ಅಸ್ತವ್ಯಸ್ತಗೊಂಡ ವಾರ್ಡ್​ರೋಬ್ ಸರಿಪಡಿಸಿ ಕೈತುಂಬಾ ಸಂಪಾದನೆ ಮಾಡುತ್ತಿರುವ 19 ವರ್ಷದ ಯುವತಿ; ತಿಂಗಳಿಗೆ ಗಳಿಸುವ ಹಣವೆಷ್ಟು?

ಅಸ್ತವ್ಯಸ್ತಗೊಂಡ ವಾರ್ಡ್​ರೋಬ್ ಸರಿಪಡಿಸಿ ಕೈತುಂಬಾ ಸಂಪಾದನೆ ಮಾಡುತ್ತಿರುವ 19 ವರ್ಷದ ಯುವತಿ; ತಿಂಗಳಿಗೆ ಗಳಿಸುವ ಹಣವೆಷ್ಟು?
ವಾರ್ಡ್​​ರೋಬ್ ಮೊದಲು ಮತ್ತು ನಂತರ

ಬ್ರಿಟನ್​ನ 19 ವರ್ಷದ ಯುವತಿಯೊಬ್ಬಳು ಅಸ್ತವ್ಯಸ್ತಗೊಂಡ ವಾರ್ಡ್​ರೋಬ್ ಕ್ಲೀನ್ ಮಾಡುವ ಮುಖಾಂತರವೇ ಕೈತುಂಬಾ ಸಂಬಳ ಎಣಿಸುತ್ತಿದ್ದಾಳೆ. ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ.

TV9kannada Web Team

| Edited By: shivaprasad.hs

Jan 22, 2022 | 9:05 AM

ವಾರ್ಡ್​​ರೋಬ್​ನಲ್ಲಿ ಬಟ್ಟೆಗಳನ್ನು ಜೋಡಿಸುವುದು ಒಂದು ಕಲೆ ಮಾತ್ರವಲ್ಲ, ಉದ್ಯೋಗವೂ ಹೌದು! ಅದು ಹೇಗೆ ಅಂತೀರಾ? ಇಲ್ಲೊಂದು ಅಚ್ಚರಿಯ ಕತೆಯನ್ನು ಬ್ರಿಟನ್​ನ ಡೈಲಿ ಮೇಲ್ ವರದಿ ಮಾಡಿದೆ. 19 ವರ್ಷದ ಯುವತಿಯೋರ್ವಳು ಅಸ್ತವ್ಯಸ್ತವಾಗಿರುವ ವಾರ್ಡ್​​ರೋಬ್​ಗಳನ್ನು ಸರಿಪಡಿಸಿಯೇ ತನ್ನ ಸಂಪಾದನೆ ಮಾಡುತ್ತಿದ್ದಾಳೆ.​ ಅದಕ್ಕೆ ದೊಡ್ಡ ಮೊತ್ತವನ್ನೂ ಪಡೆಯುತ್ತಿದ್ದಾಳೆ. ಬ್ರಿಟನ್​ನ ಲೀಸೆಸ್ಟರ್​ನ ಯಲ್ಲಾ ಮೆಕ್​ಮಾಹನ್ ಈ ವಿಶಿಷ್ಟ ಸಾಧನೆಯಿಂದ ಗುರುತಿಸಿಕೊಂಡಿರುವ ಯುವತಿ. ಪ್ರತೀದಿನ ಮೂರರಿಂದ ಒಂಬತ್ತು ಗಂಟೆಗಳ ಕಾಲ ಸಮಯವನ್ನು ಅವರು ಕೆಲಸಕ್ಕೆ ಮುಡಿಪಾಗಿಡುತ್ತಾರಂತೆ. ಅದರಲ್ಲಿ ಅವರು ಅಸ್ತವ್ಯಸ್ತವಾಗಿರುವ ವಾರ್ಡ್​ರೋಬ್​ಅನ್ನು ಸರಿಪಡಿಸುವುದು ಹಾಗೂ ಬಟ್ಟೆಗಳನ್ನು ಬಣ್ಣದ ಆಧಾರದಲ್ಲಿ ಜೋಡಿಸಿಡುವ ಕೆಲಸ ಮಾಡುತ್ತಾರೆ. ಇದರಿಂದಲೇ ಸಂಪಾದನೆ ಮಾಡುತ್ತಿರುವ ಯಲ್ಲಾ, ಪ್ರತಿ ತಿಂಗಳು 500 ಯೂರೋ ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 50,000 ರೂ ಗಳಿಸುತ್ತಿದ್ದಾರೆ.

ಈ ಕುರಿತು ಡೈಲಿ ಮೈಲ್ ಜತೆ ಮಾಹಿತಿ ಹಂಚಿಕೊಂಡಿರುವ ಯಲ್ಲಾ,  ‘‘ನನಗೆ ಎಲ್ಲವನ್ನೂ ಅಚ್ಚುಕಟ್ಟಾಗಿರಿಸುವುದೆಂದರೆ ಇಷ್ಟ. ಆದ್ದರಿಂದ ಇಡೀ ದಿನ ಬೇಕಾದರೂ ಈ ಕೆಲಸ ಮಾಡುತ್ತಿರಬಲ್ಲೆ’’ ಎಂದು ತಮ್ಮ ಕಾರ್ಯವೈಖರಿಯ ಬಗ್ಗೆ ಹೇಳಿಕೊಂಡಿದ್ದಾರೆ. ಒಂದು ವಾರ್ಡ್​ರೋಬ್ ಅಚ್ಚುಕಟ್ಟಾಗಿ ಜೋಡಿಸಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ವಿವರಿಸಿರುವ ಯುವತಿ, ‘‘ಸುಮಾರು ಮೂರು ಗಂಟೆಗಳಲ್ಲಿ ಒಂದು ವಾರ್ಡ್​​ರೋಬ್ ಜೋಡಿಸಬಹುದು. ಸಾಮಾನ್ಯವಾಗಿ ವಾರ್ಡ್​​​ರೋಬ್ ಗಾತ್ರದ ಮೇಲೆ ಅದು ನಿರ್ಧಾರವಾಗುತ್ತದೆ. ಈ ಹಿಂದೆ ಒಂದು ವಾರ್ಡ್​​ರೋಬ್​ಗೆ ಒಂಬತ್ತು ಗಂಟೆ ತೆಗೆದುಕೊಂಡಿದ್ದೆ. ಕೆಲಸ ಬಹಳ ಖುಷಿ ಕೊಡುವ ಕಾರಣ, ಸಮಯ ನನಗೆ ಮುಖ್ಯವಾಗುವುದಿಲ್ಲ’’ ಎಂದಿದ್ದಾರೆ.

ಯಲ್ಲಾ ವಾರ್ಡ್​ರೋಬ್ ಅಚ್ಚುಕಟ್ಟುಗೊಳಿಸಲು ಪಡೆಯುವ ಹಣ ಎಷ್ಟು? ಯಲ್ಲಾ ತಮ್ಮ ಕಾರ್ಯಕ್ಕೆ ತಕ್ಕಷ್ಟು ಸಂಭಾವನೆಯನ್ನೂ ಪಡೆಯುತ್ತಾರೆ. ಪ್ರತಿ ಗಂಟೆಯ ಕೆಲಸದ ಮೇಲೆ ಅವರ ಸಂಭಾವನೆ ನಿರ್ಧಾರವಾಗುತ್ತದೆ. ಪ್ರಸ್ತುತ ಅವರು ಪ್ರತೀ ಗಂಟೆಗೆ ಸುಮಾರು 15ರಿಂದ 20 ಯೂರೋ ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 1,500 ರಿಂದ ₹ 2,000ದವರೆಗೆ ಸಂಭಾವನೆ ಪಡೆಯುತ್ತಾರೆ.

ಯಲ್ಲಾ ಮೆಕ್​ಮಾಹನ್​ಗೆ ವಾರ್ಡ್​​ರೋಬ್ ಕೆಲಸಕ್ಕೆ ಪ್ರೇರಣೆ ನೀಡಿದ್ದು ಕುಟುಂಬ ಹಾಗು ಸ್ನೇಹಿತರಂತೆ. ಗ್ರಾಹಕರ ಮನೆಗೆ ಹೋದಾಗ ಅವರ ಎಲ್ಲಾ ಬಟ್ಟೆಗಳನ್ನು ಅಚ್ಚುಕಟ್ಟುಗೊಳಿಸುತ್ತೇನೆ. ನಂತರ ಬೇಡವಾದ ಬಟ್ಟೆಗಳನ್ನು ತೆಗೆದಿಡುತ್ತಾನೆ. ಬಹುತೇಕ ಬಾರಿ ಗ್ರಾಹಕರಿಗೆ ಇಷ್ಟೊಂದು ಬೇಡದ ಬಟ್ಟೆಗಳು ವಾರ್ಡ್​ರೋಬ್​ನಲ್ಲಿತ್ತೇ ಎಂದು ಆಶ್ಚರ್ಯವಾಗುತ್ತದೆ ಎಂದಿದ್ದಾರೆ ಯಲ್ಲಾ.

ಅಲ್ಲದೇ ಗ್ರಾಹಕರಿಗೆ ಬೇಡದ ಬಟ್ಟೆಗಳನ್ನು ಅಗತ್ಯವಿರುವವರಿಗೆ ತಲುಪಿಸುವ ವ್ಯವಸ್ಥೆಯನ್ನೂ ಯಲ್ಲಾ ಮಾಡುತ್ತಾರೆ. ಪ್ರಸ್ತುತ ಯಲ್ಲಾ ಬಳಿ 20 ಖಾಯಂ ಗ್ರಾಹಕರಿದ್ದು, ಅವರ ಮನೆಗೆ ಪ್ರತಿ 2 ವಾರಕ್ಕೆ ಹೋಗಿ ವಾರ್ಡ್​ರೋಬನ್ನು ಅಚ್ಚುಕಟ್ಟುಗೊಳಿಸುತ್ತಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಾರ್ಡ್​ರೋಬ್ ಮೊದಲು ಹೇಗಿತ್ತು ಹಾಗೂ ನಂತರ ಏನಾಯ್ತು ಎಂಬ ವಿಡಿಯೋಗಳನ್ನು ಯಲ್ಲಾ ಹಂಚಿಕೊಳ್ಳುತ್ತಿರುತ್ತಾರೆ. ಈ ಕೆಲಸ ಮನಸ್ಸಿಗೆ ಬಹಳ ಸಮಾಧಾನ ನೀಡುತ್ತದೆ ಎನ್ನುತ್ತಾರೆ ಅವರು.

ಇದನ್ನೂ ಓದಿ:

Bank Robbery: ಕೈಯಲ್ಲಿ ಚಾಕು, ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್​​ಗೆ ನುಗ್ಗಿದ್ದವ ಮಾಡಿದ್ದೇನು? ವಿಡಿಯೋ ನೋಡಿ

ಪುಷ್ಪ ಸಿನಿಮಾದಿಂದ ಸ್ಫೂರ್ತಿ ಪಡೆದು ಅಪ್ರಾಪ್ತರಿಂದ ಕೊಲೆ; ಫೇಮಸ್​ ಆಗಲೆಂದು ಹತ್ಯೆಯ ವಿಡಿಯೋ ಅಪ್​ಲೋಡ್ ಮಾಡಲು ಪ್ಲಾನ್!

Follow us on

Related Stories

Most Read Stories

Click on your DTH Provider to Add TV9 Kannada