ಆರ್​ಸಿಬಿಯಿಂದ ಅನಿರೀಕ್ಷಿತ ಕರೆ; ಐಪಿಎಲ್​ಗಾಗಿ ತನ್ನ ಮದುವೆಯನ್ನೇ ಮುಂದೂಡಿದ ರಜತ್ ಮ್ಯಾರೇಜ್​ ಸ್ಟೋರಿಯಿದು

Rajat Patidar: ರಜತ್ ಪಾಟಿದಾರ್ ಮತ್ತು ಅವರ ಕುಟುಂಬದವರು ಮದುವೆಯ ತಯಾರಿಯಲ್ಲಿ ನಿರತರಾಗಿದ್ದರು. ಇತ್ತ ಕಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಲವನೀತ್ ಸಿಸೋಡಿಯಾ ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಹಾಗಾಗಿ ಅವರ ಸ್ಥಾನಕ್ಕೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಯಿತು.

ಆರ್​ಸಿಬಿಯಿಂದ ಅನಿರೀಕ್ಷಿತ ಕರೆ; ಐಪಿಎಲ್​ಗಾಗಿ ತನ್ನ ಮದುವೆಯನ್ನೇ ಮುಂದೂಡಿದ ರಜತ್ ಮ್ಯಾರೇಜ್​ ಸ್ಟೋರಿಯಿದು
ರಜತ್ ಪಾಟಿದಾರ್
Follow us
TV9 Web
| Updated By: ಪೃಥ್ವಿಶಂಕರ

Updated on:May 26, 2022 | 6:55 PM

ವೇಗದ ಬೌಲರ್‌ಗಳ ಭಯವಾಗಲೀ, ಸ್ಪಿನ್ನರ್‌ಗಳ ಮೇಲೆ ಕರುಣೆಯಾಗಲೀ ಇಲ್ಲ. ರಜತ್ ಪಾಟಿದಾರ್ (Rajat Patidar) ತಮ್ಮ ಬ್ಯಾಟ್‌ನಿಂದ ಲಕ್ನೋ ಸೂಪರ್‌ಜೈಂಟ್ಸ್‌ನ ಯಾವುದೇ ಬೌಲರ್‌ಗಳನ್ನು ದಂಡಿಸದೆ ಬಿಡಲಿಲ್ಲ. IPL 2022 ರ ಎಲಿಮಿನೇಟರ್ ಪಂದ್ಯದಲ್ಲಿ ರಜತ್ ಪಾಟಿದಾರ್ ಅದ್ಭುತ ಶತಕವನ್ನು ಗಳಿಸಿ ಆರ್​ಸಿಬಿಯ ಕಪ್ ಗೆಲ್ಲುವ ಕನಸಿಗೆ ರೆಕ್ಕೆ ಕಟ್ಟಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಈ ಶತಕದ ಇನ್ನಿಂಗ್ಸ್ ಆಧಾರದ ಮೇಲೆ ಮಹತ್ವದ ಗೆಲುವು ಸಾಧಿಸಿದೆ. ಇದೀಗ ಅವರು ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals ) ತಂಡವನ್ನು ಎದುರಿಸಲಿದ್ದಾರೆ. ಬುಧವಾರ ರಜತ್ ಪಾಟಿದಾರ್ ಅವರ ಬ್ಯಾಟಿಂಗ್ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಆದರೆ ಆರ್​ಸಿಬಿ ಗೆಲುವಿಗೆ ಕಾರಣರಾದ ರಜತ್​ರನ್ನು ಹರಾಜಿನಲ್ಲಿ ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ ಎಂಬುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ. ಆರ್​ಸಿಬಿ ಆಟಗಾರನ ಇಂಜುರಿಯಿಂದ ಅವಕಾಶ ಪಡೆದ ರಜತ್, ಈಗ ತಂಡದ ಪ್ರಮುಖ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ. ಪಾಟಿದಾರ್ ತನ್ನ ಪ್ರತಿಭೆಯಿಂದ ಎಲ್ಲರನ್ನು ಬೆರಗುಗೊಳಿಸಿದ್ದು ಒಂದು ಕಥೆಯಾದರೆ, ಅವರ ಮತ್ತೊಂದು ಕಥೆ ಅಭಿಮಾನಿಗಳನ್ನು ಆಶ್ಚರ್ಯಗೊಳಿಸುತ್ತದೆ. ಆರ್​ಸಿಬಿಯಿಂದ ಬಂದ ಅನಿರೀಕ್ಷಿತ ಕರೆಯಿಂದಾಗಿ ರಜತ್ ತಮ್ಮ ಮದುವೆಯನ್ನೇ ಮುಂದೂಡಿದ್ದ ಸಂಗತಿ ನಿಮಗಾರಿಗಾದರೂ ಗೊತ್ತ? ಹೌದು… ಇಂತಹ ಆಶ್ಚರ್ಯಕಾರಿ ಸಂಗತಿಯೊಂದು ಈಗ ಹೊರಬಿದ್ದಿದೆ.

ರಜತ್ ಪಾಟಿದಾರ್ ಕಥೆ ಯಾವ ಸಿನಿಮಾಕ್ಕೂ ಕಮ್ಮಿಯಿಲ್ಲ

ಫೆಬ್ರವರಿಯಲ್ಲಿ ನಡೆದ ಐಪಿಎಲ್ 2022 ಹರಾಜಿನಲ್ಲಿ ರಜತ್ ಪಾಟಿದಾರ್ ಮಾರಾಟವಾಗಿರಲಿಲ್ಲ. ಈ ವಿಷಯ ಪಾಟಿದಾರ್​ಗೆ ಸಾಕಷ್ಟು ಆಘಾತ ನೀಡಿತ್ತು. ತಮ್ಮ ಪ್ರತಿಭೆಗೆ ಐಪಿಎಲ್‌ನಂತಹ ವೇದಿಕೆ ಸಿಗಲಿಲ್ಲ ಎಂದು ರಜತ್ ನಿರಾಶರಾಗಿದ್ದರು. ಇದಾದ ನಂತರ ರಜತ್​ಗೆ ಮನೆಯವರೆಲ್ಲ ಸೇರಿ ಮದುವೆಯನ್ನು ನಿಶ್ಚಯಿಸಿದರು. ಮೇ ತಿಂಗಳಲ್ಲಿ ಕ್ರಿಕೆಟ್ ಇಲ್ಲದ ಕಾರಣ ಇದೇ ತಿಂಗಳು ರಜತ್ ಮದುವೆಯಾಗಬೇಕಿತ್ತು. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ರಜತ್ ಪಾಟಿದಾರ್ ಅವರ ತಂದೆ ಮನೋಹರ್ ಪಾಟಿದಾರ್ ಈ ಬಗ್ಗೆ ಮಾತನಾಡಿದ್ದು, ‘ನಾವು ರತ್ಲಾಮ್‌ನ ಹುಡುಗಿಯೊಂದಿಗೆ ರಜತ್ ಪಾಟಿದಾರ್ ಅವರ ಮದುವೆಯನ್ನು ನಿಗದಿಪಡಿಸಿದ್ದೇವು. ಮೇ 9ರಂದು ಆಕೆಯೊಂದಿಗೆ ರಜತ್ ಮದುವೆಯಾಗಬೇಕಿತ್ತು. ಇದಕ್ಕಾಗಿ ಇಂದೋರ್​ನಲ್ಲಿ ಹೋಟೆಲ್ ಕೂಡ ಬುಕ್ ಮಾಡಿದ್ದೆವು, ಒಂದು ಸಣ್ಣ ಫಂಕ್ಷನ್ ಕೂಡ ಏರ್ಪಡಿಸಿದ್ದೇವು. ಆದಾಗ್ಯೂ, ಅದರ ನಂತರ ಎಲ್ಲವೂ ಬದಲಾಯಿತು.

ಇದನ್ನೂ ಓದಿ
Image
IPL 2022: ಶತಕ ಬಾರಿಸಿದ್ದು ಪಾಟಿದಾರ್, ದಾಖಲೆ ಬರೆದಿದ್ದು RCB
Image
RR vs RCB Head to Head Records: ಫೈನಲ್ ರೇಸ್​ನಲ್ಲಿ ಗೆಲುವು ಯಾರಿಗೆ? ಹಿಂದಿನ ಪಂದ್ಯಗಳ ಅಂಕಿಅಂಶ ಹೇಳಿದ ಕಥೆಯಿದು
Image
LSG vs RCB Match Report: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಣಿದ ಲಕ್ನೋ; ಮುಂದಿನ ಎದುರಾಳಿ ರಾಜಸ್ಥಾನ

ಇದನ್ನೂ ಓದಿ:RCB vs RR, IPL 2022: 7 ವರ್ಷಗಳ ನಂತರ ಕ್ವಾಲಿಫೈಯರ್​ 2ಗೆ ಆರ್​ಸಿಬಿ! 2011ರ ಇತಿಹಾಸ ಮರುಕಳಿಸುತ್ತಾ?

ಆರ್‌ಸಿಬಿಯಿಂದ ರಜತ್ ಪಾಟಿದಾರ್‌ಗೆ ಕರೆ

ರಜತ್ ಪಾಟಿದಾರ್ ಮತ್ತು ಅವರ ಕುಟುಂಬದವರು ಮದುವೆಯ ತಯಾರಿಯಲ್ಲಿ ನಿರತರಾಗಿದ್ದರು. ಇತ್ತ ಕಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಲವನೀತ್ ಸಿಸೋಡಿಯಾ ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಹಾಗಾಗಿ ಅವರ ಸ್ಥಾನಕ್ಕೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸುದ್ದಿ ಕೇಳಿದ ರಜತ್ ಪಾಟಿದಾರ್ ಅವರ ಸಂತೋಷಕ್ಕೆ ಮಿತಿಯಿರಲಿಲ್ಲ. ನಂತರ ರಜತ್ ಐಪಿಎಲ್​ಗಾಗಿ ತಮ್ಮ ಮದುವೆಯನ್ನು ಮುಂದೂಡಿ IPL 2022 ರಲ್ಲಿ ಆಡಲು ನಿರ್ಧರಿಸಿದರು.

ರಜತ್ ಪಾಟಿದಾರ್ ಈ ಸೀಸನ್​ನ ತಮ್ಮ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 16 ರನ್ ಗಳಿಸಿದರು ಆದರೆ ಗುಜರಾತ್ ವಿರುದ್ಧ ಅವರ ಬ್ಯಾಟ್ 32 ಎಸೆತಗಳಲ್ಲಿ 52 ರನ್ ಗಳಿಸಿತು. ಇದರ ನಂತರ, ಹೈದರಾಬಾದ್ ವಿರುದ್ಧ ಅವರ ಬ್ಯಾಟ್‌ನಿಂದ 48 ರನ್ ಬಂದವು. ಗುಜರಾತ್ ಟೈಟಾನ್ಸ್ ವಿರುದ್ಧ ಅವರ ಸರದಿ ಬರಲಿಲ್ಲ, ಆದರೆ ಹೆಚ್ಚು ಒತ್ತಡವಿದ್ದ ಪಂದ್ಯದಲ್ಲಿ ಅವರ ಬ್ಯಾಟ್ ಶತಕ ಗಳಿಸಿತು. ರಜತ್ ಪಾಟಿದಾರ್ ಅವರು 6 ಇನ್ನಿಂಗ್ಸ್‌ಗಳಲ್ಲಿ 55 ಸರಾಸರಿಯಲ್ಲಿ 275 ರನ್ ಗಳಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ ಅವರ ಸ್ಟ್ರೈಕ್ ರೇಟ್ ಕೂಡ 156 ಕ್ಕಿಂತ ಹೆಚ್ಚಿದೆ. ವಾಸ್ತವವಾಗಿ ರಜತ್ ಪಾಟಿದಾರ್ ಅವರ ಈ ಕಥೆ ಯಾವ ಚಲನಚಿತ್ರಕ್ಕೂ ಕಡಿಮೆ ಇಲ್ಲ ಎಂಬುದು ಇಲ್ಲಿ ಗೋಚರಿಸುತ್ತದೆ.

Published On - 6:52 pm, Thu, 26 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ