Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್
ಪೇಸ್ಟ್ರಿ ಕಲಾವಿದ ಅಮೌರಿ ಗುಯಿಚನ್ ಅವರು ಚಾಕಲೇಟ್ ಮೂಲಕ ಸಿದ್ಧಪಡಿಸಿದ 8.3 ಅಡಿ ಎತ್ತರದ ಜಿರಾಫೆಯ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಚಾಕೊಲೇಟ್ (Chocolate)ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆ (Giraffe)ಯ ವಿಡಿಯೋ (Video)ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಈ ಚಾಕಲೇಟ್ ಜಿರಾಫೆಯನ್ನ ಪೇಸ್ಟ್ರಿ ಕಲಾವಿದ ಅಮೌರಿ ಗುಯಿಚನ್ ತಯಾರಿಸಿದ್ದು, ಜೂಮಾರ್ಫಿಕ್ ಪಾಕಶಾಲೆಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, 80 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ ಉತ್ತಮ ಮೆಚ್ಚುಗೆಗಳು ವ್ಯಕ್ತವಾಗಿವೆ.
ವಿಡಿಯೋವನ್ನು ಗಮನಿಸಿದಾಗ ಒಂದು ಅಂಡಾಕಾರದ ಟಬ್ನಲ್ಲಿ ಕರಗಿದ ಚಾಕಲೇಟ್ ಅನ್ನು ಹಾಕುತ್ತಾರೆ. ಇದು ಗಟ್ಟಿಯಾದ ನಂತರ ಹೊರತೆಗೆದು ಕಟ್ ಮಾಡುವುದನ್ನು ಕಾಣಬಹುದು. ನಂತರ ಹೊಟ್ಟೆಯ ಭಾಗ, ಕಾಲುಗಳು, ಕುತ್ತಿಗೆ, ತಲೆ, ಬಾಲ ಮಾಡುವುದನ್ನು ಕಾಣಬಹುದು. ಜಿರಾಫೆಯ ದೇಹದ ರಚನೆ ಆದ ನಂತರ ಅದಕ್ಕೆ ಬೇರೆ ಫ್ಲೇವರ್ನ ಬಣ್ಣ ಕೊಡಲಾಗುತ್ತದೆ, ನಂತರ ಮತ್ತೆ ಕಂದು ಫ್ಲೇವರ್ ಬಣ್ಣ ನೀಡಲಾಗುತ್ತದೆ ಮತ್ತು ಗೆರೆಗಳನ್ನು ಎಳೆಯಲಾಗುತ್ತದೆ.
ಇದನ್ನೂ ಓದಿ: Trending: ಪೈನ್ ಮರವನ್ನು ಹಿಂದಿಕ್ಕಿದ ‘ಗ್ರೇಟ್ ಅಜ್ಜ’: ಈ ಮರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ
View this post on Instagram
ಅಮೌರಿ ಗುಯಿಚನ್ ಚಾಕಲೇಟ್ ಜಿರಾಫೆಯ ವಿಡಿಯೋವನ್ನು ಶೇರ್ ಮಾಡುವಾಗ, ”ಎತ್ತರ 8.3 ಅಡಿ ಎತ್ತರ, 160 Ibs ತೂಕದೊಂದಿಗೆ ಅತಿದೊಡ್ಡ ಚಾಕಲೇಟ್ ಸೃಷ್ಟಿಯಾಗಿದೆ. ಇದನ್ನು ತಯಾರಿಸಲು ನನಗೆ 7 ದಿನಗಳು ತೆಗೆದುಕೊಂಡಿದೆ. ಶೇ.100ರಷ್ಟು ಚಾಕಲೇಟ್ ಬಳಸಿ ರಚಿಸಲಾಗಿದೆ” ಎಂದಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Mon, 30 May 22