Video :ವಾವ್ಹ್…. ನೇಪಾಳದ ಈ ‘ಚಾಯ್ ವಾಲಿ’ ಸೌಂದರ್ಯಕ್ಕೆ ಕ್ರಶ್ ಆಗುವುದು ಖಂಡಿತ
ಸೋಶಿಯಲ್ ಮೀಡಿಯಾವೇ ಹಾಗೇ, ಸಾಮಾನ್ಯ ವ್ಯಕ್ತಿಗಳನ್ನು ಜನಪ್ರಿಯರನ್ನಾಗಿಸಿ ಬಿಡುತ್ತದೆ. ಈಗಾಗಲೇ ರಾತ್ರಿ ಬೆಳಗಾಗುವಷ್ಟರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ. ಆದರೆ ಇದೀಗ ನೇಪಾಳದಲ್ಲಿ ಚಹಾ ಮಾರುವ ಯುವತಿಯೊಬ್ಬಳು ತನ್ನ ಸಹಜ ಸೌಂದರ್ಯ ಹಾಗೂ ಮುಗ್ಧತೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದಾಳೆ. ಈಕೆಯ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈಕೆಯ ಬ್ಯೂಟಿಗೆ ಮನಸೋತಿದ್ದಾರೆ.

ಅದೃಷ್ಟ ಯಾವಾಗ ಹೇಗೆ ಕೈ ಹಿಡಿಯುತ್ತದೆ ಎಂದು ಹೇಳಲಾಗದು. ಸಾಮಾನ್ಯರಂತೆ ಬದುಕುತ್ತಿರುವ ಜನರು ಅದೃಷ್ಟ ಕೈಹಿಡಿದು ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಆಗಿ ಬಿಡುತ್ತಾರೆ. ಇತ್ತೀಚೆಗಷ್ಟೇ ತನ್ನ ಕಣ್ಣುಗಳ ಸೌಂದರ್ಯದಿಂದಲೇ ಕುಂಭಮೇಳದಲ್ಲಿ ಮೊನಾಲಿಸಾ (Monalisa) ಸಿಕ್ಕಾಪಟ್ಟೆ ಫೇಮಸ್ ಆಗಿದ್ದಳು. ಈಕೆ ಈಗಾಗಲೇ ಬಾಲಿವುಡ್ ರಂಗಕ್ಕೂ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ಇದೀಗ ನೇಪಾಳದ ಕಠ್ಮಂಡುವಿನಲ್ಲಿ (Kathmandu of Nepal) ಚಹಾ ಮಾರುತ್ತಿರುವ ಯುವತಿಯೊಬ್ಬಳು (Nepali lady) ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದಾಳೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಈಕೆಯ ಹವಾ ಜೋರಾಗಿದೆ. ಈ ಹುಡುಗಿ ಮಾಡುವ ಚಹಾಕ್ಕಿಂತ ಈಕೆಯ ನಗು ಹಾಗೂ ಮುಗ್ಧತೆಯೂ ಎಲ್ಲರಿಗೂ ಇಷ್ಟವಾಗಿದೆ.
@napal-beautuful-country-in-the ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುವತಿಯೊಬ್ಬಳು ನೇಪಾಳದ ರಸ್ತೆಬದಿಯಲ್ಲಿ ಚಹಾ ತಯಾರಿಸುತ್ತಿರುವುದನ್ನು ಕಾಣಬಹುದು. ಚಹಾ ಮಾಡುತ್ತಿರುವ ಈ ಯುವತಿಯ ಸೌಂದರ್ಯ, ನಗು ಹಾಗೂ ಮುಗ್ಧತೆ, ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ತಿಳಿ ನೀಲಿ ಬಣ್ಣದ ಕುರ್ತಾ, ಬಿಳಿ ಬಣ್ಣದ ದುಪ್ಪಟ್ಟಾ, ಹಣೆಗೆ ಸಣ್ಣದಾದ ಬಿಂದಿ ಹಾಗೂ ತುಟಿಗೆ ತಿಳಿ ಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದು, ಬೀದಿ ಬದಿಯಲ್ಲಿ ಚಹಾ ಮಾಡಿ ಗ್ರಾಹಕರಿಗೆ ನೀಡುತ್ತಿರುವುದನ್ನು ಕಾಣಬಹುದು. ಜಿಂಕೆಯಂತಹ ಆಕರ್ಷಕ ಕಣ್ಣುಗಳು, ನಗು, ಮುಗ್ಧತೆಯೂ ಆಕೆಯ ನಡವಳಿಕೆಯಲ್ಲಿ ಎದ್ದು ಕಾಣುತ್ತಿದೆ.
ಇದನ್ನೂ ಓದಿ : Video : ಚೀನಾ ಸಸ್ಯಾಹಾರಿಗಳ ಕೆಟ್ಟ ದುಃಸ್ವಪ್ನವೇ? ಸಸ್ಯಾಹಾರಿಗಳ ಪರಿಸ್ಥಿತಿ ವಿವರಿಸಿದ ಭಾರತೀಯ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ ಈವರೆಗೆ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಈಕೆ ಚಹಾ ಮಾಡುವ ರೀತಿಗಿಂತ, ಈಕೆಯ ಸೌಂದರ್ಯ ಮುಗ್ಧತೆಗೆ ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು, ಈ ಯುವತಿ ತುಂಬಾನೇ ಮುದ್ದಾಗಿದ್ದಾಳೆ. ಅಷ್ಟೇ ಶ್ರಮಜೀವಿಯಾಗಿದ್ದಾಳೆ ಎಂದಿದ್ದಾರೆ. ಮತ್ತೊಬ್ಬರು, ಮುಗ್ಧ ಮಹಿಳೆಯ ಜೊತೆಗೆ ಬದುಕುವುದು ಪ್ರತಿಯೊಬ್ಬ ಪುರುಷನ ಕನಸಾಗಿರುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಇನೊಬ್ಬ ಬಳಕೆದಾರ, ಆಕೆಯ ನಗುವನ್ನು ನೋಡಿದ್ರೆ ಚಹಾ ಖರೀದಿಸಲು ಮನಸ್ಸಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Fri, 4 July 25








