Video: ಹೊರಗಿನವರಿಗೆ ವಿಚಿತ್ರ ಎಂದೆನಿಸುವ ಭಾರತದ ಈ ವಿಚಾರಗಳು ರಷ್ಯಾದ ಮಹಿಳೆಗೆ ಇಷ್ಟವಂತೆ
ಬೆಂಗಳೂರಿನಲ್ಲಿ ವಾಸಿಸುವಂತಹ ರಷ್ಯಾದ ಮಹಿಳೆಯೊಬ್ಬರು ಹೊರಗಿನವರಿಗೆ ಭಾರತದಲ್ಲಿರುವ ಈ ಒಂದಷ್ಟು ಅಭ್ಯಾಸಗಳು ಕ್ರಿಂಜ್ ಅಂದ್ರೆ ಅಸಹ್ಯ, ವಿಚಿತ್ರ ಎಂದಿನಿಸಬಹುದು. ಆದ್ರೆ ಈ ಅಭ್ಯಾಸಗಳು ನನಗಂತೂ ಸಿಕ್ಕಾಪಟ್ಟೆ ಇಷ್ಟ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಗೆಗಿನ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ರಷ್ಯಾದ ಈ ಮಹಿಳೆ ಇಷ್ಟಪಡುವ ಭಾರತದಲ್ಲಿನ ಆ ವಿಚಾರಗಳು ಯಾವುದೆಂಬುದನ್ನು ನೋಡೋಣ ಬನ್ನಿ.

ಪ್ರತಿಯೊಂದು ದೇಶದ ಸಂಸ್ಕೃತಿ (Culture), ಆಚಾರ ವಿಚಾರಗಳು ಭಿನ್ನವಾಗಿರುತ್ತವೆ. ಇವುಗಳಲ್ಲಿ ಕೆಲವೊಂದು ಪದ್ಧತಿಗಳು ಅದ್ಭುತ ಎಂದೆನಿಸಿದರೆ, ಕೆಲವೊಂದು ವಿಚಾರಗಳ ಬಗ್ಗೆ ಕೇಳಿದಾಗ ಅಸಹ್ಯ ಎಂದೆನಿಸುತ್ತದೆ. ಉದಾಹರಣೆಗೆ ಭಾರತೀಯರಾದ ನಮಗೆ ಚೀನಾದವರ ಕೆಲವೊಂದು ವಿಲಕ್ಷಣ ಆಹಾರ ಪದ್ಧತಿಯನ್ನು ಕಂಡು ಅಸಹ್ಯ ಎಂದೆನಿಸುತ್ತದೆ. ಅದೇ ರೀತಿ ಭಾರತೀಯರ ಒಂದಷ್ಟು ಅಭ್ಯಾಸಗಳು, ಪದ್ಧತಿಗಳು ಹೊರಗಿನ ದೇಶದವರಿಗೆ ವಿಚಿತ್ರ ಎಂದೆನಿಸುತ್ತದೆ. ಹೀಗೆ ವಿಚಿತ್ರವೆನಿಸುವ ಭಾರತದ ಕೆಲವೊಂದಿಷ್ಟು ನನಗಂತೂ ಸಿಕ್ಕಾಪಟ್ಟೆ ಇಷ್ಟ ಎಂದು ರಷ್ಯಾದ ಮಹಿಳೆ ಹೇಳಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಲೂಲಿಯಾ ಅಸ್ಲಾಮೋವಾ ಎಂಬ ರಷ್ಯಾದ ಮಹಿಳೆ (Russian woman in Bengaluru) ಇತರರಿಗೆ ಕ್ರಿಂಜ್ ಅಥವಾ ವಿಚಿತ್ರವೆನಿಸುವ ಈ ಭಾರತದ ಈ ಕೆಲವು ಅಭ್ಯಾಸಗಳು ನನಗೆ ಇಷ್ಟ ಎಂದು ಹೇಳಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಭಾರತದ ಈ ವಿಚಾರಗಳು ರಷ್ಯಾದ ಮಹಿಳೆಗೆ ಇಷ್ಟವಂತೆ:
ಕೈಯಿಂದ ಊಟ ಮಾಡುವುದರಿಂದ ಹಿಡಿದು ಮಗ ಸೊಸೆ ಅತ್ತೆ ಮಾವಂದಿರ ಜೊತೆಗೆಯೇ ವಾಸಿಸುವುದು ಭಾರತದಲ್ಲಿನ ಸಾಮಾನ್ಯ ಪದ್ಧತಿಯಾಗಿದೆ. ಹೆಚ್ಚಿನ ವಿದೇಶಿಗರಿಗೆ ಇದೊಂಥರಾ ವಿಚಿತ್ರ ಎಂದೆನಿಸುತ್ತದೆ. ಆದ್ರೆ ಇಲ್ಲೊಬ್ಬರು ಬೆಂಗಳೂರಿನಲ್ಲಿ ವಾಸಿಸುವಂತಹ ರಷ್ಯಾದ ಮಹಿಳೆಗೆ ಭಾರತದ ಈ ಎಲ್ಲಾ ಅಭ್ಯಾಸಗಳು ಇಷ್ಟವಂತೆ. ಈ ಕುರಿತ ವಿಡಿಯೋವನ್ನು ಲೂಲಿಯಾ ಅಸ್ಲಾಮೋವಾ (yulia_bangalore) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದು ಭಾರತದಲ್ಲಿ ಸಾಮಾನ್ಯವಾಗಿದೆ, ಇತರರಿಗೆ ಈ ವಿಷಯಗಳು ವಿಚಿತ್ರ ಎಂದೆನಿಸುತ್ತದೆ, ಆದರೆ ಇವುಗಳು ನನಗಿಷ್ಟ ಎಂದು ಹೇಳಿದ್ದಾರೆ. ಆ ವಿಷಯಗಳು ಯಾವುದೆಂದರೆ,
- ಮಗ ಸೊಸೆ ಅತ್ತೆ ಮಾವನ ಜೊತೆ ವಾಸಿಸುವುದು: ಹೀಗಿದ್ದರೆ ಒಟ್ಟಿಗೆ ಸಮಯ ಕಳೆದಂತೆಯೂ ಆಗುತ್ತದೆ, ಹಿರಿಯರ ಆಶಿರ್ವಾದವೂ ಲಭಿಸುತ್ತದೆ.
- ಕೈಗಳಿಂದ ತಿನ್ನುವುದು: ಸ್ಪೂನ್, ಫೋರ್ಕ್ ಬದಲಿಗೆ ಕೈಗಳಿಂದ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಈ ಅಭ್ಯಾಸವನ್ನು ತುಂಬಾನೇ ಆನಂದಿಸುವೆ.
- ಮನೆ ಕೆಲಸದವರು: ವಿದೇಶದಲ್ಲೆಲ್ಲಾ ಮನೆ ಕೆಲಸದವರು ಸಿಗುವುದೇ ಕಷ್ಟ. ಆದ್ರೆ ಇಲ್ಲಿ ಮನೆ ಕೆಲಸದವರು ಲಭ್ಯವಿದ್ದಾರೆ. ಇದು ತುಂಬಾನೇ ಅನುಕೂಲಕರವಾಗಿದೆ. ಆದ್ರೂ ಕೆಲವೊಂದು ಬಾರಿ ನಮ್ಮಲ್ಲಿ ಸೋಮಾರಿತನವನ್ನು ಉಂಟು ಮಾಡಬಹುದು.
- ಬಹು ಬಾಷೆ: ಭಾರತದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಬಹುಭಾಷೆಗಳಿವೆ. ಇದಂತೂ ಅನೇಕ ಭಾಷೆಗಳನ್ನು ಕಲಿಯಲು ಸಹಾಯಕವಾಗಿದೆ.
- ಮಾತುಕತೆ: ಭಾರತದಲ್ಲಿ ವ್ಯಾಪಾರ, ಸಮಾಲೋಚನೆ ಮತ್ತು ಪರಿಣಾಮಕಾರಿ ಸಂವಹನದ ಬಗ್ಗೆ ನಾನು ಸಾಕಷ್ಟು ಕಲಿತಿದ್ದೇನೆ.
- ಮಸಾಲ ಚಾಯ್: ಹಾಲು ಮತ್ತು ಇತರೆ ಮಸಾಲೆ ಪದಾರ್ಥಗಳೊಂದಿಗೆ ಬೆರೆಸಿದ ಮಸಾಲೆ ಚಾಯ್ ನನಗಂತೂ ಇಷ್ಟ.
- ಪ್ರೀತಿಗೆ ಬೆಲೆ ಕೊಡುವ ರೀತಿ: ಭಾರತವು ತುಂಬಾ ಭಾವನಾತ್ಮಕ ದೇಶವಾಗಿದ್ದು, ಇಲ್ಲಿನ ಜನ ಪ್ರೀತಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ಈ ವಿಷಯ ನನಗೆ ತುಂಬಾ ಅದ್ಭುತ ಎಂದೆನಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚೀನಾದ ಬೀದಿಯಲ್ಲಿ ಕ್ಷೌರ ಮಾಡಿಸಿಕೊಂಡ ಭಾರತೀಯ, ಅನುಭವ ಹೇಗಿತ್ತು ನೋಡಿ
ಜುಲೈ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಲ್ಲಿ ಎಲ್ಲವೂ ಪ್ರೀತಿ ಮತ್ತು ನಗುವಿನಿಂದಲೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಮಾತು ನಿಜʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನೀವು ಭಾರತೀಯ ಸಂಸ್ಕೃತಿಗೆ ಹೊಂದಿಕೊಂಡಿರುವುದು ಕೂಡ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ