Viral News: ಮೂರು ತಿಂಗಳ ಬಳಿಕ ಮಹಿಳೆಯ ಬೆನ್ನು ಮೂಳೆಯಲ್ಲಿ ಪತ್ತೆಯಾದ ಬುಲೆಟ್​

ಮೂರು ತಿಂಗಳ ಕಾಲ ಬೆನ್ನು ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಿಟಿ ಸ್ಕ್ಯಾನ್​  ಮಾಡಿಸಿದ ವೇಳೆ  ಬೆನ್ನಿನ ಮೂಳೆಯಲ್ಲಿ ಬುಲೆಟ್​ ಪತ್ತೆಯಾದ ಅಘಾತಕಾರಿ ಘಟನೆ ನಡೆದಿದೆ.

Viral News: ಮೂರು ತಿಂಗಳ ಬಳಿಕ ಮಹಿಳೆಯ ಬೆನ್ನು ಮೂಳೆಯಲ್ಲಿ ಪತ್ತೆಯಾದ ಬುಲೆಟ್​
ಮಹಿಳೆಯ ದೇಹದಲ್ಲಿ ಪತ್ತೆಯಾದ ಬುಲೆಟ್​
Follow us
TV9 Web
| Updated By: Pavitra Bhat Jigalemane

Updated on:Jan 22, 2022 | 11:29 AM

ಮೂರು ತಿಂಗಳ ಕಾಲ ಬೆನ್ನು ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಿಟಿ ಸ್ಕ್ಯಾನ್​ (CT Scan)  ಮಾಡಿಸಿದ ವೇಳೆ  ಬೆನ್ನಿನ ಮೂಳೆಯಲ್ಲಿ ಬುಲೆಟ್ (Bullet)​ ಪತ್ತೆಯಾದ ಅಘಾತಕಾರಿ ಘಟನೆ ನಡೆದಿದೆ. ಇಸ್ರೇಲ್​ನಲ್ಲಿ ಈ ಘಟನೆ ನಡೆದಿದ್ದು, ಆದಿ ಬ್ಲೋಯ್ (Adi Bloy )ಎನ್ನುವ ಮಹಿಳೆಯ ದೇಹದಲ್ಲಿ ಬುಲೆಟ್​ ಅನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ಆದಿ ಬ್ಲೋಯ್ ಪ್ಯಾಲಿಸ್ಟೇನಿಯಾನದ ಪ್ಯಾಸಗೋಟ್​ ವೈನರಿಗೆ ಗೆಳತಿಯ ಮದುವೆಗೆ ತೆರಳಿದ್ದರು. ಈ ವೇಳೆ ಆಕೆಗೆ ಇದ್ದಕಿದ್ದ ಹಾಗೇ ದೇಹದಲ್ಲಿ ಅಗಾಧ ನೋವು ಕಾಣಿಸಕೊಂಡಿತ್ತು, ಪರೀಕ್ಷಿಸಿಕೊಂಡಾಗ ಚಿಕ್ಕದೊಂದು ಗಾಯ ಮತ್ತು  ಸ್ವಲ್ಪ ರಕ್ತ ಕಾಣಿಸಕೊಂಡಿತ್ತು.  ಈ ವೇಳೆ ಆಕೆಯ ಜೊತೆಗಿದ್ದ ಇತರ ಸ್ನೇಹಿತರು ಏನೂ ಆಗಿಲ್ಲವೆಂದು ಮತ್ತೆ  ಸಮಾರಂಭದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದರು.

ಇಂಡಿಯನ್​ ಎಕ್ಸ್​ಪ್ರೆಸ್​ ವರದಿಯ ಪ್ರಕಾರ ಆದಿ ಬ್ಲೋಯ್ ಅವರಿಗೆ ದಿನದಿಂದ ದಿನಕ್ಕೆ  ದೇಹದಲ್ಲಿ ನೋವು, ಸ್ನಾಯು ಸೆಳೆತ ಹೆಚ್ಚಾಗುತ್ತಲೇ ಇತ್ತು. ಹಲವು ಬಾರಿ ವೈದ್ಯರ ಬಳಿ ತೋರಿಸಿದಾಗಲೂ ನೋವಿಗೆ ಮಾತ್ರೆಯನ್ನು ತೆಗೆದುಕೊಂಡಿದ್ದರು. ಕೊನೆಗೆ ಮೂರು ತಿಂಗಳ ಬಳಿಕವೂ ನೋವು ವಾಸಿಯಾಗದ ಕಾರಣ ಸಿಟಿ ಸ್ಕ್ಯಾನ್​ ಮಾಡಿಸಿದ್ದಾರೆ. ಈ ವೇಳೆ ಆಕೆಯ ದೇಹದಲ್ಲಿ ಬುಲೆಟ್​ ಪತ್ತೆಯಾಗಿದೆ. 5.6 ಎಂಎಂ ಗಾತ್ರದ ಬುಲೆಟ್​ ಪತ್ತೆಯಾಗಿದ್ದು ವೈದ್ಯರೇ ಶಾಕ್​ ಆಗಿದ್ದಾರೆ. ಕೊನೆಗೆ ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಬುಲೆಟ್​ ಅನ್ನು ಹೊರತೆಗೆದಿದ್ದಾರೆ.

ಈ ಕುರಿತು ಆದಿ ಬ್ಲೋಯ್ ಚಾನೆಲ್​ 12 ಮಾಧ್ಯಮದಲ್ಲಿ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ. ಸಂದರ್ಶನದ ವೆಳೆ ನಾನಿ, ತೀವ್ರವಾದ ಬೆನ್ನು ನೋವು, ಕುತ್ತಿಗೆ ನೋವು ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೇನೆ. ನನಗೆ ಓಡಾಡಲು ಕೂಡ ಸಾಧ್ಯವಾಗದಷ್ಟು ನೋವು ಕಾಡುತ್ತಿತ್ತು ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

Viral: ಕೋತಿಮರಿ ವಿಡಿಯೋ ನೋಡಿ ಮಗನಿಗೆ ಹೋಲಿಸಿ ಕಾಮೆಂಟ್​ ಮಾಡಿದ ಎಲೋನ್ ​ಮಸ್ಕ್

Published On - 11:28 am, Sat, 22 January 22