಾಕಿದ ಘಟನೆ ಬೆಂಗಳೂರಿನ ಮಹೀಂದ್ರಾ ಶೋರೂಮ್​ನಲ್ಲಿ ನಡೆದಿದೆ. ಹೊಸ ಕಾರನ್ನು ಖರೀದಿಸಿದ ವ್ಯಕ್ತಿ ಮಹೀಂದ್ರಾ ಶೋ ರೂಮ್​ನಿಂದ  ತೆಗೆದುಕೊಂಡು ಹೋಗುವ ವೇಳೆ ನಿಯಂತ್ರಣ ತಪ್ಪಿ  ಶೋರೂಮ್​ನ ಗ್ಲಾಸ್​ ಬಾಗಿಲುಗಳಿಗೆ ಗುದ್ದಿ ಸೀದಾ ರಸ್ತೆಯ ಬಳಿ ಹೋದ ಘಟನೆ ನಡೆದಿದೆ. ವರದಿಯ ಪ್ರಕಾರ ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದರ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿವ ವೈರಲ್​ ಆಗಿದೆ.

Cartoq  ವರದಿಯ ಪ್ರಕಾರ ಈ ಅಪಘಾತ ಹೇಗೆ ಸಂಭವಿಸಿದೆ ಎನ್ನುವುದು ತಿಳಿದಿಲ್ಲ. ಅಪಘಾತದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಕಾರಿನಲ್ಲಿ ಕುಳಿತ ಡ್ರೈವರ್​ ಕಾರನ್ನು ಕಟ್ಟಡದ ಅಂಚಿಗೆ ತಂದು ನಿಲ್ಲಿಸಿದ್ದು, ಕಾರು ಪೂರ್ತಿಯಾಗಿ ಜಖಂಗೊಂಡಿದೆ. ಅಲ್ಲಿ ನರೆದಿದ್ದ ಶೋರೂಮ್​ ಸಿಬ್ಬಂದಿ  ಕಾರನ್ನು ಹಿಂದಕ್ಕೆಳೆಯಲು ಪ್ರಯತ್ನಿಸುವುದನ್ನು ಕಾಣಬಹುದು.

ಈ ರೀತಿ ಕಾರಿನ ಶೋರೂಮ್​ನಲ್ಲಿ ಅಪಘಾತ ಸಂಭವಿಸುರುವುದು ಇದೇ ಮೊದಲಲ್ಲ. ಈ ಹಿಂದೆ ಹೈದ್ರಾಬಾದ್​ನಲ್ಲಿ ಕಾರನ್ನು ಸರಿಯಾಗಿ ಓಡಿಸಲು ಬರದ  ವ್ಯಕ್ತಿಯೊಬ್ಬ ಕಾರನ್ನು ಶೋ ರೂಮ್​ನಿಂದ ತೆಗೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿ, ಅದೃಷ್ಟವಶಾತ್​ ಚಾಲಕ ಬದುಕಳಿದ ಘಟನೆ ನಡೆದಿತ್ತು. ಇದರ ವಿಡಯೋ ಕೂಡ ಕೆಲವು ದಿನಗಳ ಹಿಂದೆ ವೈರಲ್​ ಆಗಿತ್ತು. ಇದೀಗ ಬೆಂಗಳೂರಿನ ಘಟನೆಯೂ ವೈರಲ್​ ಆಗಿದೆ. ಆದರೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:

ಫೇಸ್​ಮಾಸ್ಕ್​ ಧರಿಸುವಂತೆ ವ್ಯಾಕ್ಸಿನ್​ ವಿರೋಧಿಗಳ ವಿರುದ್ಧ ಲೈವ್​ನಲ್ಲೇ ಕಿರುಚಾಡಿದ ನ್ಯೂಸ್​ ಆ್ಯಂಕರ್​

Follow us on

Related Stories

Most Read Stories

Click on your DTH Provider to Add TV9 Kannada