Viral: ಕೋತಿಮರಿ ವಿಡಿಯೋ ನೋಡಿ ಮಗನಿಗೆ ಹೋಲಿಸಿ ಕಾಮೆಂಟ್​ ಮಾಡಿದ ಎಲೋನ್ ​ಮಸ್ಕ್

ಖಾಸಗಿ ಬಾಹ್ಯಾಕಾಶ ನೌಕೆ 'ಸ್ಪೇಸ್-ಎಕ್ಸ್'ನ ಸಂಸ್ಥಾಪಕ ಎಲನ್​ ಮಸ್ಕ್​ ಅವರು ಕೋತಿಮರಿಯ ವಿಡಿಯೋವೊಂದಕ್ಕೆ ತಮ್ಮ ಒಂದುವ ರ್ಷದ ಮಗನನ್ನು ಹೋಲಿಕೆ ಮಾಡಿ ಕಾಮೆಂಟ್​ ಮಾಡಿದ್ದಾರೆ.

Viral: ಕೋತಿಮರಿ ವಿಡಿಯೋ ನೋಡಿ ಮಗನಿಗೆ ಹೋಲಿಸಿ ಕಾಮೆಂಟ್​ ಮಾಡಿದ ಎಲೋನ್ ​ಮಸ್ಕ್
ಎಲೋನ್​ ಮಸ್ಕ್​
Follow us
TV9 Web
| Updated By: Pavitra Bhat Jigalemane

Updated on:Jan 22, 2022 | 9:54 AM

ಖಾಸಗಿ ಬಾಹ್ಯಾಕಾಶ ನೌಕೆ ‘ಸ್ಪೇಸ್-ಎಕ್ಸ್’ (SpaceX)ನ ಸಂಸ್ಥಾಪಕ,ಟೆಸ್ಲಾ ಸಿಇಒ ಎಲೋನ್​ ಮಸ್ಕ್(Elon Musk)​ ಅವರು ಕೋತಿಮರಿಯ ವಿಡಿಯೋವೊಂದಕ್ಕೆ ತಮ್ಮ ಒಂದು ವರ್ಷದ ಮಗನನ್ನು ಹೋಲಿಕೆ ಮಾಡಿ ಕಾಮೆಂಟ್​ ಮಾಡಿದ್ದಾರೆ. ಸದ್ಯ ವಿಡಿಯೋ ಮತ್ತು ಕಾಮೆಂಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೆಕ್​ ಬಿಲಿಯನೆರ್​ (Tech Billionaire) ಎಲೋನ್​ ಮಸ್ಕ್​ ಅವರು ತಮ್ಮ ಮಗನನ್ನುಕೋತಿಯ ಮರಿಗೆ ಹೋಲಿಕೆ ಮಾಡಿದ ವಿಡಿಯೋ ಸಖತ್​ ವೈರಲ್​ ಅಗಿದೆ. ಟ್ವಿಟರ್​ನಲ್ಲಿ @Rainmaker1973 ಹೆಸರಿನ ಬಳಕೆದಾರರೊಬ್ಬರು ಕೋತಿಮರಿಯೊಂದು ಓಡಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಎಲನ್​ ಮಸ್ಕ್​ ಗಮನ ಸೆಳೆದಿದೆ. ವಿಡಿಯೋ ನೋಡಿ ಎಲೋನ್​ ಅವರು ತಮ್ಮ  ಮಗ X Æ A-XII ಕೂಡ ಇದೇ ರೀತಿ ಎಂದಿದ್ದಾರೆ. ಎಲನ್​ ಅವರ ಈ ಕಾಮೆಂಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕೋತಿಮರಿ ಓಡಾಡುತ್ತಿರುವ ವಿಡಿಯೋವನ್ನು 2020ರಲ್ಲಿ ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಎನ್ನುವವರು ಹಂಚಿಕೊಂಡಿದ್ದರು. ಇದೀಗ ಅದೇ ವಿಡಿಯೋವನ್ನು @Rainmaker1973 ಎನ್ನುವ ಬಳಕೆದಾರರು ಹಂಚಿಕೊಂಡಿದ್ದು, ಎಲನ್​ ಮಸ್ಕ್​ ಗಮನ ಸೆಳೆದಿದೆ. ಎಲನ್​ ಮಸ್ಕ್ ಮಗ ಬೇಬಿ x  2021ರ ಮೇ 5 ರಂದು ಜನಿಸಿದ್ದರು.  ಕಳೆದ ವರ್ಷ ಎಲನ್​ ಮಸ್ಕ್​ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲನ್ ಇತ್ತೀಚೆಗೆ ಪತ್ನಿ ಗ್ರಿಮ್ಸ್​ರಿಂದ ಬೇರೆಯಾಗುವುದಾಗಿ ಘೋಷಿಸಿದ್ದರು. ಬೇರೆ ಬೇರೆಯಾದ ಮೇಲೇ ಕೂಡ  ಸ್ನೇಹಿತರಾಗಿ ಉಳಿಯುತ್ತೇವೆ ಮತ್ತು  ಒಂದು ವರ್ಷದ ಮಗನನ್ನು ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ:

ಅಸ್ತವ್ಯಸ್ತಗೊಂಡ ವಾರ್ಡ್​ರೋಬ್ ಸರಿಪಡಿಸಿ ಕೈತುಂಬಾ ಸಂಪಾದನೆ ಮಾಡುತ್ತಿರುವ 19 ವರ್ಷದ ಯುವತಿ; ತಿಂಗಳಿಗೆ ಗಳಿಸುವ ಹಣವೆಷ್ಟು?

Published On - 9:53 am, Sat, 22 January 22