AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Power: ವಿಐಪಿಎಲ್ ಖರೀದಿ ಬಳಿಕ ಅದಾನಿ ಪವರ್​​ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 18,150 ಮೆ.ವ್ಯಾ.ಗೆ ಏರಿಕೆ

Adani Power completes the acquisition of 600 MW VIPL: ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ಹಲವು ಘಟಕಗಳನ್ನು ಹೊಂದಿರುವ ಅದಾನಿ ಪವರ್ ಲಿ ಸಂಸ್ಥೆ ಇದೀಗ ವಿಐಪಿಎಲ್ ಖರೀದಿ ಪ್ರಕ್ರಿಯೆ ಮುಗಿಸಿದೆ. ದಿವಾಳಿ ಎದ್ದಿದ್ದ ವಿದರ್ಭ ಇಂಡಸ್ಟ್ರಿಯಲ್ ಪವರ್ ಲಿ ಕಂಪನಿಯ 300 ಮೆ.ವ್ಯಾ. ಸಾಮರ್ಥ್ಯದ ಎರಡು ಘಟಕಗಳನ್ನು 4,000 ಕೋಟಿ ರೂಗೆ ಖರೀದಿಸಿದೆ. ಇದರೊಂದಿಗೆ ಅದಾನಿ ಪವರ್​​ನ ಒಟ್ಟು ಪವರ್ ಜನರೇಶನ್ ಕೆಪಾಸಿಟಿ 18,150 ಮೆ.ವ್ಯಾ.ಗೆ ಏರಿದೆ.

Adani Power: ವಿಐಪಿಎಲ್ ಖರೀದಿ ಬಳಿಕ ಅದಾನಿ ಪವರ್​​ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 18,150 ಮೆ.ವ್ಯಾ.ಗೆ ಏರಿಕೆ
ಅದಾನಿ ಪವರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 08, 2025 | 2:39 PM

Share

ಅಹ್ಮದಾಬಾದ್, ಜುಲೈ 8: ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ನಂಬರ್ ಒನ್ ಖಾಸಗಿ ಕಂಪನಿ ಎನಿಸಿದ ಅದಾನಿ ಪವರ್ (Adani Power Limited) ಇದೀಗ ವಿಐಪಿಎಲ್ ಕಂಪನಿಯ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ದಿವಾಳಿ ಸ್ಥಿತಿಗೆ ಹೋಗಿದ್ದ ವಿದರ್ಭ ಇಂಡಸ್ಟ್ರೀಸ್ ಪವರ್ ಲಿಮಿಟೆಡ್ ಕಂಪನಿಯನ್ನು (VIPL- Vidarbha Industries Power Ltd) ಕಾರ್ಪೊರೇಟ್ ಇನ್ಸಾಲ್ವೆನ್ಸಿ ರೆಸಲ್ಯೂಶನ್ ಪ್ರೋಸಸ್ (ಸಿಐಆರ್​ಪಿ) ಮೂಲಕ ಅದಾನಿ ಪವರ್ 4,000 ಕೋಟಿ ರೂಗೆ ಖರೀದಿ ಮಾಡಿದೆ.

ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯ ಬುಟಿಬೋರಿ (Butibori) ಎಂಬಲ್ಲಿ ವಿಐಎಪಿಎಲ್ 300 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಕಲ್ಲಿದ್ದಲು ಚಾಲಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಎರಡು ಘಟಕಗಳಿಂದ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಈ ಕಂಪನಿಯನ್ನು ಖರೀದಿಸಲು ಅದಾನಿ ಪವರ್ ಸಂಸ್ಥೆ ಮಾಡಿದ ಆಫರ್ ಅನ್ನು ಮುಂಬೈ ವಿಭಾಗದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​​ಟಿ) 2025ರ ಜೂನ್ 18ರಂದು ಅನುಮೋದನೆ ನೀಡಿತ್ತು. ಅದಾನಿ ಪವರ್ ತನ್ನ ರೆಸಲ್ಯೂಶನ್ ಪ್ಲಾನ್ ಅನ್ನು ಜುಲೈ 7ಕ್ಕೆ ಯಶಸ್ವಿಯಾಗಿ ಜಾರಿಗೊಳಿಸಿದೆ.

ಇದನ್ನೂ ಓದಿ: Space Centre: ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಗುಜರಾತ್​​ನಲ್ಲಿ ನಿರ್ಮಾಣ

ಇದನ್ನೂ ಓದಿ
Image
ಗುಜರಾತ್​​ನಲ್ಲಿ ಭಾರತದ ಎರಡನೇ ಅತಿದೊಡ್ಡ ಸ್ಪೇಸ್ ಸೆಂಟರ್
Image
ಹೊಸ ದೇಶ ಕಟ್ಟಹೊರಟ ಭಾರತ ಮೂಲದ ಉದ್ಯಮಿ
Image
ಡೈರಿ ಸೆಕ್ಟರ್ ರಕ್ಷಣೆಗೆ ಸರ್ಕಾರದ ಪ್ರಯತ್ನ ಯಾಕೆ?
Image
ಅನಿಲ್ ಅಂಬಾನಿ ವಿರುದ್ಧ ಎಸ್​​ಬಿಐ ವಂಚನೆ ದೂರು?

ವಿಐಪಿಎಲ್​​ನ ಈ ಎರಡು ಘಟಕಗಳಿಂದ 600 ಮೆಗಾವ್ಯಾಟ್ ಸೇರಿ ಅದಾನಿ ಪವರ್​​ನ ಒಟ್ಟು ವಿದ್ಯುತ್ ಉತ್ಪಾದನಾ 18,150 ಮೆ.ವ್ಯಾ.ಗೆ ಏರಲಿದೆ. ಮುಂದಿನ ಐದು ವರ್ಷದೊಳಗೆ ಈ ಕಂಪನಿಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 30,670 ಮೆ.ವ್ಯಾ.ಗೆ ಏರುವ ಸಾಧ್ಯತೆ ಇದೆ.

ಮಧ್ಯಪ್ರದೇಶದ ಸಿಂಗ್ರೋಲಿ ಮಹಾನ್, ಛತ್ತೀಸ್​ಗಡದ ರಾಯಪುರ್, ರಾಯಗಡ್ ಮತ್ತು ಕೋರ್ಬಾ, ರಾಜಸ್ಥಾನದ ಕವಾಯ್ ಎಂಬ ಐದು ಸ್ಥಳಗಳಲ್ಲಿ 1,600 ಮೆಗಾ ವ್ಯಾಟ್ ಬ್ರೌನ್​​ಫೀಲ್ಡ್ ವಿದ್ಯುತ್ ಸ್ಥಾವರಗಳನ್ನು ಅದಾನಿ ಪವರ್ ಲಿಮಿಟೆಡ್ ನಿರ್ಮಿಸುತ್ತಿದೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ 1,600 ಮೆಗಾ ವ್ಯಾಟ್ ಗ್ರೀನ್​ಫೀಲ್ಡ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸುತ್ತಿದೆ. 1,600 ಮೆಗಾ ವ್ಯಾಟ್ ಸಾಮರ್ಥ್ಯ ಇರುವ ಒಟ್ಟು ಆರು ಘಟಕಗಳನ್ನು ಎಪಿಎಲ್ ನಿರ್ಮಿಸುತ್ತಿದೆ.

ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್​​ಗೆ ‘ಡೈರಿ’ ತಡೆ; ಅಮೆರಿಕದ ಹಾಲು ಭಾರತಕ್ಕೆ ಬಂದರೆ ಹೇಗೆ?

ಕೋರ್ಬಾದಲ್ಲಿ 1,600 ಮೆಗಾವ್ಯಾಟ್ ಗ್ರೀನ್​ಫೀಲ್ಡ್ ಪವರ್ ಪ್ಲಾಂಟ್ ಜೊತೆಗೆ, 1,320 ಮೆಗಾವ್ಯಾಟ್ ವಿದ್ಯುತ್ ಸ್ಥಾವರವೊಂದರ ಪುನಃಸ್ಥಾಪನೆ ಮಾಡಲಾಗುತ್ತಿದೆ. ಕೋರ್ಬಾದ ಈ ಘಟಕವನ್ನು ಇತ್ತೀಚೆಗಷ್ಟೇ ಅದಾನಿ ಪವರ್ ಖರೀದಿ ಮಾಡಿತ್ತು. ಈ ಎಲ್ಲಾ ಯೋಜನೆಗಳು ಪೂರ್ಣಗೊಂಡರೆ ಅದಾನಿ ಪವರ್ ಸಂಸ್ಥೆಯು 2030ರೊಳಗೆ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ 30,670 ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ