Viral Video: ಮೊಬೈಲ್​ನಲ್ಲಿ ತಮ್ಮದೇ ರೀತಿ ಇರುವ ಪ್ರಾಣಿಗಳನ್ನು ನೋಡಿ ಗೊಂದಲಕ್ಕೊಳಗಾದ ಕೋತಿಗಳು

ಮೊಬೈಲ್​ನಲ್ಲಿ ತಮ್ಮದೇ ಜಾತಿಯ ಇನ್ನೊಂದಷ್ಟು ಕೋತಿಗಳನ್ನು ನೋಡಿ ಮರಿಕೋತಿಗಳ ಹಿಂಡು ಪ್ರತಿಕ್ರಿಯಿಸುವ ವಿಡಿಯೋ ವೈರಲ್​ ಆಗಿದೆ.

Viral Video: ಮೊಬೈಲ್​ನಲ್ಲಿ ತಮ್ಮದೇ ರೀತಿ ಇರುವ ಪ್ರಾಣಿಗಳನ್ನು ನೋಡಿ ಗೊಂದಲಕ್ಕೊಳಗಾದ ಕೋತಿಗಳು
ವಿಡಿಯೋದಿಂದ ಸೆರೆಹಿಡಿದ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Jan 22, 2022 | 4:37 PM

ಸಾಮಾಜಿಕ ಜಾಲತಾಣ ವಿಚಿತ್ರ ಹಾಗೂ ನಗು ತರಿಸುವ ವಿಡಿಯೋಗಳಿಗೆ ಆಗಾಗ ಪ್ಲಾಟ್​ಫಾರ್ಮ್​ ಆಗುತ್ತದೆ. ಕೆಲವೊಂದು ವಿಭಿನ್ನ ವಿಡಿಯೋಗಳು ನೆಟ್ಟಿಗರನ್ನು ಸೆಳೆದು ನಗೆಗಡಲಲ್ಲಿ ತೇಲಿಸುತ್ತವೆ. ಅಂತಹವುಗಳಲ್ಲಿ ಪ್ರಾಣಿಗಳ ವಿಡಿಯೋಗಳು ಹೌದು. ಕೋತಿಗಳು ಎಂದರೆ ನಗು ತರಿಸುವ ಪ್ರಾಣಿಗಳು. ಸಾಮಾನ್ಯವಾಗಿ ಮನುಷ್ಯರ ಕೆಲವು ನಡುವಳಿಕೆಗಳನ್ನು ಕೋತಿಗೆ ಹೋಲಿಸುತ್ತಾರೆ. ಕೋತಿ ಎಂದರೇ ಚೇಷ್ಟೆ ಎನ್ನುವ ಮಾತಿದೆ. ಇಲ್ಲೊಂದು ಕೋತಿಗಳ ಹಿಂಡಿನ ಚೇಷ್ಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ವಿಡಿಯೋ ನೋಡಿ ನಗೆಗಡಲಲ್ಲಿ ಮುಳುಗಿದ್ದಾರೆ.

ಹೆಲಿಕಾಪ್ಟರ್​ ಯಾತ್ರಾ ಎನ್ನುವ ಇನ್ಸ್ಟಾಗ್ರಾಮ್​ ಬಳಕೆದಾರರೊಬ್ಬರು ಕೋತಿಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೊಬೈಲ್​ನಲ್ಲಿ ತಮ್ಮದೇ ಜಾತಿಯ ಇನ್ನೊಂದಷ್ಟು ಕೋತಿಗಳನ್ನು ನೋಡಿ ಮರಿಕೋತಿಗಳ ಹಿಂಡು ಪ್ರತಿಕ್ರಿಯಿಸುವ ವಿಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೋತಿ ಮರಿಗಳ ಬಳಿ ಮೊಬೈಲ್​ ಹಿಡಿಯುತ್ತಾರೆ. ಅದರಲ್ಲಿ ಕೋತಿಗಳ ಹಿಂಡು ಇರುವುದನ್ನು ಕಾಣಬಹುದು. ಅದನ್ನು ನೋಡಿದ ಕೋತಿಮರಿಗಳು ಮೊಬೈಲ್​ನ ಬಳಿ ಮುಖವನ್ನು ತೆಗೆದುಕೊಂಡು ಹೋಗುತ್ತವೆ. ನಂತರ ಮೊಬೈಲ್​ ಸ್ಕ್ರೀನ್​ ಮುಟ್ಟಿ ನೋಡುತ್ತವೆ. ಪಕ್ಕದಲ್ಲಿದ್ದ ದೊಡ್ಡ ಕೋತಿಯೂ ಕೂಡ ಅಚ್ಚರಿಯಿಂದ ಇಣುಕಿ ನೋಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, 12 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ವಿಡಿಯೋ ನೋಡಿ ನೆಟ್ಟಿಗರು, ನಗುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಟೆಸ್ಲಾ ಸಿಇಒ ಎಲೋನ್​ ಮಸ್ಕ್​ ಕೂಡ ಕೋತಿಯೊಂದರ ವಿಡಿಯೋ ನೋಡಿ ಮೆಚ್ಚಕೊಂಡಿದ್ದಎಉ. ಅಷ್ಟೇ ಅಲ್ಲದೆ ಆ ಕೋತಿಯ ಚೇಷ್ಟೆಯನ್ನು ತಮ್ಮ ಒಂದು ವರ್ಷದ ಮಗನಿಗೆ ಹೋಲಿಸಿದ್ದರು. ಟ್ವಿಟರ್​​ನಲ್ಲಿ ಎಲೋನ್​ ಮಸ್ಕ್​ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಇದನ್ನೂ ಓದಿ:

Viral: ಕೋತಿಮರಿ ವಿಡಿಯೋ ನೋಡಿ ಮಗನಿಗೆ ಹೋಲಿಸಿ ಕಾಮೆಂಟ್​ ಮಾಡಿದ ಎಲೋನ್ ​ಮಸ್ಕ್

ಕೋಡಿನಿಂದ ಸಿಂಹವನ್ನು ಎತ್ತಿ ಎಸೆದು ಸ್ನೇಹಿತನನ್ನು ರಕ್ಷಿಸಿದ ಎಮ್ಮೆ; ವಿಡಿಯೋ ವೈರಲ್​

Published On - 4:35 pm, Sat, 22 January 22