AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜ್ ಡ್ರಾಪ್ಔಟ್, ಸ್ಟ್ಯಾಂಡಪ್ ಕಾಮಿಡಿಯನ್ ಈಗ ಆಮ್ ಆದ್ಮಿ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ; ಇಲ್ಲಿದೆ ಭಗವಂತ್ ಮಾನ್ ಪರಿಚಯ

Bhagwant Mann ಕಾಲೇಜ್ ಡ್ರಾಪ್ಔಟ್ ಆಗಿದ್ದ ಮಾನ್ ಭಾರತದ ಅತ್ಯಂತ ಜನಪ್ರಿಯ ಸ್ಟ್ಯಾಂಡ್ಅಪ್ ಕಾಮಿಡಿಯನ್​​ಗಳಲ್ಲಿ ಒಬ್ಬರಾಗಿದ್ದರು. ನಂತರ ಪಂಜಾಬ್​​ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ನಾಯಕರಾಗಿದ್ದರು.

ಕಾಲೇಜ್ ಡ್ರಾಪ್ಔಟ್, ಸ್ಟ್ಯಾಂಡಪ್ ಕಾಮಿಡಿಯನ್ ಈಗ ಆಮ್ ಆದ್ಮಿ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ; ಇಲ್ಲಿದೆ ಭಗವಂತ್ ಮಾನ್ ಪರಿಚಯ
ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್
TV9 Web
| Edited By: |

Updated on: Jan 18, 2022 | 4:21 PM

Share

ಏಕ ಕಾಲದಲ್ಲಿ ವ್ಯಂಗ್ಯ, ತಿರಸ್ಕಾರ ಮತ್ತು ಗಂಭೀರವಾಗಿ ಇರಬಲ್ಲ ವ್ಯಕ್ತಿ ಭಗವಂತ್ ಮಾನ್ (Bhagwant Mann). 48 ವರ್ಷ ವಯಸ್ಸಿನ ಸಂಗ್ರೂರ್ ಸಂಸದ ಭಗವಂತ್ ಮಾನ್ ಈಗ ಆಮ್ ಆದ್ಮಿ ಪಕ್ಷದ (AAP) ಸಿಎಂ ಅಭ್ಯರ್ಥಿ. ಫೋನ್ ಲೈನ್ ಸಮೀಕ್ಷೆಯಲ್ಲಿ ಶೇಕಡಾ 93 ಕ್ಕಿಂತ ಹೆಚ್ಚು ಮಂದಿ ಮಾನ್ ಅವರಿಗೆ ಮತ ಚಲಾಯಿಸಿದ್ದು ಅವರನ್ನು ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅರವಿಂದ ಕೇಜ್ರಿವಾಲ್(Arvind Kejriwal) ಮಂಗಳವಾರ ಘೋಷಣೆ ಮಾಡಿದ್ದಾರೆ. ಕಾಲೇಜ್ ಡ್ರಾಪ್ಔಟ್ ಆಗಿದ್ದ ಮಾನ್ ಭಾರತದ ಅತ್ಯಂತ ಜನಪ್ರಿಯ ಸ್ಟ್ಯಾಂಡ್ಅಪ್ ಕಾಮಿಡಿಯನ್​​ಗಳಲ್ಲಿ ಒಬ್ಬರಾಗಿದ್ದರು. ನಂತರ ಪಂಜಾಬ್​​ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ನಾಯಕರಾಗಿದ್ದರು.  2011 ರಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ಅವರ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್‌ನೊಂದಿಗೆ ಸೇರುವ ಮೂಲಕ ಮಾನ್ ಅವರ ಸಕ್ರಿಯ ರಾಜಕಾರಣ ಪಯಣ ಪ್ರಾರಂಭವಾಯಿತು. ಆದರೆ ಆ ಚೊಚ್ಚಲ ಪ್ರವೇಶವು ಆರಂಭದಲ್ಲೇ ವಿಫಲವಾಯಿತು. ಒಂದು ವರ್ಷದ ನಂತರ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನ್ ಪರಾಭವಗೊಂಡರು .

ಆಮ್ ಆದ್ಮಿ ಪಕ್ಷಕ್ಕೆ ಪ್ರವೇಶ

ಮಾನ್ ಮಾರ್ಚ್ 2014 ರಲ್ಲಿ ಎಎಪಿಗೆ ಸೇರಿದಾಗ ಮಾನ್ ಅವರು ತಮ್ಮ ತವರು ಜಿಲ್ಲೆ ಸಂಗ್ರೂರ್‌ನಿಂದ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾದರು. ರಾಜಕೀಯದಲ್ಲಿ, 2019 ರಲ್ಲಿ ಎಎಪಿಯ ಲೋಕಸಭೆಯ ಸ್ಪರ್ಧೆಯಲ್ಲಿ ಮಾನ್ ಮಾತ್ರ ಬೆಳ್ಳಿ ಗೆರೆಯಾಗಿದ್ದರು. ಸಂಗ್ರೂರ್ ಸ್ಥಾನವನ್ನು ಉಳಿಸಿಕೊಂಡರೂ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಡಿಮೆಯಾಗಿತ್ತು. ಪಂಜಾಬ್‌ನ ಮಾಲ್ವಾ ಪ್ರದೇಶದ ಸಂಗ್ರೂರ್, ತನ್ನ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಿಂದ ರಾಜ್ಯ ಶಾಸಕಾಂಗದಲ್ಲಿ ಸ್ಥಾನ ಪಡೆಯಲು ಮಾನ್ ಅವರ ಸಂಭವನೀಯ ಎರಡನೇ ಪ್ರಯತ್ನ ಇದಾಗಿದೆ. ಅವರು ಇಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವಂತೆ ತೋರುತ್ತಿದೆ.  ಸಂಗ್ರೂರಿನ ಭಾಸೌರ್ ಹಳ್ಳಿಯ ಚೌಪಾಲ್‌ನಲ್ಲಿ ಕುಳಿತಿರುವ ಹಿರಿಯ ರೈತರೊಬ್ಬರು “ಮಾನ್ ಜಂಭದ ಮನುಷ್ಯ ಅಲ್ಲ ” ಎಂದು ಹೇಳಿದರು. ಪಕ್ಕದಲ್ಲಿ ನಿಂತಿದ್ದ ಯುವಕನೊಬ್ಬ ಮಾನ್ “ಅವರಿಂದಾಗಿ ನಾವು ಮತದಾರರಾಗಿ ಮತ್ತು ನಾಗರಿಕರಾಗಿ ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಿದ್ದೇವೆ ಎಂದು ಹೇಳಿರುವುದಾಗಿ ಇಂಡಿಯಾ  ಟುಡೇ ವರದಿ ಮಾಡಿದೆ.

ವಿವಾದಗಳು

ಮಾನ್ ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಸಂಸದ. ಇವರು ಸಂಸತ್ ಕಲಾಪಕ್ಕೆ ಮದ್ಯಪಾನ ಮಾಡಿ ಬಂದಿದ್ದರು, ಸಂಸತ್ ಭದ್ರತಾ ವ್ಯವಸ್ಥೆಯಲ್ಲಿ ರಾಜಿ ಮಾಡಿದ್ದರು ಎಂಬ ಆರೋಪವಿದೆ. ಅವರ ಈ ವರ್ತನೆಯಿಂದ ಆದ ಹಾನಿ ಸರಿಪಡಿಸಲು ಮಾನ್, ಎರಡು ವರ್ಷಗಳ ಹಿಂದೆ ಬರ್ನಾಲಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ತಾನು ಇನ್ಮುಂದೆ ಮದ್ಯಪಾನ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ವೈಯಕ್ತಿಕ ಬದುಕು

2015 ರಲ್ಲಿ ಮಾನ್ ಮತ್ತು ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಮಗಳು ಮತ್ತು ಒಬ್ಬ ಮಗ ವಿದೇಶದಲ್ಲಿ ವಾಸಿಸುತ್ತಿದ್ದಾರೆ.

ಮುಂದಿದೆ ಸವಾಲು

ಭಗವಂತ್ ಮಾನ್ ಅವರ ಸವಾಲು ಈ ಬಾರಿ ಮಹತ್ವದ್ದಾಗಿದೆ. ಕಳೆದ ಮತ್ತು ಈ ಬಾರಿಯ ವಿಧಾನಸಭಾ ಚುನಾವಣೆಯ ನಡುವೆ ಹೋರಾಟ ಬಹು ಧ್ರುವೀಯವಾಗಿದೆ. ಪಂಜಾಬ್‌ನಲ್ಲಿ ಎಎಪಿಯ ಹೆಮ್ಮೆ ಎಂದು ಶ್ಲಾಘಿಸಲ್ಪಟ್ಟ ಮಾನ್, ಆಮ್ ಆದ್ಮಿ ಪಕ್ಷದ ಸಾರಥಿಯಾಗಿ ಪಂಜಾಬ್ ನಲ್ಲಿನ ಪಂಚಕೋನದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ.

ಇದನ್ನೂ ಓದಿ: Congress Candidate List Punjab: ಪಂಜಾಬ್​ನಲ್ಲಿ ಕಾಂಗ್ರೆಸ್​ನಿಂದ ನವಜೋತ್ ಸಿಂಗ್ ಸಿಧು, ಸಿಎಂ ಚನ್ನಿ ಸೇರಿ 86 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು