ಭಾರತೀಯ ಸೇನೆಯ ಈ ಶ್ವಾನಗಳು ಟ್ರಾಕಿಂಗ್, ಗಾರ್ಡಿಂಗ್, ಮೈನ್ ಡಿಟೆಕ್ಷನ್, ಎಕ್ಸ್ಪ್ಲೋಸಿವ್ ಡಿಟೆಕ್ಷನ್, ಇನ್ಫಾಂಟ್ರಿ ಪಟ್ರೋಲಿಂಗ್, ಅವಲಾಂಚೆ ರೆಸ್ಕ್ಯೂ ಆಪರೇಷನ್, ಸರ್ಷ್ ಅಂಡ್ ರೆಸ್ಕ್ಯೂ ಅಂಡ್ ನಾರ್ಕೊಟಿಕ್ ಡಿಟೆಕ್ಷನ್ನಲ್ಲಿ ಕೆಲಸ ಮಾಡುತ್ತವೆ. ಈ ಕಾರ್ಯಗಳಿಗೆ ಸೇನೆಯ ಶ್ವಾನಗಳು ಕೆಲಸ ಮಾಡುತ್ತವೆ. ಸೇನೆಯಲ್ಲಿ 25 ಪೂರ್ಣ ಪ್ರಮಾಣದ ಶ್ವಾನದಳ ಹಾಗೂ ಅರ್ಧ ಪ್ರಮಾಣದ ಶ್ವಾನದಳಗಳು ಇವೆ. ಪೂರ್ಣ ಪ್ರಮಾಣದ ಶ್ವಾನ ದಳದಲ್ಲಿ 24 ಮತ್ತು ಅರ್ಧ ಪ್ರಮಾಣದ ಶ್ವಾನದಳದಲ್ಲಿ 12 ಶ್ವಾನಗಳು ಇರುತ್ತವೆ.