ಮ್ಯಾನೇಜರ್ ಕಳುಹಿಸಿದ ಮೆಸೇಜ್ ಸ್ಕ್ರೀನ್ಶಾಟ್ನ್ನು ಸ್ನೇಹಿತೆಗೆ ಕಳುಹಿಸುವ ಬದಲು ಕಚೇರಿ ಗ್ರೂಪ್ನಲ್ಲಿ ಹಂಚಿಕೊಂಡ ಯುವತಿ
ಆಫೀಸ್ನಲ್ಲಿ ಬಾಸ್, ಮ್ಯಾನೇಜರ್ ಬಗ್ಗೆ ಮಾತನಾಡುವಾಗ ತುಂಬಾ ಎಚ್ಚರದಲ್ಲಿರಬೇಕು ಎನ್ನುವುದು ಇದಕ್ಕೆ ನೋಡಿ. ಯಾರ ಜೊತೆಗೂ ಕಚೇರಿಯಲ್ಲಿ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳ ಬಗ್ಗೆ ಹಂಚಿಕೊಳ್ಳಬಾರದು. ಹಂಚಿಕೊಂಡರೆ ಈ ರೀತಿ ಫಜೀತಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಯುವತಿಯೊಬ್ಬಳು ಮ್ಯಾನೇಜರ್ ವೈಯಕ್ತಿಕವಾಗಿ ತನಗೆ ಮೆಸೇಜ್ ಮಾಡಿದ ಸ್ಕ್ರೀನ್‌ಶಾಟ್ ಅನ್ನು ಗೆಳತಿಗೆ ಕಳುಹಿಸುವ ಬದಲು ಕಚೇರಿಯ ಗ್ರೂಪ್ಗೆ ಕಳುಹಿಸಿ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸ್ನೇಹಿತರ ಜೊತೆಗೆ ಆಫೀಸ್ ವಿಚಾರಗಳನ್ನು ಹಂಚಿಕೊಳ್ಳುವಾಗ ಸ್ವಲ್ಪ ಎಚ್ಚರದಿಂದ ಇರಬೇಕು. ಇಲ್ಲವೆಂದರೆ ಅವಮಾನ ಆಗುವುದು ಖಂಡಿತ, ಅದರಲ್ಲೂ ವಾಟ್ಸಪ್ನಲ್ಲಿ ಇನ್ನು ಎಚ್ಚರವಾಗಿ ಸಂದೇಶಗಳನ್ನು ಪಾಸ್ ಮಾಡಬೇಕು. ಇಲ್ಲೊಂದು ಇಂತಹದೇ ಘಟನೆಯ ಬಗ್ಗೆ ಯುವತಿಯೊಬ್ಬಳು (Employee) ಹಂಚಿಕೊಂಡಿದ್ದಾಳೆ. ತಾನು ಮಾಡಿದ ತಪ್ಪಿಗೆ ದೊಡ್ಡ ಮಟ್ಟದ ಅವಮಾನವನ್ನು ಆಫೀಸ್ ಸ್ನೇಹಿತರ ಮುಂದೆ ಅನುಭವಿಸಿದ್ದಾಳೆ. ಮ್ಯಾನೇಜರ್ ತನ್ನ ಜೊತೆಗೆ ವೈಯಕ್ತಿಕವಾಗಿ ಮಾತನಾಡಿರುವ ಸ್ಕ್ರೀನ್‌ಶಾಟ್ ಅನ್ನು ಸ್ನೇಹಿತೆಗೆ ಕಳುಹಿಸುವ ಬದಲು, ಮ್ಯಾನೇಜರ್, ಎಚ್ಆರ್ ಇರುವ ಗ್ರೂಪ್ನಲ್ಲಿ ಹಂಚಿಕೊಂಡಿದ್ದಾಳೆ. ಇದೀಗ ದೊಡ್ಡ ಫಜೀತಿ ಆಗಿದ್ದು, ಎಲ್ಲರ ಮುಂದೆ ಮ್ಯಾನೇಜರ್ ಮರ್ಯಾದೆಯನ್ನು ತೆಗೆದಂತಾಗಿದೆ. ಈ ಬಗ್ಗೆ ಆಕೆಯ ಮ್ಯಾನೇಜರ್ ಮೌನವಾಗಿದ್ದರೂ, ಎಚ್ಆರ್ ಆಕೆಗೆ ಮೇಲ್ ಮೂಲಕ ಈ ಬಗ್ಗೆ ಉತ್ತರಿಸುವಂತೆ ಕೇಳಿಕೊಂಡಿದ್ದಾರಂತೆ.
ಈ ಬಗ್ಗೆ ವಿಡಿಯೋವೊಂದನ್ನು ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ತನ್ನ ಸ್ನೇಹಿತೆಯೊಬ್ಬಳು ತನ್ನ ಹೊಸ ಮ್ಯಾನೇಜರ್ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದಾಳೆ, ಅವಳು ಅವನು ಆಗಾಗ್ಗೆ ಬಳಸುವ ಒಂದು ಪದದ ಅರ್ಥವನ್ನು ಕೂಡ ನನ್ನ ಬಳಿ ಕೇಳುತ್ತಿದ್ದಳು. ನಾನು ಪ್ರತಿಯೊಂದನ್ನು ಸ್ಕ್ರೀನ್‌ಶಾಟ್ ತೆಗೆದು ಕಳುಹಿಸುತ್ತಿದ್ದಿದೆ. ಆದರೆ ನಾನು ಅದನ್ನು ಅವಳಿಗೆ ಕಳುಹಿಸುವ ಬದಲು ಅದನ್ನು ಗ್ರೂಪ್ನಲ್ಲಿ ಹಾಕಿದ್ದಾನೆ. ಆ ಗ್ರೂಪ್ನಲ್ಲಿ ಸ್ನೇಹಿತರು, ಬಾಸ್, ಮ್ಯಾನೇಜರ್, ಎಚ್ಆರ್ ಕೂಡ ಇದ್ದರು. ಎಲ್ಲ ಮುಂದೆ ಮುಜುಗರ ಆಗಿರುವುದು ಖಂಡಿತ ಎಂದು ವಿಡಿಯೋವೊಂದರಲ್ಲಿ ಹಂಚಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ತನ್ನ ತಪ್ಪಿನ ಅರಿವಾದ ನಂತರ ತನಗೆ ಹೇಗನಿಸಿತು ಎಂಬ ಬಗ್ಗೆ ವಿವರಿಸಿದ್ದಾಳೆ. ನಾನು ನನ್ನ ಫೋನ್, ನನ್ನ ಕೆಲಸ, ನನ್ನ ಆತ್ಮ ಎಲ್ಲವನ್ನೂ ಕಸದ ಬುಟ್ಟಿಗೆ ಎಸೆಯಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಆರಂಭದಲ್ಲಿ ತನ್ನ ಮ್ಯಾನೇಜರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, HR ನಿಂದ ಮೀಟಿಂಗ್ಗೆ ಬರುವಂತೆ ಮೇಲ್ ಒಂದು ಬಂದಿತ್ತು. ಈ ಮೀಟಿಂಗ್ನಲ್ಲಿ ಜಾಗರೂಕರಾಗಿರಿ ಎಂದು ಹೇಳಲಾಗಿತ್ತು, ಹೊರತು ನನ್ನ ಈ ತಪ್ಪನ್ನು ಖಂಡಿಸಲಿಲ್ಲ. ಆದರೆ ಮ್ಯಾನೇಜರ್ ಆಕೆಯ ಜೊತೆ ಅತಿಯಾಗಿ ಅಸಭ್ಯವಾಗಿ ವರ್ತಿಸಲು ಮತ್ತು ಆಕೆಯ ಹೆಸರನ್ನು ಹೇಳದೆಯೇ ಕೀಳಾಗಿ ಮಾತನಾಡಲು ಪ್ರಾರಂಭಿಸಿದಾಗ ಕಚೇರಿಯಲ್ಲಿ ಆಕೆಯ ಪರಿಸ್ಥಿತಿ ತುಂಬಾ ಕೆಟ್ಟಾಗಿತ್ತು ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: 400 ಕಿ.ಮೀ ದೂರದಿಂದ ಮೋದಿಯನ್ನು ನೋಡಲು ಬಂದ ಭಾರತೀಯನಿಗೆ ಪ್ರಧಾನಿ ಕೈಕುಲುಕುವ ಭಾಗ್ಯ, ಹೇಗಿತ್ತು ನೋಡಿ ಆ ಕ್ಷಣ
ಸಾಮಾಜಿಕ ಜಾಲತಾಣದಲ್ಲಿ ಕೂಡ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಸ್ಕ್ರೀನ್‌ಶಾಟ್ ಹಂಚಿಕೊಂಡ ತಕ್ಷಣ ಯಾಕೆ ಏಕೆ ಅಳಿಸಲಿಲ್ಲ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಯುವತಿ ಆ ಆಯ್ಕೆ ನನಗೆ ಇರಲಿಲ್ಲ ಎಂದು ಹೇಳಿದ್ದಾಳೆ. ಮತ್ತೊಬ್ಬ ಬಳಕೆದಾರ ನೀವು ಮ್ಯಾನೇಜರ್ ಬಗ್ಗೆ ಮಾತನಾಡಿರಿವುದೇ ತಪ್ಪು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ