ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್ ಹೋಗುತ್ತಿದ್ದ ಭೂಪ; ವೈರಲ್ ವಿಡಿಯೋದಿಂದ ಬಯಲಾಯ್ತು ನಿಜ ಬಣ್ಣ

ವೈರಲ್ ವಿಡಿಯೋದಿಂದ ಡೇಟ್ ಮಾಡಿ ನಾಪತ್ತೆಯಾಗುತ್ತಿದ್ದ ವಂಚಕನೋರ್ವನ ಅಸಲಿ ಬಣ್ಣ ಬಯಲಾಗಿದೆ. ಇದೀಗ ಮಹಿಳೆಯರು ವಂಚಕನಿಂದ ಆಗಿರುವ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್ ಹೋಗುತ್ತಿದ್ದ ಭೂಪ; ವೈರಲ್ ವಿಡಿಯೋದಿಂದ ಬಯಲಾಯ್ತು ನಿಜ ಬಣ್ಣ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ (Credits: ohheyjenna/ twitter)
Follow us
TV9 Web
| Updated By: shivaprasad.hs

Updated on: Jan 22, 2022 | 11:35 AM

ನ್ಯೂಯಾರ್ಕ್​ ನಗರದ ಒಬ್ಬ ವ್ಯಕ್ತಿಯ ವಿರುದ್ಧ ಟಿಕ್​ಟಾಕ್​ನಲ್ಲಿ ಎಚ್ಚರಿಕೆಯ ಪ್ರವಾಹವನ್ನೇ ಹರಿಸಲಾಗಿದೆ. ಅಷ್ಟಕ್ಕೂ ಆತ ಮಾಡಿದ್ದೇನು ಅಂತೀರಾ? ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್​ಗೆ ಹೋಗಿದ್ದು! ‘ಕ್ಯಾಲೆಬ್’ ಎಂಬ ಅಡ್ಡ ಹೆಸರಿರುವ ವ್ಯಕ್ತಿ ನ್ಯೂಯಾರ್ಕ್​ನ ಪೀಠೋಪಕರಣಗಳ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಆತನ ವಿರುದ್ಧ ಹಲವು ಯುವತಿಯರು ಆರೋಪ ಮಾಡಿದ್ದಾರೆ. ಡೇಟಿಂಗ್​ಗೆ ಅವರ ಜತೆ ತೆರಳುತ್ತಿದ್ದ ವ್ಯಕ್ತಿ, ಕೆಲ ಕಾಲದ ನಂತರ ನಾಪತ್ತೆಯಾಗುತ್ತಿದ್ದ. ಇದಕ್ಕೆ ಇಂಟರ್​ನೆಟ್ ಪರಿಭಾಷೆಯಲ್ಲಿ ‘ಘೋಸ್ಟೆಡ್’ ಎನ್ನುತ್ತಾರೆ. ಅಂದರೆ ಹೇಳದೆ ಕೇಳದೆ ಎಲ್ಲೆಡೆಯಿಂದ ಸಂಬಂಧ ಕಡಿದುಕೊಂಡು (ಬ್ಲಾಕ್ ಮಾಡಿಕೊಂಡು ಎನ್ನಬಹುದು) ನಾಪತ್ತೆಯಾಗುವುದು. ದಿ ಇಂಡಿಪೆಂಡೆಂಡ್ ವರದಿಯ ಪ್ರಕಾರ, ಕ್ಯಾಲೆಬ್​ನ ಕಹಾನಿ ಹೊರಬೀಳಲು ಪ್ರಾರಂಭವಾಗಿರುವುದು ಕಳೆದ ಗುರುವಾರದಿಂದ. ಮೊದಲಿಗೆ ಟಿಕ್​ಟಾಕ್ ಬಳಕೆದಾರರಾದ ಮಿಮಿ ಶೌ ಎನ್ನುವವರು ಕ್ಯಾಲೆಬ್ ಎಂಬ ವ್ಯಕ್ತಿಯಿಂದ ‘ಘೋಸ್ಟೆಡ್’ (Ghosted) ಆಗಿದ್ದೆ ಎನ್ನುವುದನ್ನು ಹಂಚಿಕೊಂಡಿದ್ದರು. ಅದಕ್ಕೆ ಕಾಮೆಂಟ್ ಸೆಕ್ಷನ್​ನನಲ್ಲಿ ‘‘ನೀವು ‘ವೆಸ್ಟ್ ಎಲ್ಮ್ ಕ್ಯಾಲೆಬ್​’ (West Elm Caleb) ಕುರಿತು ಮಾತನಾಡುತ್ತಿದ್ದೀರಾ?’’ ಎಂದು ಹಲವು ಕಾಮೆಂಟ್​ಗಳು ಬಂದಿದ್ದವು. ಇಲ್ಲಿಂದ ಆತನ ನಿಜ ಬಣ್ಣ ಬಯಲಾಗಲು ಆರಂಭವಾಗಿದೆ.

ಪ್ರಕರಣದಲ್ಲೊಂದು ಟ್ವಿಸ್ಟ್: ಅಸಲಿಗೆ ಮೊದಲಿಗೆ ಕ್ಯಾಲೆಬ್ ಎಂಬಾತನ ಕುರಿತು ಮಾಹಿತಿ ಹಂಚಿಕೊಂಡಿದ್ದ ಮಿಮಿ ಶೌ ಹೇಳಿದ್ದು, ‘ವೆಸ್ಟ್ ಎಲ್ಮ್ ಕ್ಯಾಲೆಬ್’ ಕುರಿತಾಗಿರಲಿಲ್ಲ. ಅದು ಕೇವಲ ಕಾಕತಾಳೀಯವಾಗಿತ್ತಷ್ಟೆ. ಆದರೆ ಅವರು ಹಂಚಿಕೊಂಡ ಪೋಸ್ಟ್​ನಲ್ಲಿ ಎಲ್ಲರೂ ಕ್ಯಾಲೆಬ್ ಕುರಿತು ಮಾತನಾಡಿದ್ದರು. ನಂತರ ಯುವತಿಯರಿಗೆ ಕ್ಯಾಲೆಬ್ ಎಂಬಾತ ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್ ಮಾಡಿದ್ದು, ನಂತರ ಹೇಳದೆ ಕೇಳದೆ ನಾಪತ್ತೆಯಾಗಿದ್ದು, ಎಲ್ಲವೂ ಡೇಟಿಂಗ್ ಆಪ್ ಒಂದರ ಮೂಲಕ ಗೊತ್ತಾಗಿದೆ. ಆದ್ದರಿಂದ ಆತನ ವಿರುದ್ಧ ಎಚ್ಚರಿಕೆಯಿಂದಿರುವಂತೆ ಯುವತಿಯರು ಪೋಸ್ಟ್ ಮಾಡಿದ್ದಾರೆ.

ಮತ್ತೋರ್ವ ಟಿಕ್​ಟಾಕ್ ಬಳಕೆದಾರರಾದ ಕೇಟ್ ಗ್ಲೇವನ್ ಮಿಮಿ ಶೌ ಅವರ ವಿಡಿಯೋಕ್ಕೆ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಅವರು ‘ಟಿಕ್​ಟಾಕ್ ಇಲ್ಲದೇ ಇದ್ದರೆ ನಾನು ಡೇಟ್​ಗೆ ಹೋಗಿದ್ದ ವ್ಯಕ್ತಿ ಕ್ಯಾಲೆಬ್ ಎಂದು ತಿಳಿಯುತ್ತಲೇ ಇರಲಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೇ ಆತನ ಕುರಿತು ಹಲವರು ಎಚ್ಚರಿಕೆ ನೀಡಿದ್ದನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ಕ್ಯಾಲೆಬ್ ಶನಿವಾರ ಬೆಳಗ್ಗೆ ಅವರೊಂದಿಗೆ ಡೇಟ್​ಗೆ ಹೋಗುವ ಸ್ವಲ್ಪ ಹೊತ್ತಿನ ಮೊದಲು ಮತ್ತೋರ್ವರೊಂದಿಗೆ ಡೇಟ್ ಹೋಗಿದ್ದನ್ನು ಗಮನಿಸಿದ್ದನ್ನೂ ಹೇಳಿಕೊಂಡಿದ್ದಾರೆ. ಕೆಲ್ಲಿ ಎಂಬುವವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಕ್ಯಾಲೆಬ್ ಡೇಟಿಂಗ್ ಆಪ್ ಒಂದರಲ್ಲಿ ಭೇಟಿಯಾಗಿದ್ದ. ಆರು ವಾರ ಜತೆಯಲ್ಲಿ ಸುತ್ತಾಡಿದ ನಂತರ ಇದ್ದಕ್ಕಿದ್ದಂತೆ ನಾಪತ್ತೆಯಾದ ಎಂದಿದ್ದಾರೆ.

ಟ್ವಿಟರ್​ನಲ್ಲಿ ವೆಸ್ಟ್​ ಎಲ್ಮ್ ಕ್ಯಾಲೆಬ್ ಹ್ಯಾಶ್​​ಟ್ಯಾಗ್ ಪ್ರಸ್ತುತ ಜನಪ್ರಿಯವಾಗಿದ್ದು, ಹಲವು ಮಹಿಳೆಯರು ಕ್ಯಾಲೆಬ್​ ಕುರಿತು ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದಾರೆ. ಇದುವರೆಗೆ ಒಟ್ಟು ಆ ಹ್ಯಾಶ್​ಟ್ಯಾಗ್​ನಲ್ಲಿ ಅಪ್​ಲೋಡ್ ಆದ ವಿಡಿಯೋಗಳನ್ನು 5.4 ಮಿಲಿಯನ್​ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಇಷ್ಟಲ್ಲಾ ಸುದ್ದಿಯಾಗಿದ್ದರೂ ಕೂಡ ವೆಸ್ಟ್ ಎಲ್ಮ್ ಕ್ಯಾಲೆಬ್ ಈ ಕುರಿತು ತುಟಿಕ್ ಪಿಟಿಕ್ ಎಂದಿಲ್ಲ. ಹಲವು ಮಾಧ್ಯಮಗಳು ಅವರ ಭೇಟಿಗೆ ಪ್ರಯತ್ನ ಪಟ್ಟರೂ ಆತ ಕೈಗೆ ಸಿಕ್ಕೇ ಇಲ್ಲ ಎಂದಿವೆ ವರದಿಗಳು.

ಇದನ್ನೂ ಓದಿ:

Cyber crime: ಲಿಂಕ್ ಕಳುಹಿಸಿ ವೈದ್ಯನಿಗೆ ಲಕ್ಷ ರೂಪಾಯಿ ವಂಚನೆ: ಸೈಬರ್ ಠಾಣೆಯಲ್ಲಿ ದಾಖಲಾಯ್ತು ದೂರು

Army Dogs: ಸೇನೆಯ ಶ್ವಾನಗಳು ಏನೆಲ್ಲಾ ಕೆಲಸ ಮಾಡುತ್ತವೆ? ಅವುಗಳ ವಿಶೇಷತೆ ಏನು? ಇಲ್ಲಿದೆ ಕುತೂಹಲಕಾರಿ ಮಾಹಿತಿ