ಮಂದಿರಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸಿಖ್​​ ಭಕ್ತರಿಗೆ ಥಳಿಸಿದ ಗುಂಪು; ಐವರನ್ನು ವಶಕ್ಕೆ ಪಡೆದ ಪೊಲೀಸರು

ಮಂದಿರಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸಿಖ್​​ ಭಕ್ತರಿಗೆ ಥಳಿಸಿದ ಗುಂಪು; ಐವರನ್ನು ವಶಕ್ಕೆ ಪಡೆದ ಪೊಲೀಸರು
ಟ್ರಕ್​ನಲ್ಲಿ ತೆರಳುತ್ತಿದ್ದ ಸಿಖ್ಖರು

ಧ್ಯಾನಿ ತೋಲಾ ಎಂಬ ಸ್ಥಳವನ್ನು ತಲುಪುತ್ತಿದ್ದಂತೆ ಕೆಲವರು ಬಂದು, ದೇಗುಲ ನಿರ್ಮಾಣಕ್ಕಾಗಿ ಯಜ್ಞ ಮಾಡಬೇಕಾಗಿದೆ. ಹಾಗಾಗಿ ಚಂದಾ ಎತ್ತುತ್ತಿದ್ದೇವೆ. ಹಣ ಕೊಡಿ ಎಂದು ಸಿಖ್​ ಭಕ್ತರ ಬಳಿ ಹೇಳಿದ್ದಾರೆ.

TV9kannada Web Team

| Edited By: Lakshmi Hegde

Jan 17, 2022 | 12:14 PM

ಪಾಟ್ನಾ: ದೇಗುಲ ನಿರ್ಮಾಣಕ್ಕೆ ಹಣಕೊಡಲಿಲ್ಲ ಎಂಬ ಕಾರಣಕ್ಕೆ ಸಿಖ್​ ಸಮುದಾಯದ ಆರು ಜನರಿಗೆ, ಗುಂಪೊಂದು ಥಳಿಸಿದ ಘಟನೆ ಬಿಹಾರದ ಭೋಜಪುರದಲ್ಲಿ ನಡೆದಿದೆ. ಸಿಖ್​ ಭಕ್ತರ ಮೇಲೆ ಹಲ್ಲೆ ನಡೆಸಿದ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಸುತ್ತಿದ್ದಾರೆ. ಪಾಟ್ನಾ ಸಾಹೀಬ್​​ (ತಕ್ತ್​ ಶ್ರೀ ಹರಿಮಂದಿರ್​ ಜಿ) ಗುರುದ್ವಾರಕ್ಕೆ ಭೇಟಿ ನೀಡಿದ್ದ ಸುಮಾರು 60 ಮಂದಿ ಸಿಖ್​ ಭಕ್ತರು ಪಂಜಾಬ್​ನ ಮೊಹಾಲಿಗೆ ವಾಪಸ್​ ತೆರಳುತ್ತಿದ್ದರು. ಈ ವೇಳೆ ಅವರ ಮೇಲೆ ಹಲ್ಲೆಯಾಗಿದೆ ಎಂದು ಪಿರೋ ಉಪವಿಭಾಗದ ಪೊಲೀಸ್ ಅಧಿಕಾರಿ ರಾಹುಲ್​ ಸಿಂಗ್​ ತಿಳಿಸಿದ್ದಾರೆ. 

ಇವರೆಲ್ಲ ಟ್ರಕ್​ ಮೇಲೆ ಮೊಹಾಲಿಗೆ ತೆರಳುತ್ತಿದ್ದರು. ಧ್ಯಾನಿ ತೋಲಾ ಎಂಬ ಸ್ಥಳವನ್ನು ತಲುಪುತ್ತಿದ್ದಂತೆ ಕೆಲವರು ಬಂದು, ದೇಗುಲ ನಿರ್ಮಾಣಕ್ಕಾಗಿ ಯಜ್ಞ ಮಾಡಬೇಕಾಗಿದೆ. ಹಾಗಾಗಿ ಚಂದಾ ಎತ್ತುತ್ತಿದ್ದೇವೆ. ಹಣ ಕೊಡಿ ಎಂದು ಸಿಖ್​ ಭಕ್ತರ ಬಳಿ ಹೇಳಿದ್ದಾರೆ. ಅದೂ ಅವರು ಮೊದಲು ಕೇಳಿದ್ದು ಟ್ರಕ್​ ಡ್ರೈವರ್ ಬಳಿ. ಆತ ತಾನು ಕೊಡುವುದಿಲ್ಲ ಎಂದು ಹೇಳುತ್ತಿದ್ದಂತೆ, ಚಂದಾ ಎತ್ತಲು ಬಂದವರು ಅವನ ಮೇಲೆ ಹಲ್ಲೆಗೆ ಮುಂದಾದರು. ಆಗ, ಕೆಲವು ಸಿಖ್​ ಭಕ್ತರು ಚಾಲಕನ ಸಹಾಯಕ್ಕೆ ಬಂದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಸಿಖ್​ ಸಮುದಾಯದ ಸುಮಾರು 6ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಚಾರ್ಪೋಖ್ರಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸದ್ಯ ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದೇವೆ. ಐವರನ್ನು ವಶಕ್ಕೆ ಪಡೆದಿದ್ದೇವೆ. ಶೀಘ್ರವೇ ಆರೋಪಿಗಳನ್ನು ಅರೆಸ್ಟ್ ಮಾಡಲಾಗುವುದು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳಲು ವ್ಯಕ್ತಿಯನ್ನು ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್‌ಗೆ ಕೇಂದ್ರ

Follow us on

Related Stories

Most Read Stories

Click on your DTH Provider to Add TV9 Kannada