400 ಕಿ.ಮೀ ದೂರದಿಂದ ಮೋದಿಯನ್ನು ನೋಡಲು ಬಂದ ಭಾರತೀಯನಿಗೆ ಪ್ರಧಾನಿ ಕೈಕುಲುಕುವ ಭಾಗ್ಯ, ಹೇಗಿತ್ತು ನೋಡಿ ಆ ಕ್ಷಣ
ಪ್ರಧಾನಿ ಮೋದಿ ಹತ್ತಿರ ಹೋಗುವುದೇ ಕಷ್ಟ, ಅದರಲ್ಲೂ ಅವರ ಹತ್ತಿರ ಹೋಗಿ ಕೈಕುಲುಕುವ ಭಾಗ್ಯ ಸಿಗುತ್ತಾ? ಆದರೆ ಇಲ್ಲೊಬ್ಬ ಭಾರತೀಯನಿಗೆ ಆ ಭಾಗ್ಯ ಸಿಕ್ಕಿದೆ. ಪ್ರಧಾನಿ ಮೋದಿ ಅವರು ಹಲವು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಇದೀಗ ಅರ್ಜೆಂಟೀನಾ ದೇಶಕ್ಕೂ ಬಂದಿದ್ದಾರೆ. ಈ ವೇಳೆ 400 ಕಿ.ಮೀ ದೂರದಿಂದ ಮೋದಿಯನ್ನು ನೋಡಲು ಭಾರತೀಯ ವ್ಯಕ್ತಿಯೊಬ್ಬರು ಬ್ಯೂನಸ್ ಐರಿಸ್‌ಗೆ ಬಂದಿದ್ದಾರೆ. ದೂರದಿಂದ ನೋಡಿ ಹೋಗುವ ಎಂದು ಬಂದಿದ್ದ ಈ ವ್ಯಕ್ತಿಗೆ ಮೋದಿಯ ಕೈಕುಲುಕುವ ಭಾಗ್ಯ ಸಿಕ್ಕಿದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಟ್ರಿನಿಡಾಡ್ ಮತ್ತು ಟೊಬಾಗೋ, ಪೋರ್ಟ್ ಆಫ್ ಸ್ಪೇನ್, ಘಾನಾಕ್ಕೆ ಪ್ರವಾಸ ಮಾಡಿದ್ದಾರೆ. ಇಂದು (ಜು.5) ಅರ್ಜೆಂಟೀನಾದ ಬ್ಯೂನಸ್ ಐರಿಸ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಈ ಭೇಟಿ ವೇಳೆ, ಅವರನ್ನು ನೋಡಲು ಅರ್ಜೆಂಟೀನಾದಲ್ಲಿರುವ ಭಾರತೀಯ ವ್ಯಕ್ತಿಯೊಬ್ಬರು 400 ಕಿ.ಮೀ ಪ್ರಯಾಣಿಸಿದ್ದೇನೆ ಎಂದು ಹೇಳಿದ್ದಾರೆ. ನಾನು ಇಷ್ಟು ದೂರ ಬಂದಿದ್ದಕ್ಕೆ ಮೋದಿ ಅವರ ಕೈಕುಲುಕುವ ಅವಕಾಶವೂ ಸಿಕ್ಕಿತು ಎಂದು ಎಎನ್ಐ ಜೊತೆಗೆ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಅವರೊಂದಿಗೆ ಇಂದು ಅನೇಕ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಅರ್ಜೆಂಟೀನಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ವಿಜಯ್ ಕುಮಾರ್ ಗುಪ್ತಾ ಅವರು ಪ್ರಧಾನಿ ಮೋದಿಯನ್ನು ನೋಡುವ ತವಕದಲ್ಲಿ 400 ಕಿ.ಮೀ ಪ್ರಯಾಣಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಾನು 400 ಕಿಲೋಮೀಟರ್ ದೂರದಲ್ಲಿರುವ ರೊಸಾರಿಯೋದಿಂದ ಇಲ್ಲಿಗೆ ಬಂದಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕಾರ ಹೇಳಲು ಇಲ್ಲಿಗೆ ಬಂದಿದೆ. ಆದರೆ ನನಗೆ ಅವರ ಕೈಕುಲುಕುವ ಅವಕಾಶ ನನಗೆ ಸಿಕ್ಕಿತು ಎಂದು ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
#WATCH | Buenos Aires, Argentina: Vijay Kumar Gupta, a member of the Indian diaspora, says, “I have come here from Rosario, which is 400 kilometres from here, just to say hello to Prime Minister Narendra Modi. I got the opportunity to shake hands with him…” https://t.co/7yZBOqwXFT pic.twitter.com/jS0uoHPGUn
— ANI (@ANI) July 5, 2025
ಪ್ರಧಾನಿ ನರೇಂದ್ರ ಮೋದಿ ಅವರು ಬ್ಯೂನಸ್ ಐರಿಸ್‌ನ ಹೋಟೆಲ್ ತಲುಪುತ್ತಿದ್ದಂತೆ ಅಲ್ಲಿರುವ ಭಾರತೀಯರು ‘ಜೈಶ್ರೀರಾಮ’, “ಭಾರತ್ ಮಾತ ಕೀ ಜೈ” ಎಂಬ ಘೋಷಣೆಗಳನ್ನು ಹಾಕಿದ್ದಾರೆ. ಇದರ ಜತೆಗೆ ಮೋದಿ ಮೋದಿ ಎಂಬ ಘೋಷಣೆ ಹಾಕಿ ಮೋದಿಯನ್ನು ಸ್ವಾಗತಿಸಿದ್ದಾರೆ. ಇನ್ನು ಈ ಬಗ್ಗೆ ಪ್ರಧಾನಿ ಮೋದಿ ಅವರು ಕೂಡ ಎಕ್ಸ್ನಲ್ಲಿ ಈ ಭೇಟಿಯ ಬಗ್ಗೆ ಹಂಚಿಕೊಂಡಿದ್ದಾರೆ. ಅರ್ಜೆಂಟೀನಾ ಜೊತೆಗಿನ ಸಂಬಂಧಗಳನ್ನು ವೃದ್ಧಿಸುವತ್ತ ಗಮನಹರಿಸುವ ದ್ವಿಪಕ್ಷೀಯ ಭೇಟಿಗಾಗಿ ಬ್ಯೂನಸ್ ಐರಿಸ್‌ಗೆ ಬಂದಿಳಿದಿದ್ದೇನೆ. ಅಧ್ಯಕ್ಷ ಜೇವಿಯರ್ ಮಿಲೀ ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ವಿವರವಾದ ಮಾತುಕತೆ ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಶ್ವಾನಗಳ ಗುಂಪಲ್ಲಿ ಬೆಳೆದು, ನಾಯಿಯಂತೆ ಬೊಗಳುತ್ತಿರುವ ಹುಡುಗ, ಇದೊಂದು ಕರುಣಾಜನಕ ಕಥೆ
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಈ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದು, “ಈ ಭೇಟಿ ನಮ್ಮ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹವನ್ನು ಉಳಿಸಿಕೊಳ್ಳುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜೆಂಟೀ ನಗರವಾದ ಬ್ಯೂನಸ್ ಐರಿಸ್‌ಗೆ ಅಧಿಕೃತ ಭೇಟಿ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. 57 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ಭೇಟಿ ನೀಡುತ್ತಿರುವ ಮೊದಲ ಇದೆ ಮೊದಲು, ಇದು ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ” ಎಂದು ಬರೆದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ