ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್ ಬಳಸಿ ಪೆಟ್ರೋಲ್ ಕಳ್ಳತನ; ಸುಮಾರು 50 ಲೀಟರ್ ಪೆಟ್ರೋಲ್ ಕಳವು
ಪೆಟ್ರೋಲ್ ಕಳ್ಳತನವಾಗುತ್ತಿರುವ ಅನುಮಾನ ಹಿನ್ನೆಲೆ ಕೇಸ್ ದಾಖಲಿಸಲಾಗಿತ್ತು. ಪೆಟ್ರೋಲ್ ಬಂಕ್ ಮಾಲೀಕರ ದೂರಿನ ಮೇರೆಗೆ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳಯ ಪರಿಶೀಲನೆ ನಡೆಸಿದ್ದು, ಈ ವೇಳೆ ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕರ್ ಪತ್ತೆಯಾಗಿದೆ.
ಬೆಂಗಳೂರು: ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್ ಬಳಸಿ ಪೆಟ್ರೋಲ್ ಕಳ್ಳತನ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವನಗುಂದಿಯಲ್ಲಿ ನಡೆದಿದೆ. 1 ಟ್ಯಾಂಕ್ನಲ್ಲಿ ಸುಮಾರು 50 ಲೀಟರ್ ಪೆಟ್ರೋಲ್ ಕಳ್ಳತನ (Theft) ಮಾಡಿದ್ದಾರೆ. ಪೆಟ್ರೋಲ್ (Petrol) ಟ್ಯಾಂಕರ್‌ಗಳ ಸಿಬ್ಬಂದಿಯಿಂದಲೇ ಕಳ್ಳತನ ನಡೆದಿದೆ. ದೇವನಗುಂದಿಯಿಂದ ಪೆಟ್ರೋಲ್ ಪೂರೈಕೆ ಮಾಡಲಾಗುತ್ತಿತ್ತು. ಪೆಟ್ರೋಲ್ ಕಳ್ಳತನವಾಗುತ್ತಿರುವ ಅನುಮಾನ ಹಿನ್ನೆಲೆ ಕೇಸ್ ದಾಖಲಿಸಲಾಗಿತ್ತು. ಪೆಟ್ರೋಲ್ ಬಂಕ್ ಮಾಲೀಕರ ದೂರಿನ ಮೇರೆಗೆ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳಯ ಪರಿಶೀಲನೆ ನಡೆಸಿದ್ದು, ಈ ವೇಳೆ ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕರ್ (Tanker) ಪತ್ತೆಯಾಗಿದೆ.
ಪ್ರತಿನಿತ್ಯ 1,200 ಟ್ಯಾಂಕರ್‌ಗಳಿಂದ ಪೆಟ್ರೋಲ್ ಪೂರೈಕೆ ಮಾಡಲಾಗುತ್ತಿತ್ತು. ದೇವನಗುಂದಿಯಿಂದ ಬಂಕ್‌ಗಳಿಗೆ ಪೆಟ್ರೋಲ್ ಪೂರೈಸುತ್ತಿದ್ದರು. ಶೇ.40ರಷ್ಟು ಟ್ಯಾಂಕರ್‌ಗಳಲ್ಲಿ ದಂಧೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಸದ್ಯ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕಳ್ಳತನ ದಂದೆ ಮಾಡುತ್ತಿದ್ದ ಐದು ಜನರ ವಿರುದ್ಧ ಎಫ್ಐಆರ್
ಲಾರಿ ಚಾಲಕ, ಕ್ಲೀನರ್ ಮತ್ತು ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ಲಾರಿ ಚಾಲಕ ಪ್ರವೀಣ್ ಕುಮಾರ್, ಲಾರಿ ಕ್ಲೀನರ್ ಶಿವು, ಟ್ಯಾಂಕರ್ ಮಾಲೀಕರು ಶೃತಿ, ಟ್ರಾನ್ಸಪೋರ್ಟ್ ಶಿವರಾಜು, ವೆಲ್ಡರ್ಸ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಸ್ವಂತ ಟ್ಯಾಂಕರ್ಗಳಿಲ್ಲದ ಬಂಕ್‌ಗಳಿಗೆ ಇಂಧನ ಪೂರೈಸುವ ವೇಳೆ ಈ ರೀತಿ ಕಳ್ಳತನ ಮಾಡಲಾಗುತ್ತಿತ್ತು. ಇದೀಗ ದಂದೆಯ ಇಂದಿನ ಕಿಂಗ್ ಪಿನ್ಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.
ಯಾದಗಿರಿ: ಸ್ನೇಹಿತನೇ ಮೋಸ ಮಾಡಿದ್ದಾನೆ ಎಂದು ಆರೋಪಿ ಆತ್ಮಹತ್ಯೆ
ಸ್ನೇಹಿತನೇ ಮೋಸ ಮಾಡಿದ್ದಾನೆ ಎಂದು ಡೆತ್ ನೋಟ್ ಬರೆದಿಟ್ಟು ಆಂಧ್ರ ಮೂಲದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಮೋಹನ್(55) ತಾಣಾಗುಂದಿ ಬಳಿ ನೇಣಿಗೆ ಶರಣಾಗಿದ್ದು, ತನ್ನ ಸ್ನೇಹಿತ ಜಿ.ರಮೇಶ್ ಕೊಡಬೇಕಿದ್ದ 4.5 ಲಕ್ಷ ರೂಪಾಯಿ ಹಣ ಕೊಡದೆ ಸತಾಯಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:
ಎರಡು ಕೋಟಿ ಮೌಲ್ಯದ ವಾಚ್ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ ಮಾಡಿದ ಇಂದಿರಾನಗರ ಪೊಲೀಸರು
Crime News: ಮಗುವನ್ನು ಕೊಂದು ದಂಪತಿ ಆತ್ಮಹತ್ಯೆ, ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು
Published On - 3:45 pm, Mon, 17 January 22