ಪಂಚ ರಾಜ್ಯಗಳ ಚುನಾವಣೆ ನಂತರ ರಾಜ್ಯದತ್ತ ಬಿಜೆಪಿ ವರಿಷ್ಠರ ಗಮನ; ಸಂಪುಟ ವಿಸ್ತರಣೆ ಜೊತೆಗೆ ಪುನಾರಚನೆ ಕೂಡ ಖಚಿತ!
ನಾಲ್ಕು ಅವಧಿಯಲ್ಲೂ ಸಚಿವರಾಗಿದ್ದವರನ್ನು ಪಕ್ಷ ಸಂಘಟನೆಗೆ ಕಳುಹಿಸಿದ ನಂತರ ಉಳಿದವರಿಗೆ ಸಂಪುಟದಲ್ಲಿ ಅವಕಾಶ ನೀಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ವಲಸಿಗ ಸಚಿವರ ಪೈಕಿ ಐದಾರು ಸಚಿವರ ಮೇಲೆ ತೂಗುಗತ್ತಿ ಇದ್ದರೆ, ಕೆಲ ವಲಸಿಗ ಸಚಿವರು ಮತ್ತೆ ಕಾಂಗ್ರೆಸ್ಗೆ ಮರಳುವ ಸಾಧ್ಯತೆ ಇದೆ.

ಬೆಂಗಳೂರು: ಐದು ರಾಜ್ಯಗಳ (ಪಂಜಾಬ್, ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ) ಚುನಾವಣೆ ಬಳಿಕ ರಾಜ್ಯದತ್ತ ಬಿಜೆಪಿ ಹೈಕಮಾಂಡ್ ಗಮನ ಹರಿಸಲಿದೆ. ಸಚಿವ ಸಂಪುಟ ವಿಸ್ತರಣೆ ಜೊತೆಗೆ ಪುನಾರಚನೆ ಕೂಡಾ ಖಚಿತವಾಗಿದ್ದು, ಪುನಾರಚನೆಗೆ ಹೊಸ ಫಾರ್ಮುಲಾವನ್ನು ಹೈಕಮಾಂಡ್ (High command) ಪ್ರಯೋಗಿಸಲಿದೆ. ನಾಲ್ಕು ಬಾರಿಯೂ ಸಚಿವರಾದವರಿಗೆ ಪಕ್ಷ ಸಂಘಟನೆಯ ಹೊಣೆಗೆ ಚಿಂತನೆ ನಡೆಸಲಾಗಿದೆ. ಹಿಂದೆ ಬಿಜೆಪಿ-ಜೆಡಿಎಸ್ (JDS) ಸಮ್ಮಿಶ್ರ ಸರ್ಕಾರ, ನಂತರ ಯಡಿಯೂರಪ್ಪ, ಡಿವಿಎಸ್, ಜಗದೀಶ್ ಶೆಟ್ಟರ್ ಸರ್ಕಾರ, ಈ ಬಾರಿ ಯಡಿಯೂರಪ್ಪ ಸಂಪುಟ ಮತ್ತು ಹಾಲಿ ಬೊಮ್ಮಾಯಿ (Basavaraj Bommai) ಸಂಪುಟದಲ್ಲಿ ಸಚಿವರಾಗಿದ್ದವರನ್ನು ಪಕ್ಷ ಸಂಘಟನೆಗೆ ಕಳುಹಿಸಲಾಗುತ್ತದೆ.
ನಾಲ್ಕು ಅವಧಿಯಲ್ಲೂ ಸಚಿವರಾಗಿದ್ದವರನ್ನು ಪಕ್ಷ ಸಂಘಟನೆಗೆ ಕಳುಹಿಸಿದ ನಂತರ ಉಳಿದವರಿಗೆ ಸಂಪುಟದಲ್ಲಿ ಅವಕಾಶ ನೀಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ವಲಸಿಗ ಸಚಿವರ ಪೈಕಿ ಐದಾರು ಸಚಿವರ ಮೇಲೆ ತೂಗುಗತ್ತಿ ಇದ್ದರೆ, ಕೆಲ ವಲಸಿಗ ಸಚಿವರು ಮತ್ತೆ ಕಾಂಗ್ರೆಸ್ಗೆ ಮರಳುವ ಸಾಧ್ಯತೆ ಇದೆ. ಕಾಂಗ್ರೆಸ್ಗೆ ಹೋಗುವ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆದಿದೆ. ಅಂತಹ ವಲಸಿಗ ಸಚಿವರ ಮೇಲೆ ಕಣ್ಣಿಟ್ಟಿರುವ ಬಿಜೆಪಿ ವರಿಷ್ಠರು, ಈಗಲೇ ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ ಮಾಡಲು ಚಿಂತನೆ ನಡೆಸಿದೆ.
ಪಕ್ಷ ತೊರೆಯುವುದಾದರೆ ಅವರು ಈಗಲೇ ಬಿಟ್ಟುಹೋಗಲಿ. ಚುನಾವಣೆ ವೇಳೆ ರಾಜಕೀಯ ಲಾಭಕ್ಕೆ ಅವಕಾಶ ನೀಡಬಾರದು. ಹೀಗಾಗಿ ಅನುಮಾನ ಇರುವ ವಲಸಿಗ ಸಚಿವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿ ವರಿಷ್ಠರ ಮಟ್ಟದಲ್ಲಿ ಚಿಂತನೆ ನಡೆದಿರುವ ಬಗ್ಗೆ ಮಾಹಿತಿ ದೊರೆತಿದ್ದು, ವರಿಷ್ಠರ ಮಟ್ಟದಲ್ಲಿ ನಡೆದ ಚಿಂತನೆ ಕಾರ್ಯರೂಪಕ್ಕೆ ಬಂದರೆ ಸಂಪುಟ ಪುನಾರಚನೆ ಸ್ವರೂಪ ಬದಲಾಗುವ ಸಾಧ್ಯತೆಯಿದೆ. ಮಾರ್ಚ್ 10ರ ಬಳಿಕ ರಾಜ್ಯ ಸಂಪುಟ ಪುನಾರಚನೆ ಚಟುವಟಿಕೆ ಆರಂಭವಾಗಲಿದೆ.
ಇದನ್ನೂ ಓದಿ: ಗೋವಾ ವಿಧಾನಸಭೆ ಚುನಾವಣೆ; ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿಯಲಿವೆ ಶಿವಸೇನೆ-ಎನ್ಸಿಪಿ
ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ; ಸಿಎಂ ಛನ್ನಿಗೆ ಶಾಕ್ ಕೊಟ್ಟ ಅವರ ಸೋದರ ಸಂಬಂಧಿ
Published On - 4:22 pm, Mon, 17 January 22