ಡ್ಯಾನ್ಸ್​ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ; ಅದೇ ಮಂಟಪದಲ್ಲಿ ಇನ್ನೊಂದು ವರನನ್ನು ಮದುವೆಯಾದ ವಧು

ಡ್ಯಾನ್ಸ್​ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ; ಅದೇ ಮಂಟಪದಲ್ಲಿ ಇನ್ನೊಂದು ವರನನ್ನು ಮದುವೆಯಾದ ವಧು
ಸಾಂಕೇತಿಕ ಚಿತ್ರ

ಮದುವೆಯೊಂದರಲ್ಲಿ ಮಧು ಮಂಟಪಕ್ಕೆ ಆಗಮಿಸುವ ವೇಳೆ ಡ್ಯಾನ್ಸ್​ ಮಾಡಿದ್ದಕ್ಕೆ ವಧುವಿಗೆ ವರ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಬಳಿಕ ಆಕೆಯೂ ತಿರುಗಿಸಿ ವರನ ಕೆನ್ನೆಗೆ ಬಾರಿಸಿದ್ದಾಳೆ.

TV9kannada Web Team

| Edited By: Pavitra Bhat Jigalemane

Jan 22, 2022 | 12:12 PM

ಮದುವೆಗಳಲ್ಲಿ ವಿಚಿತ್ರ ಘಟನೆಗಳು, ಊಹಿಸಲಾರದ ಸಂದರ್ಭಗಳು ಎದುರಾಗುತ್ತವೆ. ಇದೀಗ  ಮದುವೆಯೊಂದರಲ್ಲಿ ಮಧು (Bride) ಮಂಟಪಕ್ಕೆ ಆಗಮಿಸುವ ವೇಳೆ ಡ್ಯಾನ್ಸ್​ ಮಾಡಿದ್ದಕ್ಕೆ ವಧುವಿಗೆ ವರ (Groom) ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಬಳಿಕ ಆಕೆಯೂ ತಿರುಗಿಸಿ ವರನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಅದೇ ಮಂಟಪದಲ್ಲಿ ವಧು ತನ್ನ ಸೋದರ ಸಂಬಂಧಿಯೊಂದಿಗೆ ವಿವಾಹವಾದ ಘಟನೆ ನಡೆದಿದೆ. ತಮಿಳುನಾಡಿನ ಪನ್ರುತಿ (Panruti)ಯಲ್ಲಿ ಈ ಘಟನೆ ನಡೆದಿದೆ. ಜನವರಿ 20ರಂದು ಮದುವೆ ನಿಶ್ಚಯವಾಗಿತ್ತು. ಜ.19ರಂದು ರಾತ್ರಿ ರಿಸೆಪ್ಷನ್ ​ನಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ. 

ತಮಿಳುನಾಡಿನ ಉದ್ಯಮಿಯೊಬ್ಬರ ಮಗಳ ಮದುವೆಯನ್ನು ಪನ್ರುತಿಯ ಖಾಸಗಿ ಮದುವೆ ಹಾಲ್​ವೊಂದರಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ವಧು  ಡ್ಯಾನ್ಸ್​ ಮಾಡುತ್ತಾ ರೆಸೆಪ್ಷನ್​ ದಿನ ಮಂಟಪಕ್ಕೆ ಬಂದಿದ್ದಾಳೆ. ಈ ವೇಳೆ ವರ ಡ್ಯಾನ್ಸ್​ ಯಾಕೆ ಮಾಡುತ್ತಿದ್ದೀಯಾ ಎಂದು ವಧುವಿನ ಕೆನ್ನೆಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ವಧು ತಿರುಗಿಸಿ ವರನ ಕೆನ್ನೆಗೆ ಹೊಡೆದಿದ್ದಾಳೆ. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದನ್ನು ಗಮನಿಸಿ ವಧುವಿನ ತಂದೆ ವರ ಮತ್ತು ಆತನ ಕುಟುಂಬವನ್ನು ತನ್ನ ಸಂಬಂಧಿಕರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮದುವೆ ಹಾಲ್​ನಿಂದ ಹೊರಹೋಗುವಂತೆ ಹೇಳಿದ್ದಾರೆ. ನಂತರ ವಧುವಿನ ತಂದೆ ಸಂಬಂಧಿಕರೊಂದಿಗೆ ಚರ್ಚೆ ನಡೆಸಿ ವಿಲ್ಲುಪುರಮ್​ನ ಸಂಬಂಧಿಕರ ವರನೊಂದಿಗೆ ಅದೇ ದಿನ ಅದೇ ಮಂಟಪದಲ್ಲಿ ಮಗಳ ಮದುವೆಯನ್ನು ಮಾಡಿದ್ದಾರೆ.

ಇನ್ನು ಘಟನೆಯಿಂದ ಅವಮಾನಗೊಂಡ ವರ ಪನ್ರುತಿ ಪೊಲೀಸ್​ ಠಾಣೆಯಲ್ಲಿ ವಧುವಿನ ಕುಟುಂಬದ ವಿರುದ್ಧ ದೂರು ನೀಡಿದ್ದು ಮದುವೆ ಮತ್ತು ರಿಸೆಪ್ಷನ್​ಗೆ ವ್ಯಯಿಸಿದ್ದ 7 ಲಕ್ಷ ರೂಗಳನ್ನು ವಾಪಸ್​ ನೀಡುವಂತೆ ಕೇಳಿದ್ದಾರೆ.  ಪೊಲೀಸರ ಪ್ರಕಾರ ವರ ಚೆನ್ನೈನಲ್ಲಿ ಇಂಜಿನಿಯರ್​ ಆಗಿದ್ದು ವಧು ಸ್ನಾತಕೋತ್ತರ ಪದವೀದರೆ  ಆಗಿದ್ದರು. ಇವರ ನಿಶ್ಚಿತಾರ್ಥವನ್ನು ಎರಡೂ ಕುಟುಂಬಗಳು ಒಪ್ಪಿ ನವೆಂಬರ್​ 6 ರಂದು ನಡೆಸಿದ್ದರು.

ಇದನ್ನೂ ಓದಿ:

ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್ ಹೋಗುತ್ತಿದ್ದ ಭೂಪ; ವೈರಲ್ ವಿಡಿಯೋದಿಂದ ಬಯಲಾಯ್ತು ನಿಜ ಬಣ್ಣ

Follow us on

Related Stories

Most Read Stories

Click on your DTH Provider to Add TV9 Kannada