ಟೇಕಾಫ್ ಆಗಿ ಕೆಲವೇ ನಿಮಿಷದಲ್ಲಿ ಜಪಾನೀಸ್ ಯುದ್ಧ ವಿಮಾನ ಕಣ್ಮರೆ; ಮುಂದುವರಿದ ಶೋಧ ಕಾರ್ಯ
ಜಪಾನ್ ಸಮುದ್ರದ ಮಧ್ಯ ಇಶಿಕಾವಾ ಪ್ರದೇಶದ ಕೊಮಾಟ್ಸು ವಾಯುನೆಲೆಯಿಂದ 5 ಕಿ.ಮೀ. ದೂರದಲ್ಲಿ ವಿಮಾನವು ಕಣ್ಮರೆಯಾಯಿತು. ಈ ಯುದ್ಧ ವಿಮಾನವನ್ನು ಇಬ್ಬರು ಸಿಬ್ಬಂದಿಗೆ ವಿನ್ಯಾಸಗೊಳಿಸಲಾಗಿತ್ತು.
ಟೋಕಿಯೋ: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರಡಾರ್‌ನಿಂದ (Radar) ಜಪಾನ್‌ನ ಯುದ್ಧ ವಿಮಾನವೊಂದು (Fighter Jet) ಕಣ್ಮರೆಯಾಗಿದೆ. ನಾಪತ್ತೆಯಾದ ಯುದ್ಧ ವಿಮಾನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಪಾನ್‌ನ ಮಿಲಿಟರಿ ತಿಳಿಸಿದೆ. ಟೇಕ್-ಆಫ್ ಆದ ನಂತರ ಕೊಮಾಟ್ಸು ಕಂಟ್ರೋಲ್ ಟವರ್‌ನ ಡೇಟಾದಿಂದ F15 ಜೆಟ್‌ನ ಟ್ರ್ಯಾಕ್ ಕಣ್ಮರೆಯಾಯಿತು ಎಂದು ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ ವಕ್ತಾರರು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆ AFPಗೆ ಮಾಹಿತಿ ನೀಡಿರುವ ಅವರು, ಜಪಾನ್ ಸಮುದ್ರದ ಮಧ್ಯ ಇಶಿಕಾವಾ ಪ್ರದೇಶದ ಕೊಮಾಟ್ಸು ವಾಯುನೆಲೆಯಿಂದ 5 ಕಿ.ಮೀ. ದೂರದಲ್ಲಿ ವಿಮಾನವು ಕಣ್ಮರೆಯಾಯಿತು ಎಂದಿದ್ದಾರೆ. ಈ ಯುದ್ಧ ವಿಮಾನವನ್ನು ಇಬ್ಬರು ಸಿಬ್ಬಂದಿಗೆ ವಿನ್ಯಾಸಗೊಳಿಸಲಾಗಿತ್ತು. ಆದರೆ, ಎಷ್ಟು ಜನರು ವಿಮಾನದಲ್ಲಿದ್ದರು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ವಕ್ತಾರರು ಹೇಳಿದ್ದಾರೆ.
ಜಪಾನ್ ಸಾಂದರ್ಭಿಕವಾಗಿ ತನ್ನ ವಾಯುಪಡೆಯನ್ನು ಒಳಗೊಂಡ ಅಪಘಾತಗಳನ್ನು ಕಂಡಿದೆ. 2019ರಲ್ಲಿ ಪೈಲಟ್ ಪ್ರಾದೇಶಿಕ ದಿಗ್ಭ್ರಮೆಯನ್ನು ಅನುಭವಿಸಿದ ನಂತರ F-35A ಸ್ಟೆಲ್ತ್ ಜೆಟ್ ಸಮುದ್ರಕ್ಕೆ ಅಪ್ಪಳಿಸಿತ್ತು.
ಇದನ್ನೂ ಓದಿ: ಲಖನೌ ವಾಯುನೆಲೆ ಬಳಿ ಮಿರಾಜ್ ಯುದ್ಧ ವಿಮಾನದ ಟೈರ್ ಕಳವು, ಎಫ್‌ಐಆರ್ ದಾಖಲು
National Defence: ಸುಖೋಯ್ ಯುದ್ಧ ವಿಮಾನ: ಭಾರತೀಯ ವಾಯುಪಡೆಯ ಸುದೀರ್ಘ ಭರವಸೆ
Published On - 8:15 pm, Mon, 31 January 22