ಎರಡು ಕೋಟಿ ಮೌಲ್ಯದ ವಾಚ್ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ ಮಾಡಿದ ಇಂದಿರಾನಗರ ಪೊಲೀಸರು

129 ರಾಡೋ ವಾಚ್, 29 ಲಾಂಜಿನ್, 13 ಒಮೇಗಾ ವಾಚ್ ಸೇರಿ ಎರಡು ಕೋಟಿ ಮೌಲ್ಯದ ವಾಚ್ಗಳನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.

ಎರಡು ಕೋಟಿ ಮೌಲ್ಯದ ವಾಚ್ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ ಮಾಡಿದ ಇಂದಿರಾನಗರ ಪೊಲೀಸರು
ಎರಡು ಕೋಟಿ ಮೌಲ್ಯದ ವಾಚ್ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ ಮಾಡಿದ ಇಂದಿರಾನಗರ ಪೊಲೀಸರು
Follow us
| Updated By: ಆಯೇಷಾ ಬಾನು

Updated on: Jan 13, 2022 | 8:35 AM

ಬೆಂಗಳೂರು: ಐಶಾರಾಮಿ ವಾಚ್ಗಳನ್ನು ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರದಲ್ಲಿರುವ ವಾಚ್ ಅಂಗಡಿಗಳಲ್ಲಿ ಕೋಟ್ಯಾಂತರ ರೂ ಬೆಲೆ ಬಾಳುವ ವಾಚ್ಗಳನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಓಸಿ ಅಖ್ತರ್ ಬಂಧಿತ ಆರೋಪಿ.

129 ರಾಡೋ ವಾಚ್, 29 ಲಾಂಜಿನ್, 13 ಒಮೇಗಾ ವಾಚ್ ಸೇರಿ ಎರಡು ಕೋಟಿ ಮೌಲ್ಯದ ವಾಚ್ಗಳನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ. ಇಂದಿರಾನಗರದ 100 ಫಿಟ್ ರಸ್ತೆಯಲ್ಲಿ ಶಾಮೋಯಿಲ್ ಎಂಬುವರು ಹಲವು ವರ್ಷಗಳಿಂದ ಸಿಮನ್ಸ್ ಟೈಮ್ಸ್ ಶಾಪ್ ಹೆಸರಿನಲ್ಲಿ‌ ದುಬಾರಿ ಮೌಲ್ಯದ ವಾಚ್ಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ತಿಂಗಳ 4 ರಂದು ಅಂಗಡಿಗೆ ನುಗ್ಗಿದ್ದ ಅಖ್ತರ್ ರೋಲಿಂಗ್ ಶಟರ್ ಮುರಿದು ವಾಚ್ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇನ್‌ಸ್ಪೆಕ್ಟರ್ ಹರೀಶ್, ಸಬ್ಇನ್ಸ್ಪೆಕ್ಟರ್ ಅಮರೇಶ್ ಜೇಗರಕಲ್‌ ನೇತೃತ್ವದಲ್ಲಿ‌ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಚಿನ್ನ ಕದ್ದ ಕಳ್ಳ ಅರೆಸ್ಟ್ ತುಮಕೂರು: ಮಹಿಳೆಯರನ್ನ ಎಮಾರಿಸಿ ಚಿನ್ನ ನಗದು ದೋಚುತ್ತಿದ್ದ ಆರೋಪಿಯನ್ನು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಚಿನ್ನ ನಗದು ದೋಚಿ ಪರಾರಿಯಾಗುತ್ತಿದ್ದ. ಕೊರಟಗೆರೆ ತಾಲೂಕಿನ ಹೊಸಹಳ್ಳಿ ಗ್ರಾಮದ ಶಿವಮ್ಮ ಹಾಗೂ ಭಾಗ್ಯಮ್ಮರಿಂದ 125 ಗ್ರಾಮ್ ಚಿನ್ನಾಭರಣ ಹಾಗೂ ನಾಲ್ಕು ಲಕ್ಷ ಹಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಯುವತಿಯರೇ ಎಚ್ಚರ.. ಮಾಡೆಲ್ ಮಾಡುವ ನೆಪದಲ್ಲಿ ಖಾಸಗಿ ಫೋಟೋಗೆ ಡಿಮ್ಯಾಂಡ್ ಮಾಡ್ತಿದ್ದ ಪುಂಗಿದಾಸ, ಚರಿತ್ರೆ ಬಿಚ್ಚಿಟ್ಟ ಪೊಲೀಸ್