JCB Theft: ರಸ್ತೆ ಬದಿ ನಿಲ್ಲಿಸಿದ್ದ ದೈತ್ಯ ಜೆಸಿಬಿಯನ್ನೇ ಕದ್ದರು! ಕಳ್ಳನಿಗಾಗಿ ಹುಡುಕುತಿದಾರೆ ಪೊಲೀಸರು
ರಾಮಮೂರ್ತಿ ಎಂಬುವವರ ಒಡೆತನದಲ್ಲಿದ್ದ ಜೆಸಿಬಿ ಕಳ್ಳತನವಾಗಿದೆ ಎಂದು ಜನವರಿ 11 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಚಾಲಕನಾದ ಲಕ್ಷ್ಮಣ್ ಎಂಬಾತ ಮಿಲ್ಕ್ ಕಾಲೋನಿಯ ರಸ್ತೆ ಬದಿ ಜೆಸಿಬಿ ನಿಲ್ಲಿಸಿ ಮನೆಗೆ ತೆರಳಿದ್ದ.
ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಸೈಕಲ್, ಬೈಕ್, ಕಾರು ಕಳ್ಳತನವಾಗುವುದನ್ನು ನಾವು ಸಾಮಾನ್ಯವಾಗಿ ಕೇಳಿದ್ದೇವೆ. ಆದ್ರೆ ಇಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಜೆಸಿಬಿ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಬ್ರಹ್ಮಣ್ಯಪುರ ಬಳಿ ಇರುವ ಮಿಲ್ಕ್ ಕಾಲೋನಿ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಜೆಸಿಬಿ ಕಳವಾಗಿದೆ.
ರಾಮಮೂರ್ತಿ ಎಂಬುವವರ ಒಡೆತನದಲ್ಲಿದ್ದ ಜೆಸಿಬಿ ಕಳ್ಳತನವಾಗಿದೆ ಎಂದು ಜನವರಿ 11 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಚಾಲಕನಾದ ಲಕ್ಷ್ಮಣ್ ಎಂಬಾತ ಮಿಲ್ಕ್ ಕಾಲೋನಿಯ ರಸ್ತೆ ಬದಿ ಜೆಸಿಬಿ ನಿಲ್ಲಿಸಿ ಮನೆಗೆ ತೆರಳಿದ್ದ. ಜನವರಿ 11 ರ ರಾತ್ರಿ 10 ಗಂಟೆಯವರೆಗೂ ಜೆಸಿಬಿ ಇದ್ದಜಾಗದಲ್ಲೇ ಇತ್ತು. ಆದರೆ ಬೆಳಗಿನ ಜಾವ 4.30ರ ಸಮಯದಲ್ಲಿ ಜೆಸಿಬಿ ನಾಪತ್ತೆಯಾಗಿತ್ತು. ಈ ಹಿಂದೆ ಆಂಧ್ರದ ಪ್ರತಾಪ್ ರೆಡ್ಡಿ ಎಂಬಾತನಿಂದ ರಾಮಮೂರ್ತಿ ಎಂಬುವವರು ಜೆಸಿಬಿಯನ್ನು ಖರೀದಿಸಿದ್ದರು. Ka-34-a-8075 ನಂಬರಿನ ಜೆಸಿಬಿ ಕಳ್ಳತನವಾಗಿದೆ.
ಆನೇಕಲ್ ಕ್ರೈಂ ಪೊಲೀಸರಿಗೆ ಕೊರೊನಾ ಆತಂಕ ಆನೇಕಲ್ ಭಾಗದ ಕ್ರೈಂ ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಕ್ರಿಮಿನಲ್ ಕೇಸ್ ತನಿಖೆಗೆ ಸುತ್ತಾಡುತ್ತಿದ್ದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಪೊಲೀಸರು ತೀವ್ರ ಜ್ವರ, ತಲೆನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಕ್ರೈಂ ಪ್ರಕರಣಗಳ ತನಿಖೆಗೆ ಪೊಲೀಸ್ ಸಿಬ್ಬಂದಿ ಕೊರತೆ ಎದುರಾಗಿದೆ. ಕಾಂಗ್ರೆಸ್ ಪಾದಯಾತ್ರೆ ಭದ್ರತೆಗೆ ತೆರಳಿದ್ದ ಪೊಲೀಸರಿಗೂ ಕಂಟಕ ಎದುರಾಗಿದೆ. 20 ಪೊಲೀಸರ ಪೈಕಿ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. 8 ಪೊಲೀಸ್ ಸಿಬ್ಬಂದಿಗೆ ಕೊರೊನಾ ರೋಗ ಲಕ್ಷಣಗಳಿವೆ. ಹೀಗಾಗಿ ಆನೇಕಲ್, ಜಿಗಣಿ, ಬನ್ನೇರುಘಟ್ಟ, ಹೆಬ್ಬಗೋಡಿ, ಸೂರ್ಯನಗರ ಠಾಣೆ ಪೊಲೀಸ್ ಸಿಬ್ಬಂದಿಗೆ ಕೊರೊನಾ ಟೆನ್ಶನ್ ಶುರುವಾಗಿದೆ. ಉಳಿದಿರುವ ಸಿಬ್ಬಂದಿಗೂ ಕೊರೊನಾ ಸೋಂಕು ಹಬ್ಬಿದರೆ ಕರ್ನಾಟಕ, ತಮಿಳುನಾಡು ಗಡಿಯಲ್ಲಿ ತಪಾಸಣೆ ಮಾಡುವುದು ಕೂಡ ಕಷ್ಟವಾಗಲಿದೆ.
ಇದನ್ನೂ ಓದಿ: ಮಂದಿರಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸಿಖ್ ಭಕ್ತರಿಗೆ ಥಳಿಸಿದ ಗುಂಪು; ಐವರನ್ನು ವಶಕ್ಕೆ ಪಡೆದ ಪೊಲೀಸರು