Video : ಮಳೆಯಲ್ಲಿ ಸಖತ್ ಸ್ಟೆಪ್ ಹಾಕಿದ ಪುಟಾಣಿ
ಮಳೆ ಅಂದ್ರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಕೆಲವರು ಯಾಕಾದ್ರೂ ಈ ಮಳೆ ಬರ್ತದೆ ಎಂದು ಗೊಣಗಿದ್ರೆ, ಇನ್ನು ಕೆಲವರು ಈ ಮಳೆಗಾಲವನ್ನು ಸಖತ್ ಎಂಜಾಯ್ ಮಾಡ್ತಾರೆ. ಆದರೆ ಇದೀಗ ಇಲ್ಲೊಬ್ಬಳು ಪುಟಾಣಿಯೂ ಮೈಯೆಲ್ಲಾ ಒದ್ದೆ ಮಾಡಿಕೊಂಡು ಮಳೆಯಲ್ಲಿ ಮೈಮರೆತು ಕುಣಿದಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ತರಹ ಅವಕಾಶವನ್ನು ಯಾರು ಮಿಸ್ ಮಾಡಿಕೊಳ್ತಾರೆ ಎಂದಿದ್ದಾರೆ.

ಮಳೆಯಲ್ಲಿ (rain) ಮೈಚಳಿ ಬಿಟ್ಟು ಕುಣಿಯಲು ಎಲ್ಲರಿಗೂ ಇಷ್ಟ. ಸುರಿಯುವ ಮಳೆಯನ್ನು ಕಂಡಾಗ ದೊಡ್ಡವರು ಕೂಡ ಮಕ್ಕಳಂತೆ ವರ್ತಿಸುತ್ತಾರೆ. ಹೆಚ್ಚಿನವರಿಗೆ ಮಳೆಯಲ್ಲಿ ಒಮ್ಮೆಯಾದ್ರು ನೆನೆಯಬೇಕು, ಮನಸ್ಸು ಬಿಚ್ಚಿ ಕುಣಿಯಬೇಕು ಎನ್ನುವ ಆಸೆ ಇರುತ್ತದೆ. ತುಂತುರು ಮಳೆಯಲ್ಲಿ ಕುಣಿಯೋದು ದೊಡ್ಡ ವಿಷಯವಲ್ಲ, ಈ ಮಳೆಯಲ್ಲಿ ನೆನೆದು ನೆಗಡಿಯಾದ್ರೆ ಅಮ್ಮ ಬೈತಾಳೆ ಎನ್ನುವ ಕಾರಣಕ್ಕೆ ಈ ಆಸೆಯೂ ಹಾಗೆಯೇ ಉಳಿದು ಬಿಡುತ್ತದೆ. ಆದರೆ ಇಲ್ಲೊಬ್ಬಳು ಪುಟ್ಟ ಹುಡುಗಿಯೂ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಮೈಚಳಿ ಬಿಟ್ಟು ಸಖತ್ ಆಗಿ ಡ್ಯಾನ್ಸ್ (dance) ಮಾಡಿದ್ದಾಳೆ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗುತ್ತಿದ್ದಂತೆ, ಈ ಪುಟಾಣಿಯ ಎಕ್ಸ್ಪ್ರೆಶನ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ivanshika-prathyush ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಪುಟಾಣಿಯೊಬ್ಬಳು ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವುದನ್ನು ಕಾಣಬಹುದು. ಹಾಡಿಗೆ ತಕ್ಕಂತೆ ಸ್ಟೆಪ್ ಹಾಗೂ ಮುದ್ದಾದ ಎಕ್ಸ್ಪ್ರೆಶನ್‌ನೊಂದಿಗೆ ಮಳೆಯಲ್ಲಿ ಡ್ಯಾನ್ಸ್ ಮಾಡುವುದನ್ನು ಎಂಜಾಯ್ ಮಾಡುತ್ತಿದ್ದಾಳೆ. ಆಕೆಯಲ್ಲಿ ಆತ್ಮವಿಶ್ವಾಸವು ಎದ್ದು ಕಾಣುತ್ತಿದೆ.
ಇದನ್ನೂ ಓದಿ :ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ ಇದು, ಊಟ ತಿಂಡಿಗಾಗಿ ಏನ್ ಮಾಡ್ತಾರೆ ಇಲ್ಲಿನ ಜನ ಗೊತ್ತಾ?
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ 1.9 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಕ್ಲಿಪ್ ನೋಡಿ ಪುಟಾಣಿಯ ಡ್ಯಾನ್ಸ್‌ಗೆ ಫುಲ್ ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು, ನನಗೆ ಈ ದಿನವು ತುಂಬಾ ಆಯಾಸದಾಯಕವಾಗಿತ್ತು, ಆದರೆ ದಿನದ ಕೊನೆಯಲ್ಲಿ ಈ ಪುಟಾಣಿಯೂ ನನ್ನ ಮುಖದಲ್ಲಿ ನಗು ತರಿಸಿದ್ದಾಳೆ ಎಂದಿದ್ದಾರೆ. ಇನ್ನೊಬ್ಬರು, ಮಕ್ಕಳು ಈ ಪ್ರಪಂಚವೇ ಹಾಗೆ, ಎಲ್ಲವನ್ನು ಮರೆತು ಸದಾ ಲವಲವಿಕೆಯಿಂದ ಇರುತ್ತಾರೆ. ಸಣ್ಣ ಸಣ್ಣ ವಿಷಯಗಳನ್ನು ಎಂಜಾಯ್ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪೋಷಕರು ಮಕ್ಕಳನ್ನು ಹೀಗೆ ಮಳೆಯಲ್ಲಿ ನೆನೆಯಲು ಬಿಡಬೇಕು ಎಂದಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








