Video : ಚೀನಾ ಸಸ್ಯಾಹಾರಿಗಳ ಕೆಟ್ಟ ದುಃಸ್ವಪ್ನವೇ? ಸಸ್ಯಾಹಾರಿಗಳ ಪರಿಸ್ಥಿತಿ ವಿವರಿಸಿದ ಭಾರತೀಯ
ಚೀನಾದಲ್ಲಿ ಎಲ್ಲವೂ ಸಿಗುತ್ತದೆ, ಆದರೆ ಸಸ್ಯಾಹಾರ ಸಿಗುವುದಿಲ್ಲ, ಇದು ಚೀನಿಯರಿಗೆ ಕೆಟ್ಟ ದುಃಸ್ವಪ್ನವೇ? ಎಂದು ಭಾರತೀಯ ಯೂಟ್ಯೂಬರ್ ಪ್ರಶ್ನೆ ಮಾಡಿದ್ದಾರೆ. ಚೀನಾದಲ್ಲಿ ಸಸ್ಯಾಹಾರ ಸಿಗುವುದು ಕಷ್ಟ ಎಂದು ಹೇಳಿದ್ದಾರೆ. ಆದರೆ ಚೀನಾದ ಈ ಮಾರುಕಟ್ಟೆಯಲ್ಲಿ ಮಾತ್ರ ಎಲ್ಲಾ ಬಗೆಯ ತರಕಾರಿ ಹಾಗೂ ಹಣ್ಣುಗಳು ಸಿಗುತ್ತದೆ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ.

ಚೀನಾದಲ್ಲಿ (China) ಹೆಚ್ಚಿನ ಜನರು ಮಾಂಸಗಳನ್ನು ಸೇವನೆ ಮಾಡುವುದು, ಈ ದೇಶಕ್ಕೆ ಬೇರೆ ಬೇರೆ ರಾಷ್ಟ್ರಗಳ ಜನರು ಬರುತ್ತಾರೆ. ಅದರಲ್ಲಿ ಹೆಚ್ಚಿನವರು ಸಸ್ಯಹಾರಿಗಳು, ಇನ್ನು ಕೆಲವರು ಚೀನಾದ ಮಾಂಸಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಚೀನಾದಲ್ಲಿ ಭಾರತದ ಸಸ್ಯಾಹಾರಿಗಳು ಕೂಡ ಇದ್ದಾರೆ, ಚೀನಾದಲ್ಲಿ ಸಸ್ಯಾಹಾರಕ್ಕಿಂತ ಮಾಂಸಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಆದರೆ ಬೇರೆ ದೇಶದಿಂದ ಉದ್ಯೋಗಕ್ಕೆ, ಕಲಿಕೆಗೆಂದು ಬರುವ ಸಸ್ಯಾಹಾರಿಗಳ ಪರಿಸ್ಥಿತಿ ಏನು? ಎಂಬ ಬಗ್ಗೆ ಭಾರತೀಯ ಮೂಲದ ಅಥರ್ವ ಮಹೇಶ್ವರಿ ಎಂಬ ವ್ಯಕ್ತಿ ವಿವರಿಸಿದ್ದಾರೆ. ಚೀನಾದಲ್ಲಿ ವಾಸಿಸುತ್ತಿರುವ ಭಾರತೀಯ ಯುವಕ ಅಥರ್ವ ಮಹೇಶ್ವರಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚೀನಾದಲ್ಲಿ ಸ್ಥಳೀಯರು ಮಾಂಸ ಅಥವಾ ಸಮುದ್ರಾಹಾರವನ್ನು ಮಾತ್ರ ತಿನ್ನುವುದರಿಂದ ಸಸ್ಯಾಹಾರಿಗಳಿಗೆ ಸರಿಯಾದ ಆಹಾರ ಸಿಗುವುದು ಕಷ್ಟ ಎಂದು ಹೇಳಿಕೊಂಡಿದ್ದಾರೆ.
ಚೀನಾ ಸಸ್ಯಾಹಾರಿಗಳ ಕೆಟ್ಟ ದುಃಸ್ವಪ್ನವೇ? ಎಂದು ಅಥರ್ವ ಮಹೇಶ್ವರಿ ತನ್ನ ವಿಡಿಯೋದಲ್ಲಿ ಶೀರ್ಷಿಕೆಯನ್ನು ಹಾಕಿಕೊಂಡಿದ್ದಾರೆ. ನೀಲಕಮಲ್ ಹೋಮ್ಸ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚೀನಾದಲ್ಲಿ ವಾಸಿಸುವ ಭಾರತೀಯ ಸಸ್ಯಾಹಾರಿಗಳೇ, ನಿಮಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ನಾನು ಇಲ್ಲಿದ್ದೇನೆ ಎಂದು ತಮ್ಮ ಯೂಟ್ಯೂಬ್ನಲ್ಲಿ ಬರೆದುಕೊಂಡಿದ್ದಾರೆ. ಚೀನಾದ ಆಹಾರಗಳು ಸಂಪೂರ್ಣ ಮಾಂಸಹಾರಿಗಳಾಗಿದ್ದು, ಇಲ್ಲಿ ಸಸ್ಯಾಹಾರ ಸಿಗುತ್ತದೆ ಎನ್ನುವುದನ್ನು ಮರೆತು ಬಿಡಿ ಎಂದು ಹೇಳಿ, ಇದರ ಮಧ್ಯೆ ತನ್ನ ವಿಡಿಯೋದಲ್ಲಿ ಸಸ್ಯಾಹಾರ ಸಿಗುವ ಪ್ರದೇಶದ ಬಗ್ಗೆ ವಿವರಿಸಿದ್ದಾರೆ. ಈ ಸ್ಥಳೀಯ ಮಾರುಕಟ್ಟೆಯನ್ನು ನಿಜವಾದ ಸಸ್ಯಾಹಾರಿ ಸ್ವರ್ಗ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಕಂಡು ಹಿಡಿಯಬಲ್ಲಿರಾ?
ವಿಡಿಯೋ ಇಲ್ಲಿದೆ ನೋಡಿ:
ವಿಡಿಯೋದಲ್ಲಿ ಈ ಮಾರುಕಟ್ಟೆಯಲ್ಲಿ ಸಿಗುವ ತರಕಾರಿ ಹಾಗೂ ಹಣ್ಣುಗಳ ಬಗ್ಗೆ ವಿವರಿಸಿದ್ದಾರೆ. ಈ ಮಾರುಕಟ್ಟೆಯಲ್ಲಿ ಬೊಕ್ ಚಾಯ್ ಮತ್ತು ಗೈ ಲ್ಯಾನ್‌ನಂತಹ ಲೆಕ್ಕವಿಲ್ಲದಷ್ಟು ಬಗೆಯ ಎಲೆಗಳ ತರಕಾರಿಗಳಿಂದ ಹಿಡಿದು, ಕಮಲದ ಬೇರು, ಡಜನ್‌ಗಟ್ಟಲೇ ವಿವಿಧ ಪ್ರಭೇದಗಳ ಅಣಬೆ , ಬಿದಿರಿನ ಚಿಗುರುಗಳು ಮತ್ತು ದೈತ್ಯ ಪೊಮೆಲೋಗಳಂತಹ ವಿಶಿಷ್ಟ ಹಣ್ಣುಗಳು ಇಲ್ಲಿ ಸಿಗುತ್ತದೆ. ಚೀನಾದ ಯಾವ ಭಾಗದಲ್ಲೂ ಇಂತಹ ಸಸ್ಯಾಹಾರ ಮಾರುಕಟ್ಟೆ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಭಾರತದಲ್ಲಿ ಸಿಗುವ ಓರ್ಕಾ, ಕಮಲದ ಬೇರು, ಬದನೆಕಾಯಿ ಮತ್ತು ಇತರ ಸಾಮಾನ್ಯ ತರಕಾರಿಗಳನ್ನು ತೋರಿಸಿದ್ದಾರೆ. ಇದರ ಜತೆಗೆ ಚೀನಾದಲ್ಲಿ ಸಿಗುವ ವಿಶೇಷವಾದ ತರಕಾರಿ ಹಾಗೂ ಹಣ್ಣುಗಳ ಬಗ್ಗೆಯೂ ಪರಿಚಯಿಸಿದ್ದಾರೆ. ಇನ್ನು ಅಥರ್ವ ಮಹೇಶ್ವರಿ ಅವರ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ಬಳಕೆದಾರರೂ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Fri, 4 July 25








