Central Railway Jobs: 2422 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ರೈಲ್ವೆ; 5 ವಲಯಗಳಲ್ಲಿ ಇದೆ ಉದ್ಯೋಗ ಅವಕಾಶ
RRC Recruitment 2022: ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 10ನೇ ತರಗತಿಯನ್ನು ಒಟ್ಟಾರೆ ಶೇ.50ರಷ್ಟು ಮಾರ್ಕ್ಸ್ಗಳೊಂದಿಗೆ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ ಸರ್ಟಿಫಿಕೇಟ್ ಪಡೆದಿರಬೇಕು.
ಕೇಂದ್ರ ರೈಲ್ವೆಯ ನೇಮಕಾತಿ ಸೆಲ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 2422 ಹುದ್ದೆಗಳ ನೇಮಕಾತಿ ಕುರಿತು rrccr.com ವೆಬ್ಸೈಟ್ನಲ್ಲಿ ಅಧಿಸೂಚನೆ ಹೊರಡಿಸಿದ್ದು, ಆಸಕ್ತರು 2022ರ ಫೆಬ್ರವರಿ 16ರೊಳಗೆ ಅರ್ಜಿ ಸಲ್ಲಿಸಬೇಕು. ಅಂದಹಾಗೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಒಟ್ಟು 2422 ಖಾಲಿ ಹುದ್ದೆಗಳಲ್ಲಿ, ಮುಂಬೈ ಕ್ಲಸ್ಟರ್ (ಎಂಎಂಸಿಟಿ)ನಲ್ಲಿ 1659, ಭೂಸಾವಲ್ ಕ್ಲಸ್ಟರ್ನಲ್ಲಿ 418, ಪುಣೆ ರೈಲ್ವೆ ಕ್ಲಸ್ಟರ್ನಲ್ಲಿ 152, ನಾಗ್ಪುರ ಕ್ಲಸ್ಟರ್ನಲ್ಲಿ 114 ಮತ್ತು ಸೊಲ್ಲಾಪುರ ಕ್ಲಸ್ಟರ್ನಲ್ಲಿ 79 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ ಏನಿರಬೇಕು? ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 10ನೇ ತರಗತಿಯನ್ನು ಒಟ್ಟಾರೆ ಶೇ.50ರಷ್ಟು ಮಾರ್ಕ್ಸ್ಗಳೊಂದಿಗೆ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ ಸರ್ಟಿಫಿಕೇಟ್ ಪಡೆದಿರಬೇಕು. ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ ನೀಡಿದ ನ್ಯಾಶನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ತಾತ್ಕಾಲಿಕ ಪ್ರಮಾಣಪತ್ರವನ್ನಾದರೂ ಹೊಂದಿರಬೇಕು. 15 ವರ್ಷ ಮೇಲ್ಪಟ್ಟು 24 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ 100 ರೂಪಾಯಿ ಇರುತ್ತದೆ. ಮೆರಿಟ್ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದವರಿಗೆ 8000-10000 ರೂಪಾಯಿವರೆಗೆ ವೇತನ ಇರುತ್ತದೆ.
ಅರ್ಜಿಯನ್ನು ಆನ್ಲೈನ್ ಮೂಲಕವೇ ಕಳಿಸಬೇಕಾಗುತ್ತದೆ. ಭೌತಿಕವಾಗಿ ಕಳಿಸಿದರೆ ಅದು ಪರಿಗಣಿಸಲ್ಪಡುವುದಿಲ್ಲ. ಹಾಗೇ, ಸದ್ಯ 5 ವಲಯಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇವುಗಳಲ್ಲಿ ಯಾವುದಾದರೂ ಒಂದು ಕ್ಲಸ್ಟರ್ನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಕಳಿಸಿದರೆ ಅಂಥವರ ಅಪ್ಲಿಕೇಶನ್ಗಳು ತಿರಸ್ಕೃತಗೊಳ್ಳುತ್ತವೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.
Published On - 6:38 pm, Tue, 18 January 22