ನೂಡಲ್ಸ್‌ನಿಂದ ಸ್ಕಾರ್ಫ್ ಹೆಣೆದ ಮಹಿಳೆ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ನೂಡಲ್ಸ್‌ನಿಂದ ಹೆಣೆಯುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 7 ಮಿಲಿಯನ್ ಜನರು ವೀಕ್ಷಿಸಿದ್ದಾರೆ.

(viral video) ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತಹದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ನಾವು ಚಿಕ್ಕವರಿದ್ದಾಗ ತಮ್ಮ ಅಜ್ಜಿ ಅಥವಾ ಅಮ್ಮ ನೂಲಿನಿಂದ ಅಥವಾ ಉಣ್ಣೆ ಬಟ್ಟೆಯಿಂದ ಸ್ವೆಟರ್ ಅಥವಾ ಸ್ಕಾರ್ಫ್ ಹೆಣೆಯುವುದನ್ನು ನಾವು ನೋಡಿರುತ್ತೇವೆ. ಆದರೆ ಯಾರಾದರೂ ನೂಡಲ್ಸ್ ಬಳಸಿ ಹೆಣೆಯುದನ್ನು ನೀವು ನೋಡಿದ್ದೀರಾ? ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬರು ಸ್ಕಾರ್ಫ್ ಅನ್ನು ಉಣ್ಣೆಯಿಂದ ಅಲ್ಲ, ಆದರೆ ನೂಡಲ್ಸ್‌ನಿಂದ ಹೆಣೆದಿದ್ದಾರೆ. ಇಲ್ಲಿಯವರೆಗೂ ನೂಡಲ್ಸ್ನ್ನು ತಿನ್ನುವುದಕ್ಕೆ ಮಾತ್ರ ಬಳಸುತ್ತಾರೆ ಎಂದು ಗೊತ್ತಿತ್ತು. ಆದರೆ ನೂಡಲ್ಸ್‌ನಿಂದ ಸ್ಕಾರ್ಫ್ನ್ನು ಹೆಣೆಯಬಹುದು ಎಂದು ಈ ಮಹಿಳೆ ತೋರಿಸಿಕೊಟ್ಟಿದ್ದಾಳೆ.
— ✧ (@mixiaoz) January 16, 2022
ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಟಿಕ್‌ಟಾಕ್ ವೀಡಿಯೊದಲ್ಲಿ ಮಹಿಳೆಯೊಬ್ಬರು ಬೌಲ್‌ನಿಂದ ನೇರವಾಗಿ ನೂಡಲ್ಸ್‌ನೊಂದಿಗೆ ಸ್ಕಾರ್ಫ್ ಅನ್ನು ಹೆಣೆದಿದ್ದಾರೆ. ಟ್ವಿಟರ್‌ನಲ್ಲಿ ಜನವರಿ 16 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊವನ್ನು 7 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದು, 81,000 ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ. ಮಹಿಳೆ ಸ್ಕಾರ್ಫ್ ಅನ್ನು ಹೆಣೆಯಲು ಚಾಪ್ಸ್ಟಿಕ್ಗಳನ್ನು ಬಳಸುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನು ಓದಿ:
Viral: ಕೋತಿಮರಿ ವಿಡಿಯೋ ನೋಡಿ ಮಗನಿಗೆ ಹೋಲಿಸಿ ಕಾಮೆಂಟ್ ಮಾಡಿದ ಎಲೋನ್ ಮಸ್ಕ್
ಹೃದಯ ಕದ್ದ ಹುಡುಗಿಯ ಅಮ್ಮನಿಗೆ ಕಿಡ್ನಿ ಕೊಟ್ಟ ಪ್ರೇಮಿ; ಒಂದೇ ತಿಂಗಳಲ್ಲಿ ಬೇರೊಬ್ಬನನ್ನು ಮದುವೆಯಾದ ಯುವತಿ!




