ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕೆಲವೇ ದಿನಗಳ ಹಿಂದೆ ಆರೋಪ ಮಾಡಿದ್ದ ಆಪ್​; ಪಂಜಾಬ್​ ಸಿಎಂ ಸೋದರಳಿಯನ ಮನೆ ಮೇಲೆ ಇ.ಡಿ. ದಾಳಿ

ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕೆಲವೇ ದಿನಗಳ ಹಿಂದೆ ಆರೋಪ ಮಾಡಿದ್ದ ಆಪ್​; ಪಂಜಾಬ್​ ಸಿಎಂ ಸೋದರಳಿಯನ ಮನೆ ಮೇಲೆ ಇ.ಡಿ. ದಾಳಿ
ಪಂಜಾಬ್ ಸಿಎಂ ಚಿತ್ರ

ಪಂಜಾಬ್​​ನಲ್ಲಿ ಫೆ.20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿಂದೆ ಫೆ.14ರಂದು ಮತದಾನ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ ಗುರು ರವಿದಾಸರ ಜಯಂತಿ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.

TV9kannada Web Team

| Edited By: Lakshmi Hegde

Jan 18, 2022 | 12:04 PM

ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ಅವರ ಸಂಬಂಧಿಯೊಬ್ಬರ ಮೇಲೆ ಇಂದು ಮುಂಜಾನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ದಾಳಿ ಮಾಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಡಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಮೊಹಾಲಿ ಸೇರಿ ಪಂಜಾಬ್​​ನ ಸುಮಾರು 10-12 ಸ್ಥಳಗಳಲ್ಲಿ ಇಡಿ ದಾಳಿಯಾಗಿದೆ. ಅದರಲ್ಲಿ ಛನ್ನಿ ಸಂಬಂಧಿಗಳಿಗೆ ಸೇರಿದ ಸ್ಥಳವೂ ಸಿಕ್ಕಿದೆ. ಅಂದಹಾಗೆ, ಅಕ್ರಮ ಮರಳು ಗಣಿಗಾರಿಕೆ ಆರೋಪ ಹೊತ್ತಿರುವವರ ಹೆಸರು  ಭೂಪಿಂದರ್​ ಸಿಂಗ್​ ಹನಿ ಎಂದಾಗಿದ್ದು, ಪಂಜಾಬ್​ ಮುಖ್ಯಮಂತ್ರಿಮಂತ್ರಿಯ ಸೋದರಳಿಯನೇ ಆಗಿದ್ದಾರೆ  ಎಂದೂ ಹೇಳಲಾಗಿದೆ.  ಪಂಜಾಬ್​​ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಪಟ್ಟಂತೆ ಅಕ್ರಮ ಹಣವರ್ಗಾವಣೆಯಲ್ಲಿ ಭಾಗಿಯಾಗಿರುವ ಕಂಪನಿಗಳ ವಿರುದ್ಧ ಇ.ಡಿ.ತನಿಖೆ ನಡೆಸುತ್ತಿದೆ. ಈ ಭಾಗವಾಗಿ ದಾಳಿಗಳನ್ನು ನಡೆಸುತ್ತಿದ್ದು, ಇದರಲ್ಲಿ ಪಂಜಾಬ್​ ಸಿಎಂ ಸೋದರಳಿಯನ ಹೆಸರೂ ಕೇಳಿಬರುತ್ತಿದೆ. 

ಪಂಜಾಬ್​​ನಲ್ಲಿ ಫೆ.20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿಂದೆ ಫೆ.14ರಂದು ಮತದಾನ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ ಗುರು ರವಿದಾಸರ ಜಯಂತಿ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ಮತ್ತು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿದ ಇಲೆಕ್ಷನ್​ ಕಮಿಷನ್​ ನಿನ್ನೆ ಮತ್ತೊಮ್ಮೆ ಹೊಸತಾದ ಪ್ರಕಟಣೆ ಹೊರಡಿಸಿದೆ. ಅದರಂತೆ ಪಂಜಾಬ್​ ಚುನಾವಣೆ ಫೆ.20ರಂದು ನಡೆಯಲಿದ್ದು, ಮತ ಎಣಿಕೆ ಮಾರ್ಚ್​ 10ಕ್ಕೆ ನಡೆಯಲಿದೆ.

ಯಾವುದೇ ಚುನಾವಣೆ ಬಂದಾಗಲೂ ಕೇಂದ್ರ ಬಿಜೆಪಿ ಸರ್ಕಾರ ತನಿಖಾ ದಳಗಳನ್ನು ಮುಂದೆಬಿಟ್ಟು ಪ್ರತಿಪಕ್ಷಗಳ ಮೇಲೆ ದಾಳಿ ನಡೆಸುತ್ತದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಹಲವು ಸಾರಿ ಮಾಡಿವೆ. ಇದೀಗ ಪಂಜಾಬ್​​ನಲ್ಲಿ ನಡೆದ ಇ.ಡಿ.ದಾಳಿಯನ್ನೂ ಕೆಲವರು ಅದಕ್ಕೇ ತಳುಕು ಹಾಕಿ ಮಾತನಾಡುತ್ತಿದ್ದಾರೆ. ಆದರೆ ಪಂಜಾಬ್​​ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚುತ್ತಿರುವ ಬಗ್ಗೆ ಆಮ್​ ಆದ್ಮಿ ಪಕ್ಷ ಕೂಡ ಧ್ವನಿ ಎತ್ತಿತ್ತು ಪಂಜಾಬ್​​ನಲ್ಲಿ ಅದರಲ್ಲೂ ಮುಖ್ಯಮಂತ್ರಿ ಛನ್ನಿ ಅವರ ಸ್ವಕ್ಷೇತ್ರ ಚಮಕೌರ್​ ಸಾಹಿಬ್​​ನಲ್ಲಿಯೇ  ಅಕ್ರಮ ಮರಳು ಗಣಿಗಾರಿಕೆ  ಜಾಸ್ತಿಯಾಗುತ್ತಿದೆ ಎಂದು ಆರೋಪಿಸಿತ್ತು.

ಇದನ್ನೂ ಓದಿ: Theatre : ಗಂಡುಹೆಣ್ಣುಗಳ ನಡುವಿನ ಅಭೀಪ್ಸೆಯ ತೊಳಲಾಟದ ‘ಚದುರಂಗ ಮತ್ತು ಕತ್ತೆ’ ನಾಳೆ ರಂಗಶಂಕರದಲ್ಲಿ

Follow us on

Related Stories

Most Read Stories

Click on your DTH Provider to Add TV9 Kannada