ಲಡಾಖ್: ಕಾರ್ಗಿಲ್​ನಲ್ಲಿ ಸಂಭ್ರಮದ ಪೊಂಗಲ್ ಆಚರಿಸಿದ ಭಾರತೀಯ ಸೈನಿಕರು; ವಿಡಿಯೋ ಇಲ್ಲಿದೆ

Pongal Celebrations: ಕಾರ್ಗಿಲ್​ನಲ್ಲಿ ಭಾರತೀಯ ಸೈನಿಕರು ಸಂಭ್ರಮದಿಂದ ಪೊಂಗಲ್ ಹಬ್ಬವನ್ನು ಆಚರಿಸಿದ್ದಾರೆ. ಇದೇ ವೇಳೆ ದೇಶದ ಜನರಿಗೂ ಶುಭಾಶಯ ಕೋರಿದ್ದಾರೆ.

ಲಡಾಖ್: ಕೊರೆಯುವ ಚಳಿಯಲ್ಲೂ ಸೈನಿಕರು ದೇಶ ಕಾಯುತ್ತಿದ್ದಾರೆ. ಹಾಗೆಯೇ ಹಬ್ಬದ ಸಂದರ್ಭದಲ್ಲಿ ದೇಶದ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಹಿಮಾಚ್ಛಾದಿತ ಪ್ರದೇಶದಲ್ಲಿ ಪೊಂಗಲ್ ಸಂಭ್ರಮಾಚರಣೆಯ (Pongal Celebrations) ವಿಡಿಯೋವನ್ನು ಭಾರತೀಯ ಸೇನೆ ಹಂಚಿಕೊಂಡಿದೆ. ಲಡಾಖ್‌ (Ladakh) ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರ್ಗಿಲ್​ನಲ್ಲಿ ಭಾರತೀಯ ಸೈನಿಕರು ಸಂಭ್ರಮದಿಂದ ಪೊಂಗಲ್ ಹಬ್ಬ ಆಚರಿಸಿದ್ದಾರೆ. ಜತೆಗೆ ದೇಶದ ಜನರಿಗೂ ಅವರು ಶುಭ ಕೋರಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸೈನಿಕರಿಗೆ ಧನ್ಯವಾದ ಸಲ್ಲಿಸಿ, ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ:

ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತೀಯ ಸೈನಿಕರಿಂದ ಲೋಹ್ರಿ ಹಬ್ಬದ ಸಂಭ್ರಮಾಚರಣೆ

ಪತ್ತೆಯಾಯ್ತು ಆಲೂಗಡ್ಡೆ ರೂಪದ ಗ್ರಹ; ಇಲ್ಲಿ ಒಂದು ವರ್ಷವೆಂದರೆ ಎಷ್ಟು ಗಂಟೆ ಗೊತ್ತಾ? ಕುತೂಹಲಕಾರಿ ಮಾಹಿತಿ ಇಲ್ಲಿದೆ

Click on your DTH Provider to Add TV9 Kannada