Video: ಜಸ್ಟ್ ಮಿಸ್; ಸ್ನೇಹಿತರೊಂದಿಗೆ ನೀರಿನಲ್ಲಿ ಆಡುತ್ತಿರುವಾಗ ಯುವಕನ ಮೇಲೆ ದಾಳಿ ಮಾಡಿದ ದೈತ್ಯ ಹಾವು
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಅಪರೂಪದ ದೃಶ್ಯಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅಂತಹದ್ದೊಂದು ಆಘಾತಕಾರಿ ದೃಶ್ಯ ಇದೀಗ ವೈರಲ್ ಆಗಿದ್ದು, ಸ್ನೇಹಿತರೊಂದಿಗೆ ಜಲಕ್ರೀಡೆಯಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಯುವಕನೊಬ್ಬನ ಮೇಲೆ ದೈತ್ಯ ಹಾವೊಂದು ಅಟ್ಯಾಕ್ ಮಾಡಲು ಮುಂದಾಗಿದೆ. ದಾಳಿಯಿಂದ ಯುವಕ ಸ್ವಲ್ಪದರಲ್ಲಿಯೇ ಪಾರಾಗಿದ್ದು, ಈ ಭಯಾನಕ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಹಾವುಗಳೆಂದರೆ (Snakes) ಯಾರಿಗೆ ತಾನೆ ಭಯವಿಲ್ಲ ಹೇಳಿ. ನಿಜ ಜೀವನದಲ್ಲಿ ಬಿಡಿ, ಕನಸಿನಲ್ಲಿ ಹಾವು ಕಂಡರೂ ಬೆಚ್ಚಿ ಬೀಳುವ ಅದೆಷ್ಟೋ ಜನರಿದ್ದಾರೆ. ಇನ್ನೂ ದೈತ್ಯ ಗಾತ್ರದ ಹಾವುಗಳನ್ನು ಕಂಡರಂತೂ ಜನ ಎದ್ನೋ ಬಿದ್ನೋ ಅಂತ ಓಡಿ ಹೋಗ್ತಾರೆ. ಇದೀಗ ಇಂತಹದ್ದೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ನೀರಲ್ಲಿ ಆಡುತ್ತಿದ್ದ ಯುವಕರು ದೈತ್ಯ ಹಾವನ್ನು ಕಂಡು ಪ್ರಾಣ ಉಳಿದರೆ ಸಾಕೆಂದು ಎದ್ನೋ ಬಿದ್ನೋ ಎಂದು ಓಡಿಹೋಗಿದ್ದಾರೆ. ಹೌದು ಒಂದು ದೊಡ್ಡ ಪೊದೆಯ ಪಕ್ಕದಲ್ಲಿದ್ದ ತೊರೆಯಲ್ಲಿ ಸ್ನೇಹಿತರೊಂದಿಗೆ ನೀರಾಟ ಆಡ್ತಿದ್ದ ವೇಳೆ ಯುವಕನೊಬ್ಬನ ಮೇಲೆ ದೈತ್ಯ ಹಾವು ಅಟ್ಯಾಕ್ (Giant snake attack’s young man) ಮಾಡಲು ಮುಂದಾಗಿದೆ. ಈ ದೃಶ್ಯವನ್ನು ಕಂಡು ನೋಡುಗರಂತೂ ಬೆಚ್ಚಿ ಬಿದ್ದಿದ್ದಾರೆ.
ನೀರಾಟವಾಡುತ್ತಿದ್ದವನ ಮೇಲೆ ದಾಳಿ ಮಾಡಲು ಮುಂದಾದ ದೈತ್ಯ ಹಾವು:
ಕಾಡಿನ ಪಕ್ಕದಲ್ಲೇ ಇದ್ದಂತಹ ತೊರೆಯ ಬಳಿ ಒಂದಷ್ಟು ಯುವಕರು ಆಟವಾಡುತ್ತಿದ್ದ ವೇಳೆ ಪೊದೆಯಿಂದ ಹೊರ ಬಂದಂತಹ ಹಾವೊಂದು ಅಲ್ಲೇ ಪೊದೆಯ ಪಕ್ಕದಲ್ಲಿ ಕುಳಿತಿದ್ದ ಯುವಕನ ಮೇಲೆ ಅಟ್ಯಾಕ್ ಮಾಡಲು ಮಾಡಲು ಮುಂದಾಗಿದೆ. ಹಾವನ್ನು ಕಂಡೊಡನೆ ಪ್ರಾಣ ಉಳಿದರೆ ಸಾಕೆನ್ನುತ್ತಾ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಭಯಾನಕ ದೃಶ್ಯವನ್ನು elio_saldana ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಡಿನ ಪಕ್ಕದಲ್ಲಿರುವ ತೊರೆಯಲ್ಲಿ ಒಂದಷ್ಟು ಯುವಕರು ನೀರಾಟ ಆಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ವೇಳೆ ಪೊದೆಯಿಂದ ಮೆಲ್ಲನೆ ಹೊರ ಬಂದಂತಹ ದೈತ್ಯ ಹಾವೊಂದು ಪೊದೆಯ ಪಕ್ಕದಲ್ಲೇ ಕುಳಿತಿದ್ದ ಯುವಕನ ಮೇಲೆ ಅಟ್ಯಾಕ್ ಮಾಡಿದೆ. ಹಾವನ್ನು ಕಂಡ ತಕ್ಷಣ ಯುವಕರು ಅಲ್ಲಿಂದ ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ.
ಇದನ್ನೂ ಓದಿ: ಬೆಡ್‌ರೂಮಿನ ಕರ್ಟನ್ ಮೇಲೆ ಹೆಡೆಯೆತ್ತಿ ಕುಳಿತ ಬುಸ್ ನಾಗಪ್ಪ
ಜುಲೈ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ 58 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜವೇ? ನನಗಂತೂ ನಂಬಲು ಸಾಧ್ಯವಾಗುತ್ತಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಯುವಕ ತುಂಬಾನೇ ಅದೃಷ್ಟವಂತʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜವೋ ಸುಳ್ಳೋ ಒಂದು ತಿಳಿಯುತ್ತಿಲ್ಲʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ