ತನ್ನ ಆದಾಯದ ಹಣವನ್ನು ಗಾಯಕಿ ಲತಾ ಮಂಗೇಶ್ಕರ್​ ಚಿಕಿತ್ಸೆಗೆ ನೀಡಿದ ಆಟೋ ಚಾಲಕ

ತನ್ನ ಆದಾಯದ ಹಣವನ್ನು ಗಾಯಕಿ ಲತಾ ಮಂಗೇಶ್ಕರ್​ ಚಿಕಿತ್ಸೆಗೆ ನೀಡಿದ ಆಟೋ ಚಾಲಕ
ಆಟೋ ಮೇಲೆ ಲತಾ ಮಂಗೇಶ್ಕರ್​ ಭಾವಚಿತ್ರ

ಮುಂಬೈನ ಆಟೋ ಚಾಲಕನೊಬ್ಬ ತನ್ನ ಸಂಪಾದನೆಯನ್ನು ಲತಾ ಅವರ ಚಿಕಿತ್ಸೆಗೆ ನೀಡಿದ್ದಾರೆ. ಸತ್ಯವಾನ್ ಗೀತೆ ಎನ್ನುವ ಮುಂಬೈನ ಆಟೋ ಚಾಲಕ  ಲತಾ ಮಂಗೇಶ್ಕರ್​ ಅವರ ಚಿಕಿತ್ಸೆಗೆ ಹಣ ನೀಡಿದ್ದಾರೆ.

TV9kannada Web Team

| Edited By: Pavitra Bhat Jigalemane

Jan 21, 2022 | 4:57 PM

ಲತಾ ಮಂಗೇಶ್ಕರ್​ ಲಕ್ಷಾಂತರ ಜನರ ನೆಚ್ಚಿನ ಗಾಯಕಿ. ಅದೆಷ್ಟೋ ಜನರ ಪೇವರೇಟ್​ ಹಾಡುಗಳಿಗೆ ಜೀವ ತುಂಬಿದವರು. ಇದೀಗ ಕೋರೋನಾಕ್ಕೆ ತುತ್ತಾಗಿ ಮುಂಬೈ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲತಾ ಅವರ ಅಭಿಮಾನಿಗಳು ಅವರು ಗುಣಮುಖರಾಗುವಂತೆ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ಮುಂಬೈನ ಆಟೋ ಚಾಲಕನೊಬ್ಬ ತನ್ನ ಸಂಪಾದನೆಯನ್ನು ಲತಾ ಅವರ ಚಿಕಿತ್ಸೆಗೆ ನೀಡಿದ್ದಾರೆ. ಸತ್ಯವಾನ್ ಗೀತೆ ಎನ್ನುವ ಮುಂಬೈನ ಆಟೋ ಚಾಲಕ  ಲತಾ ಮಂಗೇಶ್ಕರ್​ ಅವರ ಚಿಕಿತ್ಸೆಗೆ ಹಣ ನೀಡಿದ್ದಾರೆ.

ಲತಾ ಮಂಗೇಶ್ಕರ್​ ಅವರ ದೊಡ್ಡ ಅಭಿಮಾನಿಯಾಗಿರುವ ಸತ್ಯವಾನ್ ಗೀತೆ ತಮ್ಮ ಆಟೋದ ಮೇಲೆಯೂ ಲತಾ ಅವರ ಭಾವಚಿತ್ರವನ್ನು ಹಾಕಿಕೊಂಡಿದ್ದಾರೆ. ಲತಾ ಅವರನ್ನು ದೇವಿ ಸರಸ್ವತಿಯಂತೆ ಕಾಣುವ ಸತ್ಯವಾನ್​ ತನ್ನ ಆಟೋವನ್ನು ಅವರ ಭಾವಚಿತ್ರಗಳಿಂದಲೇ ಅಲಂಕರಿಸಿಕೊಂಡಿದ್ದಾರೆ. ಭಾವಚಿತ್ರಗಳೊಂದಿಗೆ ಲತಾ ಅವರ ಹಾಡಿನ ಸಾಲುಗಳನ್ನು ಬರೆದಿದ್ದು ಅವರು ಬೇಗ ಗುಣಮುಖರಾಗುವಂತೆ ಕೇಳಿ ಬರೆದುಕೊಂಡಿದ್ದಾರೆ.

latha mangeshkar

ಕೊರೋನಾ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಅವರು ಕಳೆದ 10 ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಮುಂದೆವರೆದಿದೆ ಎಂದು ವೈದ್ಯರು ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಹೃದಯ ಕದ್ದ ಹುಡುಗಿಯ ಅಮ್ಮನಿಗೆ ಕಿಡ್ನಿ ಕೊಟ್ಟ ಪ್ರೇಮಿ; ಒಂದೇ ತಿಂಗಳಲ್ಲಿ ಬೇರೊಬ್ಬನನ್ನು ಮದುವೆಯಾದ ಯುವತಿ!

Follow us on

Related Stories

Most Read Stories

Click on your DTH Provider to Add TV9 Kannada