Trending: ವಿದೇಶಿ ಬಾಲಕಿಯ ಪಿಟಿಲಿನಲ್ಲಿ ಮೊಳಗಿತು ಪುಷ್ಪಾ ಸಿನಿಮಾದ ‘ಊ ಅಂಟವಾ ಮಾಮ ಉಹು ಅಂಟವಾ ಮಾಮ’ ಹಾಡು

ತೆಲುಗು ಬ್ಲಾಕ್‌ಬಸ್ಟರ್ ಪುಷ್ಪಾ ಸಿನಿಮಾದ ಹಾಡನ್ನು 13 ವರ್ಷದ ಬಾಲಕಿಯೊಬ್ಬಳು ಪಿಟೀಲು ಮೂಲಕ ನುಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಯೂಟ್ಯೂಬ್​ನಲ್ಲಿ ಭಾರಿ ವೀಕ್ಷಣೆ ಪಡೆದಿದೆ.

Trending: ವಿದೇಶಿ ಬಾಲಕಿಯ ಪಿಟಿಲಿನಲ್ಲಿ ಮೊಳಗಿತು ಪುಷ್ಪಾ ಸಿನಿಮಾದ 'ಊ ಅಂಟವಾ ಮಾಮ ಉಹು ಅಂಟವಾ ಮಾಮ' ಹಾಡು
ಕೊರೋಲಿನ ಪ್ರೊಟ್ಸೆಂಕೊ
Follow us
TV9 Web
| Updated By: Rakesh Nayak Manchi

Updated on: May 27, 2022 | 3:44 PM

ಅಲ್ಲು ಅರ್ಜುನ್ (Allu arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಒಳಗೊಂಡ ತೆಲುಗು ಬ್ಲಾಕ್‌ಬಸ್ಟರ್ ಪುಷ್ಪಾ (Pushpa) ಸಿನಿಮಾದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಭಾರತದಲ್ಲಿ ಅಲ್ಲದೆ ವಿದೇಶಗಳಲ್ಲಿ ಈಗಲೂ ಸದ್ದು ಮಾಡುತ್ತಿದೆ. ಯುಎಸ್‌ನ 13 ವರ್ಷದ ಪಿಟೀಲು ವಾದಕಿ ಕರೋಲಿನಾ ಪ್ರೊಟ್ಸೆಂಕೊ ಅವರು ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಬೀದಿಯಲ್ಲಿ ಪುಷ್ಪಾ ಚಿತ್ರದ ಎರಡು ಹಾಡುಗಳನ್ನು ನುಡಿಸಿದ್ದಾರೆ. ಉಕ್ರೇನಿಯನ್ ಹುಡುಗಿಯ ಪಿಟೀಲು ಕವರ್ ‘ಊ ಆಂಟವಾ ಮಾಮ ಊ ಊ ಅಂಟವಾ ಮಾಮ’ ಹಾಡನ್ನು ಸುಂದರವಾಗಿ ಪ್ರದರ್ಶಿಸಿದ್ದಾರೆ. ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.

ಇದನ್ನೂ ಓದಿ: ನೋರಾ ಫತೇಹಿ ಡಾನ್ಸ್​​ ವಿಡಿಯೋ ವೈರಲ್​

ಕೆಲವು ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಊ ಆಂಟವಾ ಮಾಮ ಊ ಊ ಅಂಟವಾ ಮಾ ಹಾಡಿನ ಟ್ಯೂನ್ ಅನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಈಗಾಗಲೇ ಯೂಟ್ಯೂಬ್‌ನಲ್ಲಿ 741k ವೀಕ್ಷಣೆಗಳನ್ನು ಸ್ವೀಕರಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಕರೋಲಿನಾ ಅವರು ಉ ಅಂಟವಾ ಟ್ಯೂನ್​ ಅನ್ನು ಪಿಲೀಲು ಮೂಲಕ ನುಡಿಸುತ್ತಾ ನಲಿಯುತ್ತಿರುವುದನ್ನು ಸಾರ್ವಜನಿಕರು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಭಾರತೀಯ ಸಿನಿ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಕರೋಲಿನಾ ಅವರ ವೀಡಿಯೊಗಳು ಸಾಮಾನ್ಯವಾಗಿ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ. ಏಕೆಂದರೆ ಅವರು 7 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಖ್ಯಾತ ಯೂಟ್ಯೂಬರ್ ಆಗಿದ್ದಾರೆ.

ಇದನ್ನೂ ಓದಿ: Trending: ಅರುಣಾಚಲ ಪ್ರದೇಶ ಮತ್ತು ಲಡಾಖ್​ಗೆ ಐಎಎಸ್ ದಂಪತಿ ವರ್ಗಾವಣೆ, ಶ್ವಾನದ ಪಯಣ ಯಾವ ಕಡೆ? ಇಲ್ಲಿದೆ ಟ್ರೋಲ್ಸ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ