AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಕ್ಸ್​ ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ, ಅಮೆರಿಕ ವಿರೋಧಿ ನೀತಿಗಳ ಬೆಂಬಲಿಸುವ ದೇಶಗಳ ಮೇಲೆ ಶೇ.10 ಹೆಚ್ಚುವರಿ ಸುಂಕ

ಬ್ರೆಜಿಲ್​​ನಲ್ಲಿ ನಡೆದ ಬ್ರಿಕ್ಸ್​ ಶೃಂಗಸಭೆ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬ್ರಿಕ್ಸ್​ ದೇಶಗಳಿಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಬ್ರಿಕ್ಸ್​ ದೇಶಗಳು ಅಮೆರಿಕ ವಿರೋಧಿ ನೀತಿಯನ್ನು ಬೆಂಬಲಿಸಿದರೆ, ಆ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.10ರಷ್ಟು ಸುಂಕವನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ. ಬ್ರಿಕ್ಸ್​ ಶೃಂಗಸಭೆಯಲ್ಲಿ ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಖಂಡಿಸಿದ ಬಳಿ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್ ಬ್ರಿಕ್ಸ್​ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬ್ರಿಕ್ಸ್​ ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ, ಅಮೆರಿಕ ವಿರೋಧಿ ನೀತಿಗಳ ಬೆಂಬಲಿಸುವ ದೇಶಗಳ ಮೇಲೆ ಶೇ.10 ಹೆಚ್ಚುವರಿ ಸುಂಕ
ಡೊನಾಲ್ಡ್​ ಟ್ರಂಪ್ Image Credit source: Moneycontrol
ನಯನಾ ರಾಜೀವ್
|

Updated on: Jul 07, 2025 | 9:03 AM

Share

ಬ್ರೆಜಿಲ್, ಜುಲೈ 07: ಬ್ರೆಜಿಲ್​​ನಲ್ಲಿ ನಡೆದ ಬ್ರಿಕ್ಸ್​ ಶೃಂಗಸಭೆ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಬ್ರಿಕ್ಸ್​ ದೇಶಗಳಿಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ. ಬ್ರಿಕ್ಸ್​ ದೇಶಗಳು ಅಮೆರಿಕ ವಿರೋಧಿ ನೀತಿಯನ್ನು ಬೆಂಬಲಿಸಿದರೆ, ಆ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.10ರಷ್ಟು ಸುಂಕವನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಬ್ರಿಕ್ಸ್​ ಶೃಂಗಸಭೆಯಲ್ಲಿ ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಖಂಡಿಸಿದ ಬಳಿ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್ ಬ್ರಿಕ್ಸ್​ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಮೆರಿಕ ವಿರೋಧಿ ನೀತಿಗಳನ್ನು ಬೆಂಬಲಿಸುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ. 10 ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ. ಇದಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಬರೆದಿದ್ದಾರೆ.

ಟ್ರಂಪ್ ಈ ಹೇಳಿಕೆಯಲ್ಲಿ ಅಮೆರಿಕ ವಿರೋಧಿ ನೀತಿಗಳು ಎಂದರೆ ಏನೆಲ್ಲಾ ಅಡಕವಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಡೊನಾಲ್ಡ್​ ಟ್ರಂಪ್ ಹೇಳಿಕೆ ನೀಡುವ ಒಂದು ದಿನದ ಮೊದಲು ಬ್ರಿಕ್ಸ್​(ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ)ನಾಯಕರು ಅಮೆರಿಕದ ಅನಿಯಂತ್ರಿತ ಸುಂಕ ನೀತಿಯನ್ನು ಟೀಕಿಸಿದ್ದರು. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮವನ್ನು ಟೀಕಿಸಲಾಯಿತು.

ಶೃಂಗಸಭೆಯ ಮೊದಲು, ಬ್ರಿಕ್ಸ್ ದೇಶಗಳು ಅಮೆರಿಕದ ಮೇಲೆ ನೇರವಾಗಿ ದಾಳಿ ಮಾಡಲಿಲ್ಲ ಆದರೆ ಹೆಚ್ಚುತ್ತಿರುವ ಸುಂಕವು ಜಾಗತಿಕ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಮತ್ತು ಅದು WTO ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಮಿಲಿಟರಿ ವೆಚ್ಚವನ್ನು ಹೆಚ್ಚಿಸುವ NATO ನಿರ್ಧಾರವನ್ನು ಟೀಕಿಸಿದರು.

ಮತ್ತಷ್ಟು ಓದಿ: ಜುಲೈ 2 ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳಿಗೆ ಭೇಟಿ: 8 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ

ಈ ಬಾರಿಯ ಬ್ರಿಕ್ಸ್ ಶೃಂಗಸಭೆಯನ್ನು ಬ್ರೆಜಿಲ್ ಆಯೋಜಿಸಿದ್ದು ಗಮನಿಸಬೇಕಾದ ಸಂಗತಿ, ಇದರಲ್ಲಿ ಹಳೆಯ 5 ದೇಶಗಳಲ್ಲದೆ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ), ಹೊಸ ಸದಸ್ಯ ರಾಷ್ಟ್ರಗಳಾದ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಇಂಡೋನೇಷ್ಯಾ ಭಾಗವಹಿಸಿದ್ದವು. ಜನವರಿ 1, 2025 ರಂದು ಬ್ರೆಜಿಲ್ ಬ್ರಿಕ್ಸ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.

2009 ರಲ್ಲಿ ನಡೆದ ತನ್ನ ಮೊದಲ ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಯಕರನ್ನು ಒಟ್ಟುಗೂಡಿಸಿತು. ಬಳಿಕ ಇದಕ್ಕೆ ದಕ್ಷಿಣ ಆಫ್ರಿಕಾ ಸೇರಿಕೊಂಡಿತು. ಕಳೆದ ವರ್ಷ ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಡೋನೇಷ್ಯಾವನ್ನು ಸದಸ್ಯರನ್ನಾಗಿ ಸೇರಿಸಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ