AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸದ ಅವಧಿ ಮುಗಿದ ಮೇಲೂ ಬಾಸ್ ಕೆಲಸ ಹೇಳಿದರೆ ಅದನ್ನು ಮಾಡಲ್ಲ ಅನ್ನಬಹುದು! ಏನಿದು ಹೊಸ ನಿಯಮ?

ಕೆಲಸದ ಸಮಯದ ನಂತರ ಸ್ವತಃ ಬಾಸ್ ಕೆಲಸ ಹೇಳಿದರೂ ಅದನ್ನು ಮಾಡದೇ ಉಳಿಯಬಹುದು. ಅತಿಯಾದ ಕೆಲಸದ ಒತ್ತಡವನ್ನು ಮತ್ತು ಒತ್ತಡವನ್ನು ಕಡಿಮೆ ಮಾಡುವ ಕಾರಣದಿಂದ ಈ ನಿಯಮಾವಳಿ ಪರಿಚಯಿಸಲಾಗಿದೆ.

ಕೆಲಸದ ಅವಧಿ ಮುಗಿದ ಮೇಲೂ ಬಾಸ್ ಕೆಲಸ ಹೇಳಿದರೆ ಅದನ್ನು ಮಾಡಲ್ಲ ಅನ್ನಬಹುದು! ಏನಿದು ಹೊಸ ನಿಯಮ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 22, 2022 | 8:08 PM

Share

ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ಪತ್ತೆಯಾದ ಬಳಿಕ ಜನರ ಜೀವನ ಶೈಲಿ ಊಹೆಗೂ ಅಸಾಧ್ಯ ಎಂಬಷ್ಟು ಬದಲಾವಣೆ ಕಂಡಿದೆ. ಹಲವು ಮಂದಿ ವರ್ಕ್ ಫ್ರಮ್ ಹೋಮ್, ವರ್ಕ್ ಫ್ರಮ್ ಎನಿವೇರ್ ಸಂಸ್ಕೃತಿಗೆ ಹೊಂದಿಕೊಂಡಿದ್ದಾರೆ. ಮನೆಯಲ್ಲೇ ಕೆಲಸ ಮಾಡುವುದು ಕೆಲವು ಕಾರಣಗಳಿಂದ ಹಲವು ಅನುಕೂಲ ಅನಿಸಿದ್ದರೂ ಇನ್ನು ಕೆಲವು ಕಾರಣಗಳಿಂದ ಸಮಸ್ಯೆ ಅನಿಸಿದೆ. ಕೆಲಸಗಾರರು ತಮ್ಮ ಕೆಲಸದ ಅವಧಿ ಮುಕ್ತಾಯಗೊಂಡರೂ ಕಂಪೆನಿಗಾಗಿ ದುಡಿಯಬೇಕಾಗಿ ಬರುವುದು ಅಂತಹ ಸಮಸ್ಯೆಗಳಲ್ಲಿ ಒಂದು. ಕೆಲಸದ ಅವಧಿ ವಿಸ್ತರಣೆ ಆಗುವುದು ದೊಡ್ಡ ಅಡಚಣೆಯಾಗಿ ಕಂಡಿದೆ. ಲಾಗ ಆಫ್ ಆದ ಬಳಿಕವೂ ಮ್ಯಾನೇಜರ್ ತಲೆ ತಿಂತಾರೆ ಅನ್ನೋದು ಹಲವರ ಅಳಲು. ಇದರಿಂದಾಗಿ ಸುಸ್ತು, ಒತ್ತಡ, ಆಯಾಸ ಕೆಲಸಗಾರರಲ್ಲಿ ಅಧಿಕವಾಗಿದೆ. ಈ ಪರಿಸ್ಥಿತಿಯನ್ನು ಸರಿದೂಗಿಸಲು ಬೆಲ್ಜಿಯಂನಲ್ಲಿ ಹೊಸ ನಿಯಮ ಒಂದನ್ನು ತರಲಾಗಿದೆ.

ಬೆಲ್ಜಿಯಂನ ಸರ್ಕಾರಿ ಕೆಲಸಗಾರರು ತಮ್ಮ ಕೆಲಸದ ಅವಧಿ ಮುಕ್ತಾಯ ಆದ ಬಳಿಕ ಬಾಸ್ ಕೆಲಸ ಮಾಡಲು ಹೇಳಿದರೆ ಅದನ್ನು ಕಡೆಗಣಿಸಬಹುದಾಗಿದೆ. ಕೆಲಸದ ಸಮಯದ ನಂತರ ಸ್ವತಃ ಬಾಸ್ ಕೆಲಸ ಹೇಳಿದರೂ ಅದನ್ನು ಮಾಡದೇ ಉಳಿಯಬಹುದು. ಅತಿಯಾದ ಕೆಲಸದ ಒತ್ತಡವನ್ನು ಮತ್ತು ಒತ್ತಡವನ್ನು ಕಡಿಮೆ ಮಾಡುವ ಕಾರಣದಿಂದ ಈ ನಿಯಮಾವಳಿ ಪರಿಚಯಿಸಲಾಗಿದೆ.

ಈ ಪ್ರಕ್ರಿಯೆಗೆ ರೈಟ್ ಟು ಡಿಸ್​ಕನೆಕ್ಟ್ ಎಂದು ಹೆಸರಿಡಲಾಗಿದೆ. ಫೆಬ್ರವರಿ 1ನೇ ತಾರೀಖಿನಿಂದ ಈ ನಿಯಮ ಕೆಲಸಗಾರರಿಗೆ ಅನ್ವಯ ಆಗಲಿದೆ. ಈ ಬಗ್ಗೆ ಸಿವಿಲ್ ಸರ್ವೀಸ್ ಮಿನಿಸ್ಟರ್ ಪೆಟ್ರಾ ಡೆ ಸಟ್ಟರ್ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ನಿಗದಿತ ಕೆಲಸವನ್ನು ಮಾಡಲು ಮುಂದಿನ ಕೆಲಸದ ಅವಧಿಯ ವರೆಗೆ ಕಾಯಲು ಆಗದೇ ಇರುವ ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಕೆಲಸಗಾರರನ್ನು ಹೆಚ್ಚಿನ ಅವಧಿ ಕೆಲಸ ಮಾಡುವಂತೆ ಕೇಳಿ ಸಂಪರ್ಕಿಸಬಹುದಾಗಿದೆ. ಈ ಹೊಸ ನಿಯಮವು ಕೆಲಸಗಾರರಿಗೆ ಉತ್ತಮ ಕೆಲಸ ಮಾಡುವಂತೆ ಮತ್ತು ಅವರ ಚೈತನ್ಯ ಉಳಿಸುವಂತೆ ನೋಡಿಕೊಳ್ಳುವ ಉದ್ದೇಶದಿಂದ ಮಾಡಲಾಗಿದೆ. ಈ ನಿಯಮ ಮುರಿದರೆ ಏನು ಶಿಕ್ಷೆ ಎಂಬ ಬಗ್ಗೆ ಉಲ್ಲೇಖ ಮಾಡಿಲ್ಲ.

ಈ ಮೊದಲು ಪೋರ್ಚುಗಲ್ ಸರ್ಕಾರ ಇದೇ ರೀತಿಯ ನಿಯಮ ಒಂದನ್ನು ಪರಿಚಯಿಸಿತ್ತು. ಅದರಂತೆ ಟೀಮ್ ಬಾಸ್​ಗಳು ಹಾಗೂ ಕೆಲಸಗಾರರು ಕೆಲಸದ ಅವಧಿಯ ನಂತರ ಮೆಸೇಜ್ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಒಂದು ವೇಳೆ ಕೆಲಸದ ಅವಧಿಯ ನಂತರ ಕೆಲಸಗಾರರನ್ನು ಇಲ್ಲಿ ಸಂಪರ್ಕಿಸಿದರೆ ಅವರಿಗೆ ದಂಡ ವಿಧಿಸುವ ಬಗ್ಗೆಯೂ ನಿಯಮದಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ: Viral Video;ಕೊರೋನಾ ವಡೆ ತಯಾರಿಸಿ ರೆಸಿಪಿ ವಿಡಿಯೋ ಹಂಚಿಕೊಂಡ ಮಹಿಳೆ

ಇದನ್ನೂ ಓದಿ: Viral Video: ಮೊಬೈಲ್​ನಲ್ಲಿ ತಮ್ಮದೇ ರೀತಿ ಇರುವ ಪ್ರಾಣಿಗಳನ್ನು ನೋಡಿ ಗೊಂದಲಕ್ಕೊಳಗಾದ ಕೋತಿಗಳು

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?