Jammu Kashmir: ಜಮ್ಮು ಕಾಶ್ಮೀರದಲ್ಲಿ ಹಿಮಪಾತದಲ್ಲಿ ಸಿಲುಕಿದ್ದ 14 ಜನರನ್ನು ರಕ್ಷಿಸಿದ ಭಾರತೀಯ ಸೇನೆ
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತಗಳು ಸಂಭವಿಸಿದ ನಂತರ ಭಾರೀ ಹಿಮದಲ್ಲಿ ಸಿಲುಕಿದ್ದ 14 ನಾಗರಿಕರನ್ನು ಸೇನೆ ರಕ್ಷಣೆ ಮಾಡಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತದಲ್ಲಿ ಸಿಲುಕಿದ್ದ 14 ನಾಗರಿಕರನ್ನು ಭಾರತೀಯ ಸೇನೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಇಂದು ಬೆಳಗ್ಗೆ ಹಿಮಪಾತದಿಂದಾಗಿ ತಂಗ್‌ಧರ್-ಚೌಕಿಬಲ್ ರಸ್ತೆಯನ್ನು ತಡೆಹಿಡಿಯಲಾಗಿತ್ತು. ಈ ಅವಳಿ ಹಿಮಪಾತದಲ್ಲಿ ಒಂದು ಮಗು ಸೇರಿದಂತೆ 14 ನಾಗರಿಕರು ಸಿಲುಕಿಕೊಂಡಿದ್ದರು. ಅವರನ್ನು ಭಾರತೀಯ ಸೈನಿಕರು (Indian Soldiers) ರಕ್ಷಣೆ ಮಾಡಲಾಗಿದ್ದು, ರಕ್ಷಿಸಲ್ಪಟ್ಟ ನಾಗರಿಕರಲ್ಲಿ ತೀವ್ರ ಅಸ್ವಸ್ಥ ಹೃದ್ರೋಗಿಯೂ ಸೇರಿದ್ದಾರೆ. ನಂತರ ಅವರನ್ನು ಹತ್ತಿರದ ಸೇನಾ ಶಿಬಿರಕ್ಕೆ ಕರೆದೊಯ್ದು ಆಹಾರ ಮತ್ತು ಬಿಸಿಯೂಟವನ್ನು ನೀಡಲಾಯಿತು.
ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಪ್ರಯಾಣಿಕರಿಂದ ತುಂಬಿದ ವಾಹನಗಳ ಬಗ್ಗೆ ಮಾಹಿತಿ ಪಡೆದ ನಂತರ, GREF ಜೊತೆಗೆ ಕ್ಯಾಪ್ಟನ್ ಕುಲ್ಜೋತ್ ಸಿಂಗ್ ಅವರ ಅಡಿಯಲ್ಲಿ ನೀಲಂ ಕಂಪನಿಯ ಆಪರೇಟಿಂಗ್ ಬೇಸ್‌ನಿಂದ ಸೇನೆಯ ಹಿಮಪಾತ ರಕ್ಷಣಾ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ ಎಂದು ಸೇನೆಯು ತಿಳಿಸಿದೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತಗಳು ಸಂಭವಿಸಿದ ನಂತರ ಭಾರೀ ಹಿಮದಲ್ಲಿ ಸಿಲುಕಿದ್ದ 14 ನಾಗರಿಕರನ್ನು ಸೇನೆ ರಕ್ಷಣೆ ಮಾಡಿದೆ. ಭಾರತೀಯ ಸೇನೆಯ ವಕ್ತಾರರ ಪ್ರಕಾರ, ಇಂದು ಬೆಳಗ್ಗೆ ಹಿಮದಿಂದ ಉಂಟಾದ ಹಿಮಕುಸಿತಗಳು, ತಂಗ್‌ಧರ್-ಚೌಕಿಬಲ್ ರಸ್ತೆಯನ್ನು ನಿರ್ಬಂಧಿಸಿವೆ. ಒಂದು ಮಗು ಸೇರಿದಂತೆ 14 ನಾಗರಿಕರು ಅವರ ವಾಹನಗಳೊಂದಿಗೆ ಸಿಕ್ಕಿಬಿದ್ದಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡ ಹೃದ್ರೋಗಿ ಸೇರಿದಂತೆ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಪ್ರಯಾಣಿಕರು ತುಂಬಿರುವ ವಾಹನಗಳ ಬಗ್ಗೆ ಮಾಹಿತಿ ಪಡೆದ ನಂತರ GREF ಜೊತೆಗೆ ಕ್ಯಾಪ್ಟನ್ ಕುಲ್ಜೋತ್ ಸಿಂಗ್ ಅವರ ನೇತೃತ್ವದಲ್ಲಿ ನೀಲಂ ಕಂಪನಿ ಆಪರೇಟಿಂಗ್ ಬೇಸ್‌ನಿಂದ ಭಾರತೀಯ ಸೇನೆಯ ಹಿಮಪಾತ ರಕ್ಷಣಾ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ ಎಂದು ಸೇನಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Army Men Rescue 14 Civilians Who Were Stuck Due To An Avalanche in Tanghdar-Chowkibal {Kupwara}.@adgpi@westerncomd_IA pic.twitter.com/LHmr5FX4vO
— Aatif Qayoom (@Aatif_Qayoom1) January 18, 2022
ಸಿಕ್ಕಿಬಿದ್ದ ಪ್ರಯಾಣಿಕರನ್ನು ನಂತರ ಸೇನಾ ತಂಡವು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಸೇನೆ ಹೇಳಿದೆ. ರಕ್ಷಿಸಲ್ಪಟ್ಟ ನಾಗರಿಕರು ಸಮಯೋಚಿತ ಕ್ರಮಕ್ಕಾಗಿ ಮತ್ತು ತಮ್ಮ ಜೀವಗಳನ್ನು ಉಳಿಸಿದ್ದಕ್ಕಾಗಿ ಸೇನೆಗೆ ಕೃತಜ್ಞತೆ ಸಲ್ಲಿಸಿದರು ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಲಡಾಖ್: ಕಾರ್ಗಿಲ್ನಲ್ಲಿ ಸಂಭ್ರಮದ ಪೊಂಗಲ್ ಆಚರಿಸಿದ ಭಾರತೀಯ ಸೈನಿಕರು; ವಿಡಿಯೋ ಇಲ್ಲಿದೆ
Indian Army Recruitment: ಭಾರತೀಯ ಸೇನೆಗೆ ಸೇರಬೇಕಾ?; ಆರ್ಮಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ
Published On - 3:43 pm, Tue, 18 January 22