ಗುರುವಾರ ನೆದರ್ಲ್ಯಾಂಡ್​ನಿಂದ ಕಾಣೆಯಾಗಿದ್ದ ಪುಟ್ಟ ವಿಮಾನವೊಂದು ಐಸ್​ಲ್ಯಾಂಡ್​​ನ ಒಂದು ಸರೋವರದಲ್ಲಿ ಪತ್ತೆಯಾಗಿದೆ

ಐಸ್​ಲ್ಯಾಂಡ್ ನ ಕೋಸ್ಟ್ ಗಾರ್ಡ್ ನೀಡಿರುವ ಹೇಳಿಕಯೊಂದರಲ್ಲಿ, ವಿಮಾನವು ದೇಶದ ರಾಜಧಾನಿ ಮತ್ತು ಅಲ್ಲಿನ ಏಕಮಾತ್ರ ದೊಡ್ಡ ನಗರವಾಗಿರುವ ರೀಜಾವಿಕ್ ನಿಂದ ಪೂರ್ವಕ್ಕೆ 40 ಕಿಮೀ (25 ಮೈಲಿ) ದೂರದಲ್ಲಿರುವ ಥಿಂಗ್ವಲ್ಲವನ್ ಸರೋವರನಲ್ಲಿ ಪತ್ತೆಯಾಗಿದೆ.

ಗುರುವಾರ ನೆದರ್ಲ್ಯಾಂಡ್​ನಿಂದ ಕಾಣೆಯಾಗಿದ್ದ ಪುಟ್ಟ ವಿಮಾನವೊಂದು ಐಸ್​ಲ್ಯಾಂಡ್​​ನ ಒಂದು ಸರೋವರದಲ್ಲಿ ಪತ್ತೆಯಾಗಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on: Feb 06, 2022 | 7:40 AM

ಗುರುವಾರದಂದು ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಪುಟ್ಟ ವಿಮಾನವು ಎರಡು ದಿನಗಳ ನಂತರ ಐಸ್​ಲ್ಯಾಂಡಿನ (Iceland) ಸರೋವರವೊಂದರ (Lake) ತಳಭಾಗದಲ್ಲಿ ಪತ್ತೆಯಾಗಿದೆ ಎಂದು ಆ ದೇಶದ ಪೊಲೀಸ್ ಅಧಿಕಾರಿಗಳು ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದರಿ ವಿಮಾನದಲ್ಲಿ ಒಬ್ಬ ಪೈಲಟ್ ಮತ್ತು ಮೂವರು ಪ್ರವಾಸಿಗರಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರು ಬೇರೆ ಬೇರೆ ದೇಶವರಾಗಿದ್ದರೆಂದು ಗೊತ್ತಾಗಿದೆ. ಒಬ್ಬರು ಬೆಲ್ಜಿಯಂನವರಾದರೆ, (Belgian) ಇನ್ನೊಬ್ಬರು ನೆದರ್ಲ್ಯಾಂಡ್ಸ್ (Netherlands) ಮತ್ತು ಮೂರನೇಯವರು ಅಮೆರಿಕದವರಾಗಿದ್ದರು (US) ಎಂದು ಐಸ್​ಲ್ಯಾಂಡ್​ನ ಮೊರ್ಗನ್​ಬ್ಲ್ಯಾಡಿಡ್ ಹೆಸರಿನ ಪತ್ರಿಕೆ ವರದಿ ಮಾಡಿದೆ. ಆದರೆ ವಿಮಾನದಲ್ಲಿದ್ದವರು ಬದುಕಿದ್ದಾರೆಯೇ ಸತ್ತಿದ್ದಾರೆಯೇ ಎನ್ನುವ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಯಾಕೆಂದರೆ ವಿಮಾನವಿನ್ನೂ ಸರೋವರನಲ್ಲಿದೆ. ಅದನ್ನು ಹೊರಗೆಳೆಯುವುದು ಹೇಗೆ ಎಂದು ಸರ್ಕಾರ ಯೋಚಿಸುತ್ತಿದೆ. ಅದನ್ನು ಹೊರಗೆಳೆದ ನಂತರವೇ ಅದರಲ್ಲಿದ್ದವರ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಅವರು ಹೊರಬರಲಾದೆ ಮರಣಿಸಿದ್ದರೆ ದೇಹಗಳು ಏರ್​ಕ್ರಾಫ್ಟ್ ನಲೇ ಇರುತ್ತವೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮೂವರು ಪ್ರವಾಸಿಗರು ಸೈಟ್ ಸೀಯಿಂಗ್ ಉದ್ದೇಶದಿಂದ ಸೆಸ್ನಾ 172ಎನ್ ವಿಮಾನದಲ್ಲಿ ಗುರುವಾರ ಬೆಳಗ್ಗೆ ನೆದರ್​​ ಲ್ಯಾಂಡ್ಸ್ ನಿಂದ ಹೊರಟಿದ್ದರು.

ಐಸ್​ಲ್ಯಾಂಡ್ ನ ಕೋಸ್ಟ್​ಗಾರ್ಡ್ ನೀಡಿರುವ ಹೇಳಿಕಯೊಂದರಲ್ಲಿ, ವಿಮಾನವು ದೇಶದ ರಾಜಧಾನಿ ಮತ್ತು ಅಲ್ಲಿನ ಏಕಮಾತ್ರ ದೊಡ್ಡ ನಗರವಾಗಿರುವ ರೀಜಾವಿಕ್ ನಿಂದ ಪೂರ್ವಕ್ಕೆ 40 ಕಿಮೀ (25 ಮೈಲಿ) ದೂರದಲ್ಲಿರುವ ಥಿಂಗ್ವಲ್ಲವನ್ ಸರೋವರನಲ್ಲಿ ಪತ್ತೆಯಾಗಿದೆ. ಮಾನವರಹಿತ ಜಲಾಂತರಗಾಮಿ (ಸಬ್ ಮೆರೀನ್) ನೌಕೆಯೊಂದರ ಮೂಲ ಸರೋವರದ ತಳದಲ್ಲಿದ್ದ ವಿಮಾನವನ್ನು ಪತ್ತೆ ಮಾಡಲಾಯಿತು ಎಂದು ಕೋಸ್ಟ್​ಗಾರ್ಡ್ ಹೇಳಿದೆ.

ಆದರೆ, ಹಾಲೆಂಡಿನ ವಿದೇಶಾಂಗ ಇಲಾಖೆ ರಾಯಿಟರ್ ಸುದ್ದಿ ಸಂಸ್ಥೆಗೆ ಹೇಳಿಕೆಯೊಂದನ್ನು ನೀಡಿದ್ದು, ವಿಮಾನ ಕಾಣೆಯಾದಾಗ ಅದರಲ್ಲಿ ಬೆಲ್ಜಿಯಂನಲ್ಲಿ 27-ವರ್ಷ ವಯಸ್ಸಿನ ಡಚ್ ವ್ಯಕ್ತಿ ಅದರಲ್ಲಿದ್ದ ಎಂದು ಸೆಸ್ನಾ ಏರ್ಲೈನ್ ಕಂಪನಿಯು ತನಗೆ ತಿಳಿಸಿದೆ ಅಂತ ಹೇಳಿದೆ.

ಕೋಸ್ಟ್​ಗಾರ್ಡ್ ಅಧಿಕಾರಿಗಳು ಇನ್ನಿಬ್ಬರು ವ್ಯಕ್ತಿಗಳು ಮತ್ತು ಪೈಲಟ್ ಗುರುತಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ:  U19 World Cup 2022 Final, Ind vs Eng: ರಾಜ್ ಬಾವಾ ಮಾರಕ ಬೌಲಿಂಗ್: ಚಾಂಪಿಯನ್ ಪಟ್ಟಕ್ಕೇರಲು ಟೀಮ್ ಇಂಡಿಯಾಗೆ ಸುಲಭ ಗುರಿ