IPL 2022: ಪ್ಲೇ ಆಫ್​ನಲ್ಲಿ ಸೋತರೂ, ಐಪಿಎಲ್​ನಲ್ಲಿ ಯಾರೂ ಮಾಡದ ವಿಶಿಷ್ಟ ದಾಖಲೆ ಬರೆದ ಕೆ ಎಲ್ ರಾಹುಲ್..!

KL Rahul: ರಾಹುಲ್ ನಾಲ್ಕು IPL ಸೀಸನ್​ಗಳಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ತಮ್ಮ ಕೊರಳೊಡ್ಡಿದ್ದಾರೆ. ಈ ಸೀಸನ್​ನಲ್ಲಿ ರಾಹುಲ್ ಬರೊಬ್ಬರಿ 616 ರನ್ ಗಳಿಸಿದ್ದರು.

IPL 2022: ಪ್ಲೇ ಆಫ್​ನಲ್ಲಿ ಸೋತರೂ, ಐಪಿಎಲ್​ನಲ್ಲಿ ಯಾರೂ ಮಾಡದ ವಿಶಿಷ್ಟ ದಾಖಲೆ ಬರೆದ ಕೆ ಎಲ್ ರಾಹುಲ್..!
ಕೆಎಲ್ ರಾಹುಲ್
Follow us
TV9 Web
| Updated By: ಪೃಥ್ವಿಶಂಕರ

Updated on: May 26, 2022 | 9:49 PM

ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ KL ರಾಹುಲ್ (KL Rahul) IPL 2022 ರಲ್ಲಿ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ. ರಾಹುಲ್ ನಾಲ್ಕು IPL ಸೀಸನ್​ಗಳಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ತಮ್ಮ ಕೊರಳೊಡ್ಡಿದ್ದಾರೆ. ಈ ಸೀಸನ್​ನಲ್ಲಿ ರಾಹುಲ್ ಬರೊಬ್ಬರಿ 616 ರನ್ ಗಳಿಸಿದ್ದರು. ಜೊತೆಗೆ ಆರೆಂಜ್ ಕ್ಯಾಪ್​ ರೇಸ್​ನಲ್ಲಿ 2ನೇ ಸ್ಥಾನ ಪಡೆದರು. ಇವರಿಗೂ ಮೊದಲು ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ಮೂರು ಸೀಸನ್‌ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದ ಸಾಧನೆ ಮಾಡಿದ್ದರು. ಈಡನ್ ಗಾರ್ಡನ್​ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೆಎಲ್ ರಾಹುಲ್ 79 ರನ್ ಗಳಿಸಿದ್ದರು. ಆದರೆ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 14 ರನ್‌ಗಳಿಂದ ಸೋತಿತ್ತು. ಈ ಸೋಲಿನೊಂದಿಗೆ ಲಖನೌ ಟೂರ್ನಿಯಿಂದ ನಿರ್ಗಮಿಸಿತು.

ಪಂದ್ಯದ ವಿವರ ಹೀಗಿದೆ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿಯಲ್ಲಿ ಒನ್ ಮ್ಯಾನ್ ಶೋ ಕಾಣಿಸಿತು. ಮಧ್ಯಪ್ರದೇಶದ ಬಲಗೈ ಬ್ಯಾಟ್ಸ್‌ಮನ್ ರಜತ್ ತಮ್ಮ T20 ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿ ಬೆಂಗಳೂರನ್ನು ದೊಡ್ಡ ಸ್ಕೋರ್‌ಗೆ ಕೊಂಡೊಯ್ದರು. ಪಾಟಿದಾರ್ ಅವರ 112 ರನ್‌ಗಳ ಅಜೇಯ ಇನ್ನಿಂಗ್ಸ್‌ನಿಂದ ಬೆಂಗಳೂರು ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಲವನೀತ್ ಸಿಸೋಡಿಯಾ ಅವರ ಗಾಯದಿಂದಾಗಿ ಆರ್‌ಸಿಬಿಗೆ ಸೇರ್ಪಡೆಗೊಂಡ ಪಾಟಿದಾರ್ ಈ ಋತುವಿನಲ್ಲಿ ಎರಡನೇ ಬಾರಿಗೆ ಬೆಂಗಳೂರು ಪರ ಪ್ರಬಲ ಇನ್ನಿಂಗ್ಸ್ ಆಡಿದರು. ಅವರು ಕೇವಲ 54 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ ಅದ್ಭುತ ಶತಕ ಗಳಿಸಿದರು. ಅವರನ್ನು ಹೊರತುಪಡಿಸಿ ದಿನೇಶ್ ಕಾರ್ತಿಕ್ ಮತ್ತೊಮ್ಮೆ ತಮ್ಮ ಫಿನಿಶರ್ ಶೈಲಿಯನ್ನು ಪ್ರದರ್ಶಿಸಿದರು ಮತ್ತು ಪಾಟಿದಾರ್ ಅವರೊಂದಿಗೆ 92 ರನ್ ಸೇರಿಸಿದರು.

ಇದನ್ನೂ ಓದಿ
Image
IPL 2022: ಕ್ರಿಕೆಟಿಗ ಶಿಖರ್ ಧವನ್​ಗೆ ತಂದೆಯಿಂದಲೇ ಮನಬಂದಂತೆ ಥಳಿತ! ಕಾರಣ ಸಿಂಪಲ್; ವಿಡಿಯೋ ನೋಡಿ
Image
ಆರ್​ಸಿಬಿಯಿಂದ ಅನಿರೀಕ್ಷಿತ ಕರೆ; ಐಪಿಎಲ್​ಗಾಗಿ ತನ್ನ ಮದುವೆಯನ್ನೇ ಮುಂದೂಡಿದ ರಜತ್ ಮ್ಯಾರೇಜ್​ ಸ್ಟೋರಿಯಿದು

ಇದನ್ನೂ ಓದಿ:IPL 2022: ಕ್ರಿಕೆಟಿಗ ಶಿಖರ್ ಧವನ್​ಗೆ ತಂದೆಯಿಂದಲೇ ಮನಬಂದಂತೆ ಥಳಿತ! ಕಾರಣ ಸಿಂಪಲ್; ವಿಡಿಯೋ ನೋಡಿ

ಮಳೆಯಿಂದ ತಡವಾಗಿ ಆರಂಭ

ಮೊದಲ ಕ್ವಾಲಿಫೈಯರ್‌ನಲ್ಲಿ ಮಳೆಗೆ ಯಾವುದೇ ತೊಂದರೆಯಾಗಲಿಲ್ಲ, ಆದರೆ ಈ ಬಾರಿ ಮಳೆಯಿಂದಾಗಿ ಸುಮಾರು 40 ನಿಮಿಷಗಳ ಕಾಲ ತಡವಾಗಿ ಪಂದ್ಯ ಪ್ರಾರಂಭವಾಯಿತು. ಟಾಸ್ ಸೋತ ಬೆಂಗಳೂರು ಬ್ಯಾಟಿಂಗ್​ಗೆ ಇಳಿದು ಮೊದಲ ಓವರ್​ನಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ (0) ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಕೊಹ್ಲಿ ಮತ್ತು ಪಾಟಿದಾರ್ ಇನ್ನಿಂಗ್ಸ್ ನಿಭಾಯಿಸಿದರು. ಪಾಟಿದಾರ್ ಹೆಚ್ಚು ಆಕ್ರಮಣಕಾರಿಯಾಗಿ, ಕೃನಾಲ್ ಪಾಂಡ್ಯ ಅವರ ಸತತ ಎಸೆತಗಳಲ್ಲಿ ಆರನೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ (25) ಜೊತೆ ಪಾಟಿದಾರ್ 66 ರನ್ ಸೇರಿಸಿದರು. ಕೊಹ್ಲಿ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಹಿಪಾಲ್ ಲೊಮೊರ್ ಬೇಗನೆ ಔಟಾದರು.

ಇದಾದ ಬಳಿಕ ಕ್ರೀಸ್​ಗೆ ಬಂದ ದಿನೇಶ್ ಕಾರ್ತಿಕ್ ಎರಡು ರನ್​ಗಳಲ್ಲಿ ಪಡೆದ ಜೀವದಾನದ ಸಂಪೂರ್ಣ ಲಾಭ ಪಡೆದು ಬೌಂಡರಿಗಳ ಮಳೆಗರೆದರು. ಮತ್ತೊಂದೆಡೆ ಪಾಟಿದಾರ್ ಕೂಡ ಅದ್ಭುತ ಬ್ಯಾಟಿಂಗ್ ಮುಂದುವರಿಸಿದರು. ಅವರು 16ನೇ ಓವರ್‌ನಲ್ಲಿ ಬಿಷ್ಣೋಯ್ ಅವರನ್ನು ಗುರಿಯಾಗಿಸಿಕೊಂಡು ಓವರ್‌ನಿಂದ 3 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಪಾಟಿದಾರ್ 17ನೇ ಓವರ್‌ನಲ್ಲಿ ಮೊಹ್ಸಿನ್ ಎಸೆತದಲ್ಲಿ ಸಿಕ್ಸರ್‌ನೊಂದಿಗೆ ಕೇವಲ 49 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು. ಇವರಿಬ್ಬರೂ ಕೇವಲ 41 ಎಸೆತಗಳಲ್ಲಿ 92 ರನ್‌ಗಳ ಅಜೇಯ ಜೊತೆಯಾಟ ನೀಡಿ ತಂಡವನ್ನು 207 ರನ್‌ಗಳಿಗೆ ಕೊಂಡೊಯ್ದರು. ಕಾರ್ತಿಕ್ 23 ಎಸೆತಗಳಲ್ಲಿ 37 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

ಲಕ್ನೋ ಇನ್ನಿಂಗ್ಸ್ ಹೀಗಿತ್ತು

ಬೃಹತ್ ರನ್ ಬೆನ್ನತ್ತಿದ ಲಕ್ನೋ ಆರಂಭದಲ್ಲೇ ಡಿ ಕಾಕ್ ವಿಕೆಟ್ ಕಳೆದುಕೊಂಡಿತು. ನಾಯಕ ಕೆಎಲ್ ರಾಹುಲ್ ಅಮೋಘ ಇನ್ನಿಂಗ್ಸ್ ಆಡಿದರು. ಅವರು 58 ಎಸೆತಗಳಲ್ಲಿ 79 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇದೇ ವೇಳೆ ರಾಹುಲ್ 5 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು. ಲಕ್ನೋದ ಆರಂಭಿಕ ಜೋಡಿ ಕೂಡ ಬೆಂಗಳೂರಿನಷ್ಟೇ ವೇಗವಾಗಿ ಬೇರೆ ಬೇರೆಯಾಯಿತು. ಮೊದಲ ಓವರ್​ನ ಅಂತಿಮ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಔಟಾದರು. ನಂತರ ಬಂದ ಮನನ್ ವೋಹ್ರಾ 11 ಎಸೆತಗಳಲ್ಲಿ 19 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಈ ನಡುವೆ 2 ಸಿಕ್ಸರ್ ಸಿಡಿಸಿದರು.

ಕೆಎಲ್ ರಾಹುಲ್ ಜೊತೆ ದೀಪಕ್ ಹೂಡಾ ಉತ್ತಮ ಜೊತೆಯಾಟವಾಡಿದರು. ಆದರೆ ಹಸರಂಗ ಅವರ ಚೆಂಡನ್ನು ಗುರುತಿಸುವಲ್ಲಿ ವಿಫಲರಾಗಿ ಹೂಡಾ ಕ್ಲೀನ್ ಬೌಲ್ಡ್ ಆದರು. ಅವರು 26 ಎಸೆತಗಳಲ್ಲಿ 45 ರನ್ ಗಳಿಸಿದರು. ಮಾರ್ಕಸ್ ಸ್ಟೊಯಿನಿಶ್ 9 ಎಸೆತಗಳಲ್ಲಿ 9 ರನ್ ಗಳಿಸಿದರು. ನಂತರ ನಾಯಕನ ಆಟವಾಡುತ್ತಿದ್ದ ನಾಯಕ ರಾಹುಲ್ ಹ್ಯಾಝೇಲ್​ವುಡ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರೆ, ಅದೇ ಓವರ್​ನಲ್ಲೇ ಕೃನಾಲ್ ಪಾಂಡ್ಯ ಶೂನ್ಯಕ್ಕೆ ಔಟಾದರು. ಹೀಗಾಗಿ ಕೊನೆಯ ಓವರ್​ನಲ್ಲಿ ಬೇಕಾಗಿದ್ದ 24 ರನ್ ಬೆನ್ನಟ್ಟುವಲ್ಲಿ ಲಕ್ನೋ ಯಶಸ್ವಿಯಾಗಲಿಲ್ಲ. ಚಮೀರ ಸಿಕ್ಸರ್ ಬಾರಿಸಿದರಾದರೂ ರನ್ ಗುರಿ ತಲುಪಲಾಗಲಿಲ್ಲ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್