Axar Patel Engagement: ಹುಟ್ಟುಹಬ್ಬದ ದಿನ ಗೆಳತಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಅಕ್ಷರ್ ಪಟೇಲ್: ಫೋಟೋ ವೈರಲ್

Axar Patel Engaged: ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸ್ವತಃ ಅಕ್ಷರ್ ಅವರೇ ಖಚಿತ ಪಡಿಸಿದ್ದು, ತಮ್ಮ ಇನ್ ಸ್ಟಾಗ್ರಾಂನಲ್ಲಿ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದಕ್ಕೆ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕಮೆಂಟ್ ಕೂಡ ಮಾಡಿದ್ದಾರೆ.

TV9 Web
| Updated By: Vinay Bhat

Updated on: Jan 21, 2022 | 11:02 AM

ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಅಕ್ಷರ್ ಪಟೇಲ್ ಗುರುವಾರ (ಜ. 20) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹುಟ್ಟುಹಬ್ಬ ಇವರಿಗೆ ಸಾಕಷ್ಟು ವಿಶೇಷವಾಗಿತ್ತು. ಅಕ್ಷರ್ ಅವರು ತಮ್ಮ ಜನ್ಮದಿನದಂದೇ ಗೆಳತಿ ಮೇಹಾ ಅವರಿಗೆ ಪ್ರಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

1 / 6
ಈ ಬಗ್ಗೆ ಸ್ವತಃ ಅಕ್ಷರ್ ಅವರೇ ಖಚಿತ ಪಡಿಸಿದ್ದು, ತಮ್ಮ ಇನ್ ಸ್ಟಾಗ್ರಾಂನಲ್ಲಿ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದಕ್ಕೆ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕಮೆಂಟ್ ಕೂಡ ಮಾಡಿದ್ದಾರೆ.

2 / 6
ಅಕ್ಷರ್ ಹಂಚಿಕೊಂಡಿರುವ ಫೋಟೋದಲ್ಲಿ ಇವರು ಮೇಹಾ ಅವರಿಗೆ ಮಂಡಿಯೂರಿ ಲವ್ ಪ್ರಪೋಸ್ ಮಾಡುತ್ತಿದ್ದಾರೆ. ಅಲ್ಲದೆ ಇವರ ಹಿಂಭಾಗದಲ್ಲಿ ಮ್ಯಾರಿ ಮೀ ಎಂದು ಬರೆದಿರುವುದು ಕಾಣಿಸುತ್ತಿದೆ.

3 / 6
ಇಂದು ನಮ್ಮ ಜೀವನದ ಹೊಸ ಅಧ್ಯಾಯ ಆರಂಭವಾಗಲಿದೆ. ಇಂದಿಗೂ-ಎಂದೆಂದಿಗೂ ಎಂದು ತಮ್ಮ ಇನ್​ಸ್ಟಾದಲ್ಲಿ ಅಕ್ಷರ್ ಬರೆದುಕೊಂಡಿದ್ದಾರೆ.

4 / 6
ಅಕ್ಷರ್ ಅವರು ಸದ್ಯ ಇಂಜುರಿಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದಿಂದ ಹೊರಗುಳಿದಿದ್ದಾರೆ. ಮುಂದಿನ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಇವರು ಅನುಮಾನ ಎನ್ನಲಾಗುತ್ತಿದೆ.

5 / 6
ಎಡಗೈ ಸ್ಪಿನ್ನರ್ ಅಕ್ಷರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ಆರಂಭ ಪಡೆದಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಚೊಚ್ಚಲ ಸರಣಿಯಲ್ಲಿ 3 ಟೆಸ್ಟ್​ಗಳಲ್ಲಿ 27 ವಿಕೆಟ್ಗಳನ್ನು ಪಡೆದರು. ಇನ್ನು ನ್ಯೂಜಿಲೆಂಡ್ ವಿರುದ್ಧ ನಿಧಾನಗತಿಯ ಕಾನ್ಪುರ ಪಿಚ್​ನಲ್ಲಿ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದ್ದರು.

6 / 6
Follow us