AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anti Ageing Food: ವಯಸ್ಸಾಗದಂತೆ ತಡೆಯುವ ಈ ಆಹಾರಗಳು ನಿಮ್ಮ ಡಯಟ್​ನಲ್ಲಿರಲಿ

Anti Ageing Food: ನಿಮ್ಮ ದೇಹದೊಳಗಾಗುವ ಸಮಸ್ಯೆಯನ್ನು ತಿಳಿಸಲು ಇರುವ ಒಂದೇ ಒಂದು ಇಂದ್ರಿಯ ಚರ್ಮ. ನಮಗೆಲ್ಲಾ ಗೊತ್ತೇ ಇರುವ ಹಾಗೆ ವಯಸ್ಸಿದ್ದಾಗ ಇದ್ದ ಸೌಂದರ್ಯ ವಯಸ್ಸಾದ ಮೇಲೆ ಅಥವಾ ವಯಸ್ಸಾಗುತ್ತಿದಂತೆ ಬದಲಾಗುತ್ತದೆ.

Anti Ageing Food: ವಯಸ್ಸಾಗದಂತೆ ತಡೆಯುವ ಈ ಆಹಾರಗಳು ನಿಮ್ಮ ಡಯಟ್​ನಲ್ಲಿರಲಿ
Healthy Diet
Follow us
TV9 Web
| Updated By: ನಯನಾ ರಾಜೀವ್

Updated on: May 24, 2022 | 8:00 AM

ನಿಮ್ಮ ದೇಹದೊಳಗಾಗುವ ಸಮಸ್ಯೆಯನ್ನು ತಿಳಿಸಲು ಇರುವ ಒಂದೇ ಒಂದು ಇಂದ್ರಿಯ ಚರ್ಮ. ನಮಗೆಲ್ಲಾ ಗೊತ್ತೇ ಇರುವ ಹಾಗೆ ವಯಸ್ಸಿದ್ದಾಗ ಇದ್ದ ಸೌಂದರ್ಯ ವಯಸ್ಸಾದ ಮೇಲೆ ಅಥವಾ ವಯಸ್ಸಾಗುತ್ತಿದಂತೆ ಬದಲಾಗುತ್ತದೆ. ಇದು ಪ್ರಕೃತಿಯ ನಿಯಮ, ಇದನ್ನು ಬದಲಾಯಿಸಲು ಖಂಡಿತ ಸಾಧ್ಯವಿಲ್ಲ, ಆದರೆ ಕೆಲವೊಂದು ಮನೆಮದ್ದುಗಳನ್ನು ಅಥವಾ ನೈಸರ್ಗಿಕ ಫೇಶಿಯಲ್ ಅಥವಾ ಬ್ಯೂಟಿ ಉತ್ಪನ್ನಗಳ ಬಳಕೆಯಿಂದ ಬಳಸಿ, ತಕ್ಕಮಟ್ಟಿಗೆ ಆದರೂ ಮರೆಮಾಚಬಹುದು ಅಷ್ಟೇ.

ನಿಮಗೆ ವಯಸ್ಸಾದರೂ, ಕಾಯಿಲೆ ಬಂದರೂ ಮೊದಲು ಗೊತ್ತಾಗುವುದು ಚರ್ಮದಿಂದಲೇ, ಅಳವಡಿಸಿಕೊಂಡರೆ ನಿಮ್ಮ ಚರ್ಮದ ಕಾಂತಿಯು ಹೆಚ್ಚು ವರ್ಷಗಳ ಕಾಲ ಕಳೆಗುಂದದೇ ಇರಬಲ್ಲದು.

ಹಣ್ಣು ಹಾಗೂ ತರಕಾರಿಗಳು ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಹಸಿರೆಲೆ ತರಕಾರಿಗಳು ಹಾಗೂ ಹಣ್ಣುಗಳು, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಿಕೊಂಡರೆ ಅದರಿಂದ ಅಪಾರವಾದ ಸೌಂದರ್ಯ ಪ್ರಯೋಜನಗಳನ್ನು ನಿರೀಕ್ಷಿಸಬಹುದು.

ಯಾಕೆಂದರೆ ಇದರಲ್ಲಿ ಯಥೇಚ್ಛವಾಗಿ ಸಿಗುವ ವಿಟಮಿನ್ ಸಿ ಅಂಶ, ಚರ್ಮದ ಆರೋಗ್ಯ ಮತ್ತು ಕಾಂತಿ ಕಾಪಾಡಲು ನೆರವಾಗುವುದು. ಪ್ರಮುಖವಾಗಿ ಕಿವಿ ಹಣ್ಣು, ಸ್ಟ್ರಾಬೆರಿ, ಚೆರ್ರಿ ಟೊಮೆಟೊ, ಸೌತೆಕಾಯಿ, ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೋಸಂಬಿ ಹಣ್ಣು ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸದಾ ಸಣ್ಣ ವಯಸ್ಸಿನವರಾಗಿ ಇರಲು ಬಯಸುತ್ತಾರೆ. ತಮ್ಮ ಸೌಂದರ್ಯವನ್ನು ಕುಗ್ಗದಂತೆ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಬ್ಯೂಟಿ ಪಾರ್ಲರ್ ಗಳದ್ದೇ ಹಾವಳಿ. ಆದರೆ ಇದಕ್ಕೆಲ್ಲಾ ಅನಾವಶ್ಯಕ ಹಣ ಖರ್ಚು ಮಾಡುವ ಬದಲು, ಕೆಲವೊಂದು ಆಹಾರ ಪದ್ಧತಿಗಳನ್ನು ಸೇವಿಸುವುದರಿಂದ, ವಯಸ್ಸಾಗುವಿಕೆಯ ಪ್ರಕ್ರಿಯೆನ್ನು ನಿಧಾನಗೊಳಿಸಿ ಮುಖದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.

ಬೆರ್ರಿಗಳು: ಬ್ಲೂಬೆರ್ರಿಗಳು, ಸ್ಟ್ರಾಬೆರ್ರಿಗಳು, ಕ್ರಾನ್‍ಬೆರ್ರಿಗಳು ಮತ್ತು ಗೂಸ್‍ಬೆರ್ರಿಗಳಲ್ಲಿ ಫ್ಲಾವೊನೊಯ್ಡ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಸಮೃದ್ಧವಾದ ಅಂಟಿಆಕ್ಸಿಡೆಂಟ್‍ಗಳಾಗಿದ್ದು, ವಯಸ್ಸಾದಂತೆ ಕಾಣುವುದನ್ನು ತಡೆಯುವ ಶಕ್ತಿಶಾಲಿ ಆಯುಧವಾಗಿದೆ. ಇದು ನಿಮ್ಮ ಮನಸ್ಸಿನ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ, ಉರಿಯನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಕೋಶಗಳನ್ನು ಆರೋಗ್ಯಯುತಗೊಳಿಸುತ್ತದೆಯಂತೆ.

ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್: ಈ ಆಲಿವ್ ಎಣ್ಣೆಯಲ್ಲಿ “ಆರೋಗ್ಯಯುತ ಕೊಬ್ಬು” ಅಂದರೆ ಮೊನೊಅನ್‍ಸ್ಯಾಚುರೇಟೆಡ್ ಕೊಬ್ಬುಗಳು ಲಭ್ಯವಿರುತ್ತವೆ. ಬಹುತೇಕ ಉತ್ತರ ಅಮೆರಿಕನ್ನರ ಆಹಾರ ಕ್ರಮದಲ್ಲಿ ಈ ಕೊಬ್ಬು ಇರುವುದಿಲ್ಲ. ಆಲಿವ್ ಆಯಿಲ್ ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಪರಿಶುದ್ಧವಾದ ಮತ್ತು ಆರೋಗ್ಯಯುತವಾದ ಕೊಬ್ಬನ್ನು ಒದಗಿಸಿ ನಮ್ಮ ಕೂದಲು ಮತ್ತು ಚರ್ಮವನ್ನು ಜೀವನಪರ್ಯಂತ ಆರೋಗ್ಯಶಾಲಿಯನ್ನಾಗಿಸುತ್ತದೆ.

ಹಸಿರು ಸೊಪ್ಪುಗಳು: ಕೇಲ್, ಪಾಲಕ್,ಕಾಲರ್ಡ್ ಗ್ರೀನ್ಸ್, ರೊಮೈನ್ ಲೆಟ್ಟೂಸ್ ಮತ್ತು ಸ್ವಿಸ್ ಕಾರ್ಡ್ ಜೊತೆಗೆ ನಮ್ಮ ಕಾಶಿ ಸೊಪ್ಪು ಮುಂತಾದ ಕಡು ಹಸಿರು ಬಣ್ಣದ ಸೊಪ್ಪುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಫೊಲಿಕ್ ಆಮ್ಲ, ಕಬ್ಬಿಣಾಂಶ, ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಮ್ಯಗ್ನೀಶಿಯಂಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ವಿಟಮಿನ್ ಬಿಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ನೆನಪಿನ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ವಿಟಮಿನ್ ಎ ತ್ವಚೆಯ ಕೋಶಗಳನ್ನು ನವೀಕರಿಸುತ್ತದೆ. ಜೊತೆಗೆ ಎಲ್ಲ ಬಗೆಯ ಸೊಪ್ಪುಗಳಲ್ಲಿ ಕಂಡು ಬರುವ ಲುಟೇನ್ ನಮ್ಮ ದೃಷ್ಟಿಯನ್ನು ಕಾಪಾಡುತ್ತದೆ. ಸೊಪ್ಪುಗಳಲ್ಲಿರುವ ಅಂಟಿ ಆಕ್ಸಿಡೆಂಟ್‍ಗಳು ತ್ವಚೆಯ ಮೇಲೆ ಸುಕ್ಕುಗಳು ಉಂಟಾಗದಂತೆ ಕಾಪಾಡುತ್ತವೆ.

ಲೈಕೊಪೀನ್, ಲೂಟೇನ್ ಮತ್ತು ಬೀಟಾ- ಕ್ಯಾರೋಟಿನ್‍ಗಳು ಸೊಪ್ಪುಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತವೆ. ಇವು ನೇರಳಾತೀತ ಕಿರಣಗಳನ್ನು ತಡೆದು, ತ್ವಚೆಯು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ. ಇನ್ನು ಸೊಪ್ಪಿನಲ್ಲಿರುವ ಪೋಷಕಾಂಶಗಳು ಹೃದ್ರೋಗಗಳನ್ನು, ಅಸ್ತಮಾ, ಸಂಧಿವಾತ ಮತ್ತು ಇನ್ನಿತರ ಕ್ಯಾನ್ಸರ್‌ಗಳನ್ನು ಬರದಂತೆ ತಡೆಯುತ್ತವೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯು ತಿನ್ನಲು ಹೇಗೆ ರುಚಿಕರವೊ, ಹಾಗೆಯೇ ಆರೋಗ್ಯಕ್ಕು ಕೂಡ. ಬೆಳ್ಳುಳ್ಳಿಯು ಇವುಗಳು ನಿಮ್ಮ ಕರುಳಿನ ಸ್ವಾಭಾವಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಇದರ ಜೊತೆಗೆ ಇದು ಕರುಳಿನಲ್ಲಿರುವ ವಿಷಕಾರಕಗಳನ್ನು ಮತ್ತ್ ಕಾರ್ಸಿನೊಜೆನ್‍ಗಳನ್ನು ತೊಲಗಿಸುತ್ತದೆ. ಕೋಶಗಳು ಹಾಳಾಗದಂತೆ ಕಾಪಾಡಲು ಬೆಳ್ಳುಳ್ಳಿ ನೆರವಾಗುತ್ತದೆ, ಅಲ್ಲದೆ ಇದು ಹೃದ್ರೋಗಗಳನ್ನು ಸಹ ತಡೆಯುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!