AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಡಿನಿಂದ ಸಿಂಹವನ್ನು ಎತ್ತಿ ಎಸೆದು ಸ್ನೇಹಿತನನ್ನು ರಕ್ಷಿಸಿದ ಎಮ್ಮೆ; ವಿಡಿಯೋ ವೈರಲ್​

ಸಿಂಹ  ಭೇಟೆಯಾಡಲು ಬಂದ ಎಮ್ಮೆಯನ್ನು ಮತ್ತೊಂದು ಎಮ್ಮೆ ರಕ್ಷಿಸಿದ ಭಯಾನಕ ವಿಡಿಯೋ ವೈರಲ್​ ಆಗಿದೆ.  ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್​ ಆಗಿದೆ.

ಕೋಡಿನಿಂದ ಸಿಂಹವನ್ನು ಎತ್ತಿ ಎಸೆದು ಸ್ನೇಹಿತನನ್ನು ರಕ್ಷಿಸಿದ ಎಮ್ಮೆ; ವಿಡಿಯೋ ವೈರಲ್​
ಸಿಂಹ ಮತ್ತು ಎಮ್ಮೆಯ ಕಾದಾಟ
TV9 Web
| Edited By: |

Updated on:Jan 22, 2022 | 4:34 PM

Share

ನಿಜವಾದ ಸ್ನೇಹ  ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತವೆ. ಹಾಗೆ ನೋಡಿದರೆ ಮನುಷ್ಯರೇ ಸ್ನೇಹಿತ ಕಷ್ಟದಲ್ಲಿ ಸಿಲುಕಿರುವಾಗ ನುಣುಚಿಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಹಾಗಲ್ಲ. ಒಂದು ಬಾರಿ ಸ್ನೇಹವನ್ನು ಬೆಸೆದುಕೊಂಡ ಮೇಲೆ ಎಂತಹ ಸಂದರ್ಭಗಳಲ್ಲೂ ಬಿಟ್ಟುಕೊಡುವುದಿಲ್ಲ. ಸಾಮಾನ್ಯವಾಗಿ ಕಾಡುಗಳಲ್ಲಿ ಪ್ರಾಣಿಗಳ ನಡುವೆ ಜಗಳ ಕಿತ್ತಾಟ ಸಹಜ. ಆದರೆ  ಜೀವ ತೆಗೆಯುವ ಪ್ರಾಣಿಗಳು ಎದುರು ಬಂದರೆ ಎಂದಿಗೂ ತಮ್ಮ ಜಾತಿಯನ್ನು ಪ್ರಾಣಿಗಳು ಬಿಟ್ಟುಕೊಡುವುದಿಲ್ಲ. ಅದಕ್ಕೆ ನಿದರ್ಶನ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video)​ ಆಗಿದೆ. ಸಿಂಹ (Lion) ಭೇಟೆಯಾಡಲು ಬಂದ ಎಮ್ಮೆಯನ್ನು ಮತ್ತೊಂದು ಎಮ್ಮೆ(Buffalo) ರಕ್ಷಿಸಿದ ಭಯಾನಕ ವಿಡಿಯೋ ವೈರಲ್​ ಆಗಿದೆ.  ಇನ್ಸ್ಗಾಗ್ರಾಮ್​ನಲ್ಲಿ ವಿಡಿಯೋ ವೈರಲ್​ ಆಗಿದೆ. ವೈಲ್ಡ್​ ಆನಿಮಲ್​ ಕ್ರಿಯೇಶನ್ (wild_animals_creation)​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 43 ಸಾವಿರಕ್ಕೂ ಹೆಚ್ಚು ಲೈಕ್ಸ್​​ಗಳಿಸಿದೆ.

View this post on Instagram

A post shared by Wild life stories (@wild_animals_creation)

ವಿಡಿಯೋದಲ್ಲಿ ಎಮ್ಮೆಯೊಂದು ಮಲಗಿರುವುದನ್ನು ಕಾಣಬಹುದು. ಆ ಎಮ್ಮೆಯ ಬಳಿ ಸಿಂಹ ನಿಂತಿರುತ್ತದೆ. ತಕ್ಷಣ ಇನ್ನೊಂದು ಎಮ್ಮೆ ಬಂದು ಸಿಂಹವನ್ನು ತನ್ನ ಕೋಡಿನಲ್ಲಿ ಎತ್ತಿ ಬಿಸಾಕುವುದನ್ನು ಕಾಣಬಹುದು. ತನ್ನ ಸಹಚರ ಎಮ್ಮೆಯನ್ನು ರಕ್ಷಿಸಲು ಮತ್ತೊಂದು ಎಮ್ಮೆ ಸಿಂಹದ ಹೊಟ್ಟೆಗೆ ಕೊಂಬು ಹಾಕಿ ಎತ್ತಿ ಪಕ್ಕಕ್ಕೆ ಬಿಸಾಡುತ್ತದೆ. ಈ ಭಯಾನಕ ವಿಡಿಯೋ ಎಂತಹವರನ್ನೂ ಒಂದು ಬಾರಿ ಬೆಚ್ಚಿ ಬೀಳಿಸುತ್ತದೆ.

ವಿಡಿಯೋ ನೋಡಿ ನೆಟ್ಟಿಗರು ಕಣ್ಣರಳಿಸಿದ್ದು, ಎಮ್ಮೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ಬಳಕೆದಾರರು  ಪ್ರೊಟೆಕ್ಟಿವ್​ ಹಾಗೂ ಸ್ನೇಹಿತನನ್ನು ಪ್ರೀತಿಸುವ ಎಮ್ಮೆಯನ್ನು ನೋಡಿ ಶ್ಲಾಘಿಸಿದ್ದಾರೆ. ಸ್ನೇಹವೆಂದರೆ ಹೀಗಿರಬೇಕು ಎಂದು ಉದ್ಘರಿಸಿದ್ದಾರೆ.

ಇದನ್ನೂ ಓದಿ:

ಡ್ಯಾನ್ಸ್​ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ; ಅದೇ ಮಂಟಪದಲ್ಲಿ ಇನ್ನೊಂದು ವರನನ್ನು ಮದುವೆಯಾದ ವಧು

ನೂಡಲ್ಸ್​​ನಿಂದ ಸ್ಕಾರ್ಫ್ ಹೆಣೆದ ಮಹಿಳೆ; ವಿಡಿಯೋ ವೈರಲ್

Published On - 2:40 pm, Sat, 22 January 22

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ