Kulgam Blast: ಕಾಶ್ಮೀರದ ಕುಲ್ಗಾಮ್​ನಲ್ಲಿ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಯಾರಿಪೋರಾ ಮತ್ತು ಖೈಮೂಹ್ ನಡುವಿನ ಪ್ರದೇಶವಾದ ಜಿಯಾರತ್ ಖೈಮೊಹ್-ಕದರ್ ರಸ್ತೆಯಲ್ಲಿ ಉಗ್ರರು ಇಂದು ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕವನ್ನು ಸ್ಫೋಟಿಸಿದ್ದಾರೆ.

Kulgam Blast: ಕಾಶ್ಮೀರದ ಕುಲ್ಗಾಮ್​ನಲ್ಲಿ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 18, 2022 | 7:23 PM

ಕಾಶ್ಮೀರ: ಜಮ್ಮು-ಕಾಶ್ಮೀರದ ಕುಲ್ಗಾಮ್​​ನಲ್ಲಿ (Kulgam) ಐಇಡಿ ಸ್ಫೋಟವಾಗಿದ್ದು, ಭಾರತೀಯ ಸೇನಾ (Indian Army) ವಾಹನಗಳನ್ನು ಗುರಿಯಾಗಿರಿಸಿ ಉಗ್ರರು ದಾಳಿ ನಡೆಸಿದ್ದಾರೆ. ಕುಲ್ಗಾಮ್​ನ ಕಮೋಹ್ ಪ್ರದೇಶದ ಸೇತುವೆ ಬಳಿ ಸ್ಫೋಟ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಯಾರಿಪೋರಾ ಮತ್ತು ಖೈಮೂಹ್ ನಡುವಿನ ಪ್ರದೇಶವಾದ ಜಿಯಾರತ್ ಖೈಮೊಹ್-ಕದರ್ ರಸ್ತೆಯಲ್ಲಿ ಉಗ್ರರು ಇಂದು ಕಡಿಮೆ-ತೀವ್ರತೆಯ ಸುಧಾರಿತ ಸ್ಫೋಟಕವನ್ನು ಸ್ಫೋಟಿಸಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಘಟನೆ ನಡೆದ ಕೂಡಲೇ ಪೊಲೀಸರು ಮತ್ತು ಭಾರತೀಯ ಸೇನೆಯ ತುಕಡಿ ಸ್ಥಳಕ್ಕೆ ಆಗಮಿಸಿ ಘಟನೆ ನಡೆದ ಪ್ರದೇಶವನ್ನು ಸುತ್ತುವರಿದಿದೆ ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ ಒಸಿ)ಯಲ್ಲಿ ಗುರುವಾರ ನಡೆದ ನಿಗೂಢ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಗುಂಡಿನ ದಾಳಿಯ ನಂತರ ಸೇನಾ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದರು. ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ರಜೌರಿಯ ಹಂಜನ್ವಾಲಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಡ್ರಗ್ಸ್​ ಸ್ಮಗ್ಲಿಂಗ್​ ಮಾರ್ಗದಲ್ಲೇ ಸ್ಫೋಟಕಗಳ ಸಾಗಣೆ; ಪಾಕ್​​ ಉಗ್ರರ ಕುತಂತ್ರದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

Jammu Kashmir: ಜಮ್ಮು ಕಾಶ್ಮೀರದಲ್ಲಿ ಹಿಮಪಾತದಲ್ಲಿ ಸಿಲುಕಿದ್ದ 14 ಜನರನ್ನು ರಕ್ಷಿಸಿದ ಭಾರತೀಯ ಸೇನೆ