ನಾಪತ್ತೆಯಾಗಿದ್ದ ನಟಿ ರೈಮಾ ಗೋಣಿಚೀಲದಲ್ಲಿ ಶವವಾಗಿ ಪತ್ತೆ; ತಾನೇ ಕೊಂದಿದ್ದು ಎಂದು ಒಪ್ಪಿಕೊಂಡ ಗಂಡ!

ನಾಪತ್ತೆಯಾಗಿದ್ದ ನಟಿ ರೈಮಾ ಗೋಣಿಚೀಲದಲ್ಲಿ ಶವವಾಗಿ ಪತ್ತೆ; ತಾನೇ ಕೊಂದಿದ್ದು ಎಂದು ಒಪ್ಪಿಕೊಂಡ ಗಂಡ!
ರೈಮಾ ಇಸ್ಲಾಂ ಶಿಮು

Raima Islam Shimu: ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ನಾಪತ್ತೆಯಾಗಿ 2 ದಿನಗಳ ಬಳಿಕ ಆಕೆಯ ಹೆಣ ಗೋಣಿಚೀಲದಲ್ಲಿ ಪತ್ತೆಯಾಗಿದೆ. ಆಕೆಯ ಗಂಡನೇ ಈ ಕೊಲೆಯನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

TV9kannada Web Team

| Edited By: Sushma Chakre

Jan 19, 2022 | 1:00 PM

ಡಾಕಾ: ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು (Raima Islam Shimu) ಢಾಕಾದ ಹೊರವಲಯದಲ್ಲಿ ಗೋಣಿಚೀಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಶವ ಸೋಮವಾರ (ಜ.17) ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ ಅರೆಬರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೈಮಾ ಇಸ್ಲಾಂ ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಥಳೀಯರು ಈ ಕುರಿತು ಮಾಹಿತಿ ನೀಡಿದ ನಂತರ ಕೆರಣಿಗಂಜ್ ಮಾದರಿ ಠಾಣೆಯ ಪೊಲೀಸರ ತಂಡ ಮೃತದೇಹವನ್ನು (Deadbody) ಹೊರತೆಗೆದಿದೆ.

ಬಾಂಗ್ಲಾದೇಶದ ನಟಿ ರೈಮಾ ದೇಹದ ಮೇಲೆ ಹಲವು ಗಾಯದ ಗುರುತುಗಳಿವೆ. ರೈಮಾ ಇಸ್ಲಾಂ ಶಿಮು ಅವರನ್ನು ಕೊಲೆ ಮಾಡಿ, ನಂತರ ಅವರ ಮೃತದೇಹವನ್ನು ಸೇತುವೆಯ ಬಳಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಎಸ್‌ಎಸ್‌ಎಂಸಿಎಚ್) ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಮಾ ಇಸ್ಲಾಂ ಶಿಮು ಅವರ ಪತಿ ಶೇಖಾವತ್ ಅಲಿ ನೊಬೆಲ್ ಮತ್ತು ಅವರ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸ್ ವಿಚಾರಣೆ ವೇಳೆ ನೊಬೆಲ್ ತಾನೇ ತನ್ನ ಹೆಂಡತಿ ರೈಮಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನನ್ನ ಹೆಂಡತಿ ರೈಮಾಳ ಕೊಲೆಯಲ್ಲಿ ನಾನೂ ಭಾಗಿಯಾಗಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.

Raima Islam Shimu

ರೈಮಾ ಇಸ್ಲಾಂ ಶಿಮು

ಆಕೆಯ ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ, ನೊಬೆಲ್ ಅವರನ್ನು 3 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನೊಬೆಲ್ ತನ್ನ ಹೆಂಡತಿಯನ್ನು ಕೊಲೆ ಮಾಡಲು ಬಹುಶಃ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ತನ್ನ ಮೇಲೆ ಅನುಮಾನ ಬರಬಾರದು ಎಂದು ರೈಮಾ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಗಂಡ ನೊಬೆಲ್ ಭಾನುವಾರ (ಜನವರಿ 16) ಕಲಬಗನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಆಕೆಯ ಶವ ಗೋಣಿಚೀಲದಲ್ಲಿ ಪತ್ತೆಯಾಗಿತ್ತು. ಆಕೆಯ ದೇಹದ ಮೇಲೆ ಗಂಭೀರವಾದ ಗಾಯದ ಗುರುತುಗಳು ಪತ್ತೆಯಾದ ನಂತರ ಆಕೆಯ ಗಂಡ ನೊಬೆಲ್ ಮತ್ತು ಅವರ ಚಾಲಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಯಿತು.

ರೈಮಾ ಅವರ ವೃತ್ತಿಪರ ಜೀವನಕ್ಕೆ ಬರುವುದಾದರೆ, ನಟಿ 1998ರಲ್ಲಿ ಬರ್ತಮನ್ ಅವರ ನಟನೆಗೆ ಪದಾರ್ಪಣೆ ಮಾಡಿದ್ದರು. ರೈಮಾ 25ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಆಕೆ ಬಾಂಗ್ಲಾದೇಶದ ಚಲನಚಿತ್ರೋದ್ಯಮದಲ್ಲಿ ಜನಪ್ರಿಯರಾಗಿದ್ದರು. ಅವರು ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹ ಸದಸ್ಯರಾಗಿದ್ದರು. ರೈಮಾ ಟಿವಿ ಕಾರ್ಯಕ್ರಮಗಳಲ್ಲಿ ಕೂಡ ಕೆಲಸ ಮಾಡಿದ್ದರು. ಕೆಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದರು.

ಇದನ್ನೂ ಓದಿ: Murder: ಮರುಮದುವೆಯಾಗಲು ಮುಂದಾದ 80 ವರ್ಷದ ತಂದೆಯನ್ನು ಕೊಚ್ಚಿ ಕೊಂದ ಮಗ!

Shocking News: ಪ್ರಾಣಿ ಬಲಿ ವೇಳೆ ಕುರಿಯ ಬದಲು ಮನುಷ್ಯನ ತಲೆ ಕತ್ತರಿಸಿದ ಕುಡುಕ!

Follow us on

Related Stories

Most Read Stories

Click on your DTH Provider to Add TV9 Kannada