ಇಂಡೋನೇಷ್ಯಾ: ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿತ್ತು ರೈತನ ಶವ
ಏಕಾಏಕಿ ನಾಪತ್ತೆಯಾಗಿದ್ದ ರೈತರೊಬ್ಬರ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಇಂಡೋನೇಷ್ಯಾದ ದಕ್ಷಿಣ ಬುಟಾನ್ ಜಿಲ್ಲೆಯಲ್ಲಿ ನಡೆದಿದೆ. 63 ವರ್ಷದ ರೈತರ ಶವ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಅಂಟಾರಾ ವರದಿ ಪ್ರಕಾರ, ರೈತರೊಬ್ಬರು ತೋಟಕ್ಕೆ ಹೋದವರು ಹಿಂದಿರುಗಿ ಬಂದಿರಲಿಲ್ಲ. ಮಧ್ಯಾಹ್ನ 2.30ರ ಸುಮಾರಿಗೆ ಹಳ್ಳಿಯ ಜನರು ಹೆಬ್ಬಾವಿನ ಹೊಟ್ಟೆಯಲ್ಲಿ ಶವವನ್ನು ಪತ್ತೆ ಮಾಡಿದ್ದಾರೆ.

ಇಂಡೋನೇಷ್ಯಾ, ಜುಲೈ 07: ಏಕಾಏಕಿ ನಾಪತ್ತೆಯಾಗಿದ್ದ ರೈತರೊಬ್ಬರ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಇಂಡೋನೇಷ್ಯಾದ ದಕ್ಷಿಣ ಬುಟಾನ್ ಜಿಲ್ಲೆಯಲ್ಲಿ ನಡೆದಿದೆ. 63 ವರ್ಷದ ರೈತರ ಶವ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಅಂಟಾರಾ ವರದಿ ಪ್ರಕಾರ, ರೈತರೊಬ್ಬರು ತೋಟಕ್ಕೆ ಹೋದವರು ಹಿಂದಿರುಗಿ ಬಂದಿರಲಿಲ್ಲ. ಮಧ್ಯಾಹ್ನ 2.30ರ ಸುಮಾರಿಗೆ ಹಳ್ಳಿಯ ಜನರು ಹೆಬ್ಬಾವಿನ ಹೊಟ್ಟೆಯಲ್ಲಿ ಶವವನ್ನು ಪತ್ತೆ ಮಾಡಿದ್ದಾರೆ.
ತೋಟದಲ್ಲಿ ಒಂದು ಹೆಬ್ಬಾವು ಒದ್ದಾಡುತ್ತಿರುವುದು ಜನರ ಕಣ್ಣಿಗೆ ಬಿದ್ದಿತ್ತು, ಯಾವುದೋ ದೊಡ್ಡ ಹಾವನ್ನು ನುಂಗಿರಬೇಕು ಎಂದು ಜನರು ತಿಳಿದಿದ್ದರು. ಜನರು ಹಾವನ್ನು ಕೊಂದು ಹೊಟ್ಟೆ ಬಗೆದು ನೋಡಿದಾಗ ಅಲ್ಲಿ ರೈತರ ಶವ ಕಂಡಿದೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷ ತಿಳಿಸಿ, ಬಳಿಕ ರೈತರ ಶವವನ್ನು ಮನೆಗೆ ಸಾಗಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ (ಈ ವಿಡಿಯೋ ಭಯಾನಕವಾಗಿದೆ)
View this post on Instagram
ಈ ಪ್ರದೇಶದಲ್ಲಿ ಮನುಷ್ಯರನ್ನು ಹೆಬ್ಬಾವು ನುಂಗಿದ ಮೊದಲ ಘಟನೆ ಇದಾಗಿದೆ. ಈ ಗ್ರಾಮದಲ್ಲಿ ಮಳೆಗಾಲದ ಸಂದರ್ಭದಲ್ಲಿ ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ಮಾಡುವ ಘಟನೆಗಳು ಆಗಾಗ ವರದಿಯಾಗಿತ್ತಿರುತ್ತದೆ. ರೈತ ತೋಟದಿಂದ ಹಿಂದಿರುಗದ ಕಾರಣ ಕುಟುಂಬವು ನಾಪತ್ತೆ ದೂರನ್ನು ದಾಖಲಿಸಿತ್ತು. ತೋಟದಾದ್ಯಂತ ಹುಡುಕಿದಾಗ ರಸ್ತೆಯ ಪಕ್ಕದಲ್ಲಿ ಬೈಕ್ ನಿಂತಿದ್ದನ್ನು ಗಮನಿಸಿದ್ದಾರೆ. ಹೆಚ್ಚಿನ ಹುಡುಕಾಟ ನಡೆಸಿದಾಗ ಹೆಬ್ಬಾವು ಪತ್ತೆಯಾಗಿತ್ತು.
ಮತ್ತಷ್ಟು ಓದಿ: Video: ಜಸ್ಟ್ ಮಿಸ್; ಸ್ನೇಹಿತರೊಂದಿಗೆ ನೀರಿನಲ್ಲಿ ಆಡುತ್ತಿರುವಾಗ ಯುವಕನ ಮೇಲೆ ದಾಳಿ ಮಾಡಿದ ದೈತ್ಯ ಹಾವು
ಆ ಹಾವು ಒದ್ದಾಡುತ್ತಿರುವುದನ್ನು ನೋಡಿ ಮೊದಲು ಹಾವನ್ನು ನುಂಗಿರಬೇಕು ಎಂದುಕೊಂಡರು ಬಳಿಕ ಹೊಟ್ಟೆ ತುಂಬಾ ದೊಡ್ಡದಾಗಿದ್ದ ಕಾರಣ ಮನುಷ್ಯನನ್ನೇ ನುಂಗಿರಬೇಕೆಂದು ತಿಳಿದು ಹಾವನ್ನು ಕೊಂದು ಹೊಟ್ಟೆ ಸೀಳಿದಾಗ ವ್ಯಕ್ತಿಯ ದೇಹ ಕಂಡುಬಂದಿದೆ.
2017ರಲ್ಲಿ ಇದೇ ಮಾದರಿಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿತ್ತು. ಮಾರ್ಚ್ 2017ರಲ್ಲಿ 7 ಮೀಟರ್ 23 ಅಡಿ ಉದ್ದದ ಹೆಬ್ಬಾವು 25 ವರ್ಷದ ವ್ಯಕ್ತಿಯೊಬ್ಬನನ್ನು ನುಂಗಿತ್ತು. ಸಾಮಾನ್ಯವಾಗಿ ಇಂಡೋನೇಷ್ಯಾದಲ್ಲಿ ಸಾಮಾನ್ಯವಾಗಿ 20 ಅಡಿ ಉದ್ದದ ಹಾವುಗಳು ಕಂಡುಬರುತ್ತವೆ.ಹಾವುಗಳು ಸಣ್ಣ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ, ಮನುಷ್ಯರನ್ನು ತಿನ್ನುವ ಪ್ರಯತ್ನಗಳು ಅಪರೂಪ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Mon, 7 July 25