Trending: 89 ರೂ. ಚಾಕಲೇಟ್ನಲ್ಲಿ ಹುಳಗಳು! 50 ಲಕ್ಷ ರೂ. ಪರಿಹಾರ ಕೋರಿದ ಗ್ರಾಹಕ, ಕೋರ್ಟ್ ಹೇಳಿದ್ದೇನು?
ಅಂಗಡಿಯೊಂದರಿಂದ ಖರೀದಿಸಿದ 89 ರೂಪಾಯಿ ಮೌಲ್ಯದ ಚಾಕೊಲೇಟ್‌ನಲ್ಲಿ ಹುಳುಗಳು ಪತ್ತೆಯಾಗಿದ್ದ ಪ್ರಕರಣ ಸಂಬಂಧ 2016ರಲ್ಲಿ
ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ಥಳೀಯ ಅಂಗಡಿಯೊಂದರಿಂದ ಖರೀದಿಸಿದ 89 ರೂಪಾಯಿ ಮೌಲ್ಯದ ಚಾಕೊಲೇಟ್ (Chocolate) ಬಾರ್‌ನಲ್ಲಿ ಹುಳುಗಳು (worms) ಕಂಡುಬಂದಿವೆ. ಇದರಿಂದ ಅಸಮಧಾನಗೊಂಡ ಗ್ರಾಹಕ, 20 ಲಕ್ಷದಿಂದ 50 ಲಕ್ಷ ರೂಪಾಯಿ ಪರಿಹಾರ ಕೋರಿ ನ್ಯಾಯಾಲಯ (Court)ಕ್ಕೆ ಅರ್ಜಿ ಹಾಕಿದ್ದಾನೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ನಿವಾಸಿ ಮುಖೇಶ್ ಕುಮಾರ್ ಕೆಡಿಯಾ ಅವರು 2016ರ ಅಕ್ಟೋಬರ್ನಲ್ಲಿ ಎಂಕೆ ರಿಟೇಲ್ ಸೂಪರ್ ಮಾರ್ಕೆಟ್‌ನಲ್ಲಿ 89 ರೂ.ಗೆ ಎರಡು ಕ್ಯಾಡ್‌ಬರಿಸ್ ಮತ್ತು ನಟ್ ಚಾಕೊಲೇಟ್ ಖರೀದಿಸಿದ್ದರು. ಆದರೆ, ಕ್ಯಾಡ್ಬರೀಸ್ ಚಾಕಲೇಟ್ ಒಂದರಲ್ಲಿ ಹುಳುಗಳು ಕಂಡುಬಂದಿವೆ. ಈ ಬಗ್ಗೆ ಕಂಪನಿಯ ಗ್ರಾಹಕ ಸಹಾಯವಾಣಿಗೆ ದೂರು ನೀಡಿದರು. ಇದಕ್ಕೆ ಆ ಚಾಕಲೇಟ್ ಅನ್ನು ಹಸ್ತಾಂತರಿಸುವಂತೆ ಕೋರಿದ್ದರು. ಇದನ್ನು ನಿರಾಕರಿಸಿದ ಮುಖೇಶ್, ಪುರಾವೆಗಳಿಗಾಗಿ ಫೋಟೋಗಳನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆಯೂ ಒಂದು ವೃತ್ತಿ, ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಆದರೆ, ಕಂಪನಿಯು ದೂರನ್ನು ಹೆಚ್ಚು ತಲೆಕೆಡಿಸಿಕೊಳ್ಳದ ಹಿನ್ನೆಲೆ 2016ರ ಅ.26ರಂದು ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದರು. ಬೆಂಗಳೂರಿನ ಕನ್ಸೂಮರ್ ಕೋರ್ಟ್ನಲ್ಲಿ ಕಂಪನಿ ಹಾಗೂ ಅಂಗಡಿ ವಿರುದ್ಧ ದೂರು ದಾಖಲಿಸಿದ್ದರು.
ಅದರಂತೆ, ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ ಮೊಂಡೆಲೆಜ್ ಪರ ವಕೀಲರು, ಅರ್ಜಿದಾರರು 89 ರೂ. ಮೌಲ್ಯದ ಚಾಕೊಲೇಟ್‌ಗೆ 20 ಲಕ್ಷದಿಂದ 50 ಲಕ್ಷ ರೂ.ಗೆ ಬೇಡಿಕೆಯಿಡುವ ಮೂಲಕ ಕೇವಲ ವಿತ್ತೀಯ ಲಾಭಕ್ಕಾಗಿ ನೋಡುತ್ತಿದ್ದಾರೆ ಎಂದು ಕೋರ್ಟ್ನಲ್ಲಿ ವಾದಿಸಿದ್ದಾರೆ. ನ್ಯಾಯಾಲಯವು ಚಾಕೊಲೇಟ್‌ನಲ್ಲಿ ಹುಳುಗಳಿವೆ ಎಂದು ಒಪ್ಪಿಕೊಂಡಿದೆ. ಆದರೆ ಅವರು ಕೋರುತ್ತಿರುವ ಪರಿಹಾರವು ಅವರ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದೆ.
ಇದನ್ನೂ ಓದಿ: KPSC ಸೂಚಿಸಿದ ಆಸ್ಪತ್ರೆಯಿಂದ ತಪ್ಪು ಫಿಟ್ನೆಸ್ ಸರ್ಟಿಫಿಕೇಟ್, ಕೈತಪ್ಪಿದ ಹುದ್ದೆ! ಆದರೆ ಹೈಕೋರ್ಟ್ ನೀಡಿತು ಮಹತ್ವದ ಆದೇಶ
1986 ರ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ 2016 ರಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದು 5 ಲಕ್ಷ ರೂ.ವರೆಗಿನ ಅರ್ಜಿಗಳ ವಿಚಾರಣೆಯನ್ನು ಮಾತ್ರ ಅನುಮತಿಸುತ್ತದೆ ಮತ್ತು ಪರಿಷ್ಕೃತ CP ಕಾಯ್ದೆ 2019 ಅಲ್ಲ. ರಾಜ್ಯ ಗ್ರಾಹಕ ನ್ಯಾಯಾಲಯ 1 ಕೋಟಿ ರೂ.ವರೆಗಿನ ಪ್ರಕರಣಗಳನ್ನು ವಿಚಾರಣೆ ಮಾಡಲು ಅನುಮತಿಸುತ್ತದೆ. ಹೀಗಾಗಿ ರಾಜ್ಯ ಗ್ರಾಹಕರ ಕೋರ್ಟ್ ಸಂಪರ್ಕಿಸುವಂತೆ ಮುಖೇಶ್ ಅವರಿಗೆ ಕೋರ್ಟ್ ಸೂಚಿಸಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Fri, 27 May 22