ಡ್ರಗ್ಸ್​ ಸ್ಮಗ್ಲಿಂಗ್​ ಮಾರ್ಗದಲ್ಲೇ ಸ್ಫೋಟಕಗಳ ಸಾಗಣೆ; ಪಾಕ್​​ ಉಗ್ರರ ಕುತಂತ್ರದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

TV9 Digital Desk

| Edited By: Lakshmi Hegde

Updated on: Jan 17, 2022 | 4:15 PM

ಅಫ್ಘಾನಿಸ್ತಾನದಿಂದ ಹೆರಾಯಿನ್​ ಮತ್ತು ಅಫೀಮುಗಳಂತ ಡ್ರಗ್​ಗಳನ್ನು ಕಳ್ಳಸಾಗಣೆ ಮಾಡುವ ಮಾರ್ಗದಲ್ಲೇ, ಈ ಐಇಡಿಯಂಥ ಸ್ಫೋಟಕಗಳನ್ನೂ ಸಾಗಿಸುವ ಕೆಲಸವಾಗುತ್ತಿದೆ. ಇದಕ್ಕಾಗಿ ಪಾಕಿಸ್ತಾನಿ ಮೂಲದ ಉಗ್ರಸಂಘಟನೆಗಳು ಡ್ರೋನ್​, ಹಡಗುಗಳನ್ನು ಬಳಸಿಕೊಳ್ಳುತ್ತಿವೆ

ಡ್ರಗ್ಸ್​ ಸ್ಮಗ್ಲಿಂಗ್​ ಮಾರ್ಗದಲ್ಲೇ ಸ್ಫೋಟಕಗಳ ಸಾಗಣೆ; ಪಾಕ್​​ ಉಗ್ರರ ಕುತಂತ್ರದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us

ಕಳೆದ ಶುಕ್ರವಾರ ದೆಹಲಿಯ ಘಾಜಿಪುರ್​​ನಲ್ಲಿ  ಆರ್​ಡಿಎಕ್ಸ್​​ನಿಂದ ಪ್ಯಾಕ್​ ಮಾಡಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳು ತನಿಖೆಯನ್ನೂ ನಡೆಸುತ್ತಿದ್ದಾರೆ. ಈ ಮಧ್ಯೆ ಗುಪ್ತಚರ ಇಲಾಖೆ ಮಾಹಿತಿಯೊಂದನ್ನು ನೀಡಿದ್ದು, ಇಂಥ ಐಇಡಿಗಳನ್ನು ಪಾಕಿಸ್ತಾನಿ ಸಂಘಟನೆಗಳು ಭೂ ಮತ್ತು ಸಮುದ್ರ ಮಾರ್ಗಗಳನ್ನು ಬಳಸಿಕೊಳ್ಳುತ್ತಿವೆ. ಅದರಲ್ಲೂ ಮಾದಕ ದ್ರವ್ಯಗಳು (Drugs) ಸಾಗಣೆಯಾಗುವ ಮಾರ್ಗದಲ್ಲಿಯೇ ಇವುಗಳನ್ನು ಪಾಕಿಸ್ತಾನದಿಂದ ಭಾರತಕ್ಕೆ ಕಳಿಸಲಾಗುತ್ತಿದೆ ಎಂದು ಹೇಳಿದೆ. 

ಘಾಜಿಪುರದಲ್ಲಿ ಪತ್ತೆಯಾದ ಐಇಡಿಯಲ್ಲಿ ರಿಮೋಟ್​ ನಿಯಂತ್ರಿತ ಟೈಮರ್ ಇತ್ತು. ಅದರಲ್ಲಿ ಐಇಡಿ ಸಜ್ಜಾದ ಒಂದು ತಾಸು ಎಂಟು ನಿಮಿಷದ ನಂತರ ಸ್ಫೋಟಿಸುವಂತೆ ಫಿಕ್ಸ್ ಮಾಡಿಡಲಾಗಿತ್ತು. ಹೀಗೆ ಭಾರತಕ್ಕೆ ಅಪಾರ ಪ್ರಮಾಣದಲ್ಲಿ ಬಾಂಬ್​, ಐಇಡಿ, ಗ್ರೆನೇಡ್​ಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ 5-6 ಕೆಜಿಗಳಷ್ಟು ತೂಕದ ಸುಮಾರು 20 ಐಇಡಿಗಳು, 100 ಗ್ರೆನೇಡ್​ಗಳನ್ನು ಪಂಜಾಬ್​ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನದಿಂದ ಹೆರಾಯಿನ್​ ಮತ್ತು ಅಫೀಮುಗಳಂತ ಡ್ರಗ್​ಗಳನ್ನು ಕಳ್ಳಸಾಗಣೆ ಮಾಡುವ ಮಾರ್ಗದಲ್ಲೇ, ಈ ಐಇಡಿಯಂಥ ಸ್ಫೋಟಕಗಳನ್ನೂ ಸಾಗಿಸುವ ಕೆಲಸವಾಗುತ್ತಿದೆ. ಇದಕ್ಕಾಗಿ ಪಾಕಿಸ್ತಾನಿ ಮೂಲದ ಉಗ್ರಸಂಘಟನೆಗಳು ಡ್ರೋನ್​, ಹಡಗುಗಳನ್ನು ಬಳಸಿಕೊಳ್ಳುತ್ತಿವೆ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ. ಘಾಜಿಪುರದಲ್ಲಿ ಐಇಡಿ ಸ್ಫೋಟಗೊಳ್ಳುವುದನ್ನು ದೆಹಲಿ ಪೊಲೀಸರು ಸೂಕ್ತ ಸಮಯದಲ್ಲಿ ತಪ್ಪಿಸದೆ ಇದ್ದರೆ, ಅದು ಹಲವು ಅಮಾಯಕರನ್ನು ಖಂಡಿತವಾಗಿಯೂ ಕೊಲ್ಲುತ್ತಿತ್ತು. ಸ್ಫೋಟಕವನ್ನು ಸ್ಟೀಲ್ ಟಿಫಿನ್ ಬಾಕ್ಸ್​ನಲ್ಲಿ ಹಾಕಿ, ಸೈಕಲ್ ಬೇರಿಂಗ್ ಮತ್ತು ನೇಲ್​ಗಳನ್ನು ಸೇರಿಸಿಡಲಾಗಿತ್ತು. ಇದು ಸ್ಫೋಟವಾದಾಗ ಇನ್ನಷ್ಟು ತೀವ್ರತೆ ಹೆಚ್ಚಿಸುತ್ತದೆ.

ಇದನ್ನೂ ಓದಿ:ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್ ಬಳಸಿ ಪೆಟ್ರೋಲ್ ಕಳ್ಳತನ; ಸುಮಾರು 50 ಲೀಟರ್ ಪೆಟ್ರೋಲ್ ಕಳವು

ತಾಜಾ ಸುದ್ದಿ

Related Stories

Click on your DTH Provider to Add TV9 Kannada