AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending: ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ‘ಹೆಲ್ಮೆಟ್’ ಟ್ವೀಟ್ ವೈರಲ್

ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಮುಂಬೈ ಪೊಲೀಸರು ಹೆಲ್ಮೆಟ್ ಕಡ್ಡಾಯಗೊಳಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕ್ರಿಕೆಟ್​ಗೆ ಸಾಮ್ಯತೆ ಮಾಡುತ್ತಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟ್ವೀಟ್ ಮಾಡಿ ಐಸಿಸಿಯ ಕಾಲೆಳೆದಿದ್ದಾರೆ.

Trending: ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 'ಹೆಲ್ಮೆಟ್' ಟ್ವೀಟ್ ವೈರಲ್
ಸಚಿನ್ ತೆಂಡೂಲ್ಕರ್
TV9 Web
| Updated By: Rakesh Nayak Manchi|

Updated on:May 27, 2022 | 12:39 PM

Share

ಸರುಕ್ಷಿತ ವಾಹನ ಸಂಚಾರಕ್ಕೆ ಒತ್ತುಕೊಟ್ಟಿರುವ ಮುಂಬೈ ಸಂಚಾರ ಪೊಲೀಸರು (Mumbai Traffic Police), ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯ ಹೆಲ್ಮೆಟ್ (Helmet) ನಿಯಮ (Rules) ಜಾರಿ ಮಾಡಿದ್ದಾರೆ. ಅದರಂತೆ, ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಈ ನಿಯಮ ಜೂ.9ರಿಂದ ಜಾರಿಗೆ ಬರಲಿದೆ. ನಿಯಮ ಉಲ್ಲಂಘಿಸಿದರೆ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು, 500 ರೂ. ದಂಡ ಹಾಗೂ 3 ತಿಂಗಳು ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ. ಈ ಬಗ್ಗೆ ಕ್ರಿಕೆಟ್ ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ (Sachin Tendulkar) ಹಾಸ್ಯದ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: IPL 2022: ಸತತ 2 ವರ್ಷಗಳಿಂದ ಬೆಂಚ್ ಕಾಯುತ್ತಿರುವ ಮಗ ಅರ್ಜುನ್​ಗೆ ಸಚಿನ್ ನೀಡಿದ ಸಲಹೆ ಏನು ಗೊತ್ತಾ?

ಮುಂಬೈ ಪೊಲೀಸರ ಈ ನಿರ್ಧಾರವನ್ನು ಹಲವಾರು ಮಂದಿ ಸ್ವಾಗತಿಸಿದರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ರಸ್ತೆಗಳು ಮತ್ತು ಕ್ರಿಕೆಟ್ ಮೈದಾನದ ನಡುವೆ ಹೋಲಿಕೆ ಮಾಡುತ್ತಾ ಹಾಸ್ಯದ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ” ಸ್ಟ್ರೈಕರ್ (rider) ಮತ್ತು ನಾನ್ ಸ್ಟ್ರೈಕರ್ (pillion) ಗೆ ಹೆಲ್ಮೆಟ್ ಕಡ್ಡಾಯ ಮಾಡಿದೆ. ಈಗ ನಿಮ್ಮ ಸರದಿ, ಹೆಲ್ಮೆಟ್ ಜೀವ ಉಳಿಸುತ್ತದೆ. ಮೈದಾನದಲ್ಲಿ, ಮತ್ತು ಅದರ ಹೊರಗೂ!” ಎಂದು ಬರೆದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯನ್ನು ಹಾಗೂ ಮುಂಬೈ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಮುಂಬೈ ಟ್ರಾಫಿಕ್ ಪೋಲೀಸರ ಟ್ವಿಟ್ಟರ್ ಹ್ಯಾಂಡಲ್‌, ಸಚಿನ್ ತೆಂಡೂಲ್ಕರ್ ಅವರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ರಸ್ತೆ ಮಧ್ಯೆ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವ ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸಲು ಸೂಚಿಸುವ ವಿಡಿಯೋವನ್ನು ಹಂಚಿಕೊಂಡಿದೆ.

ನಗರದಲ್ಲಿ ಹೆಚ್ಚಿನ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದಿಲ್ಲ ಹೀಗಾಗಿ ಹೆಲ್ಮೆಟ್ ಕಡ್ಡಾಯ ನಿರ್ದೇಶನ ನೀಡಲಾಗಿದೆ. ಸದ್ಯ ಸಂಚಾರ ಪೊಲೀಸರು ಹೆಲ್ಮೆಟ್ ರಹಿತ ಸವಾರರಿಗೆ 500 ರೂ. ದಂಡ ವಿಧಿಸುತ್ತಾರೆ ಅಥವಾ ಅವರ ಪರವಾನಗಿಯನ್ನು ಅಮಾನತುಗೊಳಿಸುತ್ತಾರೆ. 15 ದಿನಗಳ ನಂತರ ಹೆಲ್ಮೆಟ್ ಇಲ್ಲದ ಹಿಂಬದಿ ಸವಾರರಿಗೆ ಅದೇ ದಂಡವನ್ನು ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: IPL 2022: ಪ್ಲೇ ಆಫ್​ನಲ್ಲಿ ಸೋತರೂ, ಐಪಿಎಲ್​ನಲ್ಲಿ ಯಾರೂ ಮಾಡದ ವಿಶಿಷ್ಟ ದಾಖಲೆ ಬರೆದ ಕೆ ಎಲ್ ರಾಹುಲ್..!

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Fri, 27 May 22