Rajat Patidar: ನಿನ್ನೆಯ ಒಂದೇ ಪಂದ್ಯದಿಂದ ರಜತ್ ಪಟಿದಾರ್​ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ

IPL 2022 Eliminator, LSG vs RCB: ಆರ್​ಸಿಬಿಯ ಯಂಗ್ ಗನ್ ರಜತ್ ಪಟಿದಾರ್ (Rajat Patidar) ಲಖನೌ ಸೂಪರ್ ಜೇಂಟ್ಸ್ ವಿರುದ್ಧ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಈ ಒಂದೇ ಪಂದ್ಯದಿಂದ ಪಟಿದಾರ್ ಒಟ್ಟು ಎಷ್ಟು ಹಣ ಗಳಿಸಿದರು ಗೊತ್ತೇ?, ಇಲ್ಲಿದೆ ನೋಡಿ ಮಾಹಿತಿ.

Rajat Patidar: ನಿನ್ನೆಯ ಒಂದೇ ಪಂದ್ಯದಿಂದ ರಜತ್ ಪಟಿದಾರ್​ಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ
Rajat Patidar LSG vs RCB Eliminator
Follow us
TV9 Web
| Updated By: Vinay Bhat

Updated on:May 26, 2022 | 12:00 PM

ಕೋಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಲಖನೌ ಸೂಪರ್ ಜೇಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ನಡುವಣ ಎಲಿಮಿನೇಟರ್ ಪಂದ್ಯಕ್ಕೆ ಆರಂಭದಲ್ಲಿ ವರುಣ ಅಡ್ಡಿ ಪಡಿಸಿದ. ಆದರೆ, ಕೊಂಚ ತಡವಾಗಿ ಪಂದ್ಯ ಆರಂಭವಾಯಿತು. ಪಂದ್ಯ ಶುರುವಾದ ಬಳಿಕ ಬಂದಿದ್ದು ಆರ್​ಸಿಬಿ ಕಡೆಯಿಂದ ರನ್ ಮಳೆ ಮಾತ್ರ. ಅದರಲ್ಲೂ ಆರ್​ಸಿಬಿಯ ಯಂಗ್ ಗನ್ ರಜತ್ ಪಟಿದಾರ್ (Rajat Patidar) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಫಾಫ್, ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್​ಗೆ ಅಂದುಕೊಂಡ ರೀತಿ ಖೆಡ್ಡಾ ತೋಡಿದ ಎಲ್​ಎಸ್​ಜಿಗೆ (LSG) ಪಟಿದಾರ್ ಮೇಲೆ ಗಮನವೇ ಇರಲಿಲ್ಲ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಲಖನೌ ಬೌಲರ್​ಗಳ ಬೆಂಡೆತ್ತಿ ಬಿಟ್ಟರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಇವರು ಫೋರ್-ಸಿಕ್ಸರ್​ಗಳ ಮಳೆ ಸುರಿಸಿದರು. ಈ ಒಂದೇ ಪಂದ್ಯದಿಂದ ಪಟಿದಾರ್ ಒಟ್ಟು ಎಷ್ಟು ಹಣ ಗಳಿಸಿದರು ಗೊತ್ತೇ?, ಇಲ್ಲಿದೆ ನೋಡಿ ಮಾಹಿತಿ.

ಕೇವಲ 54 ಎಸೆತಗಳನ್ನು ಎದುರಿಸಿದ ರಜತ್ ಪಟಿದಾರ್ 12 ಫೋರ್ ಹಾಗೂ 7 ಅಮೋಘ ಸಿಕ್ಸರ್​ಗಳನ್ನು ಸಿಡಿಸಿ ಅಜೇಯ 112 ರನ್ ಚಚ್ಚಿದರು. ಈ ಮೂಲಕ ಆರ್​ಸಿಬಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ಮ್ಯಾನ್ ಆಫ್​ ದಿ ಮ್ಯಾಚ್​ನಲ್ಲಿ ಇವರಿಗೆ ಐದು ಲಕ್ಷ ರೂಪಾಯಿ ಒಲಿದು ಬಂತು.

ನಂತರ ಅನ್​ಅಕಾಡೆಮಿ ಕ್ರ್ಯಾಕಿಂಗ್ ಸಿಕ್ಸ್ ಸಿಡಿಸಿದ್ದಕ್ಕೆ ಒಂದು ಲಕ್ಷ, ರೂಪೇ ಆನ್​ ದಿ ಗೋ ಫೋರ್ಸ್​ಗೆ ಒಂದು ಲಕ್ಷ, ಅಪ್​ಸ್ಟಾಕ್ಸ್ ಮೋಸ್ಟ್ ವ್ಯಾಲ್ಯುವೇಬಲ್ ಅಸೆಟ್ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ, ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ ಹಾಗೂ ಪಂಚ್ ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ ರೂಪಾಯಿ ಬಾಜಿಕೊಂಡಿದ್ದಾರೆ. ಈ ಮೂಲಕ ಒಂದೇ ಪಂದ್ಯದಿಂದ ಇವರು ಬರೋಬ್ಬರಿ 10 ಲಕ್ಷ ರೂಪಾಯಿ ತಮ್ಮದಾಗಿಸಿದ್ದಾರೆ.

ಇದನ್ನೂ ಓದಿ
Image
Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ
Image
Rajat Patidar: ಪಟಿದಾರ್ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ
Image
LSG vs RCB Match Report: ಆರ್​ಸಿಬಿ ಸಾಂಘಿಕ ಹೋರಾಟಕ್ಕೆ ಮಣಿದ ಲಕ್ನೋ; ಮುಂದಿನ ಎದುರಾಳಿ ರಾಜಸ್ಥಾನ
Image
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್

Faf du Plessis: ಪಟಿದಾರ್ ಶತಕದ ಬಗ್ಗೆ ಖುಷಿ ತಾಳಲಾರದೆ ಫಾಪ್ ಡುಪ್ಲೆಸಿಸ್ ನೀಡಿದ ಹೇಳಿಕೆ ಏನು ಗೊತ್ತೇ?

ಈ ಪಂದ್ಯದಲ್ಲಿ ಮೂಡಿಬಂದ ಶತಕದಿಂದ ರಜತ್ ದಾಖಲೆ ಪುಟ ಕೂಡ ಸೇರಿಕೊಂಡರು. ಅದು ಒಂದಲ್ಲ ಎರಡಲ್ಲ ಐಪಿಎಲ್​ನಲ್ಲಿ ಬರೋಬ್ಬರಿ ಐದು ವಿಶೇಷ ಸಾಧನೆ ಮಾಡಿದರು. ಐಪಿಎಲ್ ಇತಿಹಾಸದ ಪ್ಲೇ ಆಫ್ ಪಂದ್ಯದಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ ಕೆಲವೇ ಕೆಲವು ಬ್ಯಾಟರ್​​ಗಳ ಸಾಲಿಗೆ ಇವರು ಕೂಡ ಸೇರ್ಪಡೆಗೊಂಡಿದ್ದಾರೆ.

ಅಂತೆಯೆ ಆರ್​ಸಿಬಿ ಪರ ಪ್ಲೇಆಫ್​ನಲ್ಲಿ ಶತಕ ಸಿಡಿಸಿದ ಮೊಟ್ಟ ಮೊದಲ ಬ್ಯಾಟ್ಸ್​ಮನ್​ ಇವರಾಗಿದ್ದಾರೆ. ಜೊತೆಗೆ ಐಪಿಎಲ್ ಪ್ಲೇ ಆಫ್​ನಲ್ಲಿ ಶತಕ ಗಳಿಸಿದ 5ನೇ ಆಟಗಾರ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಕೂಡ ಮಾಡಿದ್ದಾರೆ. ಇವೆಲ್ಲದರ ನಡುವೆ ಐಪಿಎಲ್​ ಇತಿಹಾಸದಲ್ಲಿ ಸೆಂಚುರಿ ಸಿಡಿಸಿದ 4ನೇ ಅನ್​ಕ್ಯಾಪ್ ಪ್ಲೇಯರ್ ರಜತ್ ಪಟಿದಾರ್ ಆಗಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ರಜತ್ ಅವರನ್ನು ಐಪಿಎಲ್ 2022 ಹರಾಜಿನಲ್ಲಿ ಯಾವೊಂದು ತಂಡ ಖರೀದಿ ಮಾಡಿರಲಿಲ್ಲ. ಟೂರ್ನಿ ಆರಂಭವಾದ ಬಳಿಕ ಲವಿತ್ ಸಿಸ್ನೋಡಿಯಾ ಗಾಯಾಕ್ಕೆ ತುತ್ತಾದ ಪರಿಣಾಮ ಇವರ ಬದಲು ಆರ್‌ಸಿಬಿ ತಂಡವನ್ನು ರಜತ್ ಸೇರಿಕೊಂಡರು. ಆದರೆ, ಇವರು ಈ ಮಟ್ಟಿಗೆ ಬ್ಯಾಟಿಂಗ್ ಆಡಿ ತಂಡದ ಗೆಲುವಿಗೆ ಮುಖ್ಯ ಕೊಡುಗೆ ನೀಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಪಟಿದಾರ್, “ನಾನು ಬಾಲ್​ಗೆ ಟೈಮ್ ಮಾಡುವಾಗ ನನ್ನ ಗಮನ ಪೂರ್ತಿ ಅದರ ಮೇಲೆ ಮಾತ್ರ ಇರುತ್ತಿತ್ತು. ಪವರ್ ಪ್ಲೇಯ ಕೊನೆಯ ಓವರ್​​ ಅನ್ನು ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡಿದಾಗ ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಹಾಗೂ ಆತ್ಮವಿಶ್ವಾಸದಿಂದ ಇದ್ದೆ. ಈ ವಿಕೆಟ್ ಮಾತ್ರ ಅದ್ಭುತವಾಗಿತ್ತು. ಅದಕ್ಕಾಗಿ ನನಗೆ ಕೆಲ ಅತ್ಯುತ್ತಮ ಹೊಡೆತ ಸಿಡಿಸಲು ಕಾರಣವಾಯಿತು,” ಎಂದು ಹೇಳಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:00 pm, Thu, 26 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್