Crime News: ಬ್ಲಾಕ್ ಮ್ಯಾಜಿಕ್ ಶಂಕೆ; ವೃದ್ಧ ದಂಪತಿಯನ್ನು ಕೊಂದು, ಗುಡಿಸಲಲ್ಲಿ ಸುಟ್ಟು ಹಾಕಿದ ಯುವಕ

Murder News Today: ಮೃತ ದಂಪತಿಗಳು ಮಾಡಿದ ‘ಬ್ಲಾಕ್ ಮ್ಯಾಜಿಕ್’ನಿಂದಾಗಿ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿ ಅನುಮಾನದಿಂದ ಆ ಯುವಕ ಈ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

Crime News: ಬ್ಲಾಕ್ ಮ್ಯಾಜಿಕ್ ಶಂಕೆ; ವೃದ್ಧ ದಂಪತಿಯನ್ನು ಕೊಂದು, ಗುಡಿಸಲಲ್ಲಿ ಸುಟ್ಟು ಹಾಕಿದ ಯುವಕ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 18, 2022 | 2:06 PM

ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಹಳ್ಳಿಯೊಂದರ ಬಳಿ ವೃದ್ಧ ದಂಪತಿಯನ್ನು ಅವರ ಗುಡಿಸಲಿನಲ್ಲಿ ಬೆಂಕಿ ಹಚ್ಚಿ ಕೊಲ್ಲಲಾಗಿದೆ. ಅವರ ದೇಹದ ಸುಟ್ಟ ಅವಶೇಷಗಳು ಪತ್ತೆಯಾದ ಕೆಲವೇ ದಿನಗಳಲ್ಲಿ ‘ಬ್ಲ್ಯಾಕ್ ಮ್ಯಾಜಿಕ್’ (Black Magic) ಅಭ್ಯಾಸ ಮಾಡಿದ ಶಂಕೆಯ ಮೇಲೆ ಅವರನ್ನು ಕೊಂದ ಆರೋಪದ ಮೇಲೆ ಅವರ ಸಂಬಂಧಿಯಾದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ (Murder) ಮಾಡಿದ ಆರೋಪಿಯನ್ನು ದಯಾರಾಮ್ ಕುಲಸ್ತೆ ಎಂದು ಗುರುತಿಸಲಾಗಿದ್ದು, ಆತ ಮೃತ ಸುಮೇರ್ ಸಿಂಗ್ ಕುಲಸ್ತೆ (60) ಮತ್ತು ಅವರ ಪತ್ನಿ ಸಿಯಾಬಾಯಿ (55) ಅವರ ಸೋದರಳಿಯನಾಗಿದ್ದಾನೆ.

ಆರೋಪಿಯನ್ನು ಸೋಮವಾರ ಬರೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿನೋಟಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶಿವೇಂದ್ರ ಸಿಂಗ್ ತಿಳಿಸಿದ್ದಾರೆ. ಜನವರಿ 9 ಮತ್ತು 10ರ ಮಧ್ಯರಾತ್ರಿ ಚೌರೈ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಆರೋಪಿ ಸುಮೇರ್ ಸಿಂಗ್ ಮತ್ತು ಅವರ ಪತ್ನಿಯನ್ನು ಹರಿತವಾದ ಉಪಕರಣದಿಂದ ಕೊಂದು ಅವರ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೃತ ದಂಪತಿಗಳು ಮಾಡಿದ ‘ಬ್ಲಾಕ್ ಮ್ಯಾಜಿಕ್’ನಿಂದಾಗಿ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿ ಅನುಮಾನದಿಂದ ಆ ಯುವಕ ಈ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ದಯಾರಾಮ್ ತನ್ನ ತಂದೆಯ ಒಡೆತನದ ಭೂಮಿಯನ್ನು ಅತಿಕ್ರಮಣ ಮಾಡಿದ ಆರೋಪದ ಸುಮೇರ್ ಸಿಂಗ್ ವಿರುದ್ಧವೂ ಅವರು ದ್ವೇಷವನ್ನು ಹೊಂದಿದ್ದರು ಎನ್ನಲಾಗಿದೆ.

ತನಿಖೆಯ ಪ್ರಕಾರ, ಜನವರಿ 9ರಂದು ರಾತ್ರಿ ಚೌರೈ ಗ್ರಾಮದಲ್ಲಿದ್ದ ದಯಾರಾಮ್ ಕುಲಸ್ತೆ ಈ ಘಟನೆಯ ನಂತರ ನಾಪತ್ತೆಯಾಗಿದ್ದ ಎಂದು ಪೊಲೀಸ್ ತಿಳಿಸಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Murder: ಆಲ್ಕೋಹಾಲ್​ ಖರೀದಿಸಲು ಹಣ ಕೊಡದ ಗರ್ಭಿಣಿ ಹೆಂಡತಿಯನ್ನು ಕೊಂದ ಗಂಡ

Murder: ಮರುಮದುವೆಯಾಗಲು ಮುಂದಾದ 80 ವರ್ಷದ ತಂದೆಯನ್ನು ಕೊಚ್ಚಿ ಕೊಂದ ಮಗ!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್