Trending: ಪೈನ್ ಮರವನ್ನು ಹಿಂದಿಕ್ಕಿದ ‘ಗ್ರೇಟ್ ಅಜ್ಜ’: ಈ ಮರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ

ದಕ್ಷಿಣ ಚಿಲಿಯಲ್ಲಿರುವ ಸೊಂಪಾದ ಅರಣ್ಯ ಪ್ರದೇಶದಲ್ಲಿ ಇರುವ ಗ್ರೇಟ್ ಅಜ್ಜ ಎಂಬ ಮರದ ವಯಸ್ಸು ಪತ್ತೆಹಚ್ಚಲಾಗಿದ್ದು, 5ಸಾವಿರ ವರ್ಷಗಳಿಗಿಂತಲೂ ಹಳೆಯ ಮರ ಇದಾಗಿದೆ ಎಂದು ಅಧ್ಯನದಿಂದ ತಿಳಿದುಬಂದಿದೆ. ಆ ಮೂಲಕ ಪೈನ್ ಮರದ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಹಳೇಯ ಮರ ಎಂಬ ಹಗ್ಗಳಿಕೆ ಪಡೆದುಕೊಂಡಿದೆ.

Trending: ಪೈನ್ ಮರವನ್ನು ಹಿಂದಿಕ್ಕಿದ 'ಗ್ರೇಟ್ ಅಜ್ಜ': ಈ ಮರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ
ವಿಶ್ವದ ಹಳೇಯ ಮರ 'ಗ್ರೇಟ್ ಅಜ್ಜ'Image Credit source: Twitter
Follow us
TV9 Web
| Updated By: Rakesh Nayak Manchi

Updated on:May 28, 2022 | 12:05 PM

ದಕ್ಷಿಣ ಚಿಲಿಯಲ್ಲಿರುವ ಸೊಂಪಾದ ಅರಣ್ಯ ಪ್ರದೇಶದಲ್ಲಿ ‘ಗ್ರೇಟ್ ಅಜ್ಜ’ (Great Grandfather) ಎಂದು ಕರೆಯಲ್ಪಡುವ ಈ ಪುರಾತನ ಮರ (Tree) ವಿಶ್ವದ ಅಂತ್ಯಂತ ಹಳೇಯ ಮರ (Old Tree) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಲು ದೊಡ್ಡ ಗಾತ್ರದ ಕಾಂಡವನ್ನು ಹೊಂದಿರುವ ಗ್ರೇಟ್ ಅಜ್ಜ ಮರದ ನಿಖರವಾದ ವಯಸ್ಸನ್ನು ಯಾವ ವಿಜ್ಞಾನಿಗಳಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೆ ಹೊಸ ಅಧ್ಯಯನದ ಪ್ರಕಾರ, 5,000 ವರ್ಷಗಳಿಗಿಂತ ಹೆಚ್ಚು ಹಳೆಯ ಮರವಾಗಿದೆ. ಹಾಗಿದ್ದರೆ ಈ ಮರದ ಇನ್ನಷ್ಟು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: Trending: 89 ರೂ. ಚಾಕಲೇಟ್​ನಲ್ಲಿ ಹುಳಗಳು! 50 ಲಕ್ಷ ರೂ. ಪರಿಹಾರ ಕೋರಿದ ಗ್ರಾಹಕ, ಕೋರ್ಟ್ ಹೇಳಿದ್ದೇನು?

ಸಾಮಾನ್ಯ ಮರದ ಕಾಂಡಗಳು 1 ಮೀಟರ್​ನಷ್ಟು ಇರುತ್ತದೆ. ಆದರೆ, 5ಸಾವಿರ ವರ್ಷಗಳ ಹಳೇಯ ಮರ ಎಂದು ಕರೆಯಲ್ಪಡುವ ಗ್ರೇಟ್ ಅಜ್ಜ, ಮರದ ಕಾಂಡದ ಗಾತ್ರವು ಸುಮಾರು 4 ಮೀಟರ್ ಅಗಲವಿದೆ. ಅಧ್ಯಯನದ ನೇತೃತ್ವ ವಹಿಸಿದ್ದ ವಿಜ್ಞಾನಿ ಜೊನಾಥನ್ ಬಾರಿಚೆವಿಚ್ ಹೇಳುವಂತೆ, ಸಂಗ್ರಹಿಸಿದ ಮಾದರಿಗಳ ಪ್ರಕಾರ ಮರವು 5,484 ವರ್ಷಗಳಷ್ಟು ಹಳೆಯದು ಎಂದು ತೋರಿಸುತ್ತದೆ. ಮರವು 5,000 ವರ್ಷಗಳಿಗಿಂತ ಹೆಚ್ಚು ಹಳೆಯದು ಎಂದು 80 ಪ್ರತಿಶತದಷ್ಟು ಸಾಧ್ಯತೆಯಿದೆ ಎಂದು ಅಧ್ಯಯನವು ತಿಳಿಸುತ್ತದೆ.

ಪೈನ್ ಮರವನ್ನು ಹಿಂದಿಕ್ಕಿದ ‘ಗ್ರೇಟ್ ಅಜ್ಜ’

ಗ್ರೇಟ್ ಅಜ್ಜ ಎಂದು ಕರೆಯಲ್ಪಡುವ ಮರದ ವಯಸ್ಸು ಪತ್ತೆಹಚ್ಚಿದ ನಂತರ, ಅದು ಅಮೆರಿಕದ ಕ್ಯಾಲಿಫೋರ್ನಿಯಾದ ಕಾಡುಗಳಲ್ಲಿ ಇರುವ ಪೈನ್ ಮರ (Pine Tree)ದ ವರ್ಷವನ್ನು ಹಿಂದಿಕ್ಕಿದಂತಾಗಿದೆ. ಪೈನ್ ಮರವು 4,853 ವರ್ಷಗಳಷ್ಟು ಹಳೆಯದಾಗಿದೆ. ಗ್ರೇಟ್ ಅಜ್ಜ ಮರವನ್ನು  ಹಳೆಯ ಮರಗಳಿಗೆ ಹೋಲಿಸಿದರೆ, ಅದು ಗ್ರಹದ ಅತ್ಯಂತ ಹಳೆಯ ಜೀವಂತ ಮರಗಳಲ್ಲಿ ಒಂದಾಗಿದೆ ಎಂದು ವಿಜ್ಞಾನಿ ಜೊನಾಥನ್ ಬಾರಿಚೆವಿಚ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Trending: ವಿದೇಶಿ ಬಾಲಕಿಯ ಪಿಟಿಲಿನಲ್ಲಿ ಮೊಳಗಿತು ಪುಷ್ಪಾ ಸಿನಿಮಾದ ‘ಊ ಅಂಟವಾ ಮಾಮ ಉಹು ಅಂಟವಾ ಮಾಮ’ ಹಾಡು

ಅಲೆರ್ಸ್ ಕಾಸ್ಟೆರೊ ರಾಷ್ಟ್ರೀಯ ಉದ್ಯಾನವನದಲ್ಲಿನ ಮರಗಳ ಖ್ಯಾತಿಯ ಬಗ್ಗೆ ಬಾರಿಚಿವಿಚ್ ಕಾಳಜಿ ವಹಿಸಿದ್ದಾರೆ. ಅಲ್ಲದೆ ಇದು ಮಾನವ ನಾಗರಿಕತೆಯ ಹಲವು ಯುಗಗಳವರೆಗೆ ಉಳಿದುಕೊಂಡಿದೆ. ಮರವೊಂದು 5,000 ವರ್ಷ ಬದುಕುವುದು ಮತ್ತು ಹವಾಮಾನ ಬಿಕ್ಕಟ್ಟಿನ ದೃಷ್ಟಿಕೋನದಲ್ಲಿ ಇಡುವುದರ ಬಗ್ಗೆ ಜನರು ಒಂದು ಬಾರಿ ಯೋಚಿಸಬಹುದು ಎಂದು ಬರಿಚಿವಿಚ್ ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Sat, 28 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ